Homes Distribute: ಬೆಂಗಳೂರಿನಲ್ಲಿ ಶೀಘ್ರವೇ ಇವರಿಗೆ ಸಿಂಗಲ್ ಬೆಡ್ ರೂಂ ಮನೆ ಹಂಚಿಕೆ-ಯಾವ್ಯಾವ ಭಾಗಗಳಲ್ಲಿ ಮನೆಗಳ ನಿರ್ಮಾಣ?

ಬೆಂಗಳೂರು, ಸೆಪ್ಟೆಂಬರ್‌, 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸ ಮಾಡುಸುತ್ತಿರುವ ವಸತಿ ಹೊಂದಿಲ್ಲದ ಬಡಜನರಿಗೆ ಶೀಘ್ರದಲ್ಲೇ ಮನೆ ಹಂಚಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ಮಂದಿಗೆ ವಿತರಣೆ ಮಾಡಲಾಗುತ್ತದೆ ಹಾಗೂ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಆರ್ಥಿಕವಾಗಿ ಹಿಂದುಳಿದ ವಸತಿ ಹೊಂದಿಲ್ಲದ ಬಡವರಿಗೆ ಬೆಂಗಳೂರು ಸುತ್ತಮುತ್ತ ಮುಖ್ಯಮಂತ್ರಿಗಳ ಬಹು ಮಹಡಿ ವಸತಿ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ ಸಿಂಗಲ್ ಬೆಡ್ ರೂಂನ ಸುಮಾರು 4000 ಫ್ಲ್ಯಾಟ್, ಮನೆಗಳು ಸಿದ್ಧವಾಗಿದ್ದು, ಮೂರ್ನಾಲ್ಕು ತಿಂಗಳಲ್ಲಿ ವಾಸಕ್ಕೆ ಲಭ್ಯ ಆಗಲಿವೆ.

Single-Bedroom Homes to be Distributed to homeless poor people in Bengaluru know details

ನೀರಿನ ಸಂಪರ್ಕ, ವಿದ್ಯುತ್ ಸೇರಿದಂತೆ ಹಲವು ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದ್ದು, ಎಲ್ಲವನ್ನು ಪೂರ್ಣಗೊಳಿಸಿ ನಿಗದಿತ ಶುಲ್ಕ ಪಾವತಿಸುವ ಅರ್ಜಿದಾರರಿಗೆ ಫ್ಲ್ಯಾಟ್ ಬೀಗ ಹಸ್ತಾಂತರಿಸಲು ವಸತಿ ನಿಗಮ ನಿರ್ಧರಿಸಿದೆ.

ಎಲ್ಲೆಲ್ಲಿ ವಸತಿಗಳ ನಿರ್ಮಾಣ?: ಮಹದೇವಪುರ, ಆನೇಕಲ್, ಯಲಹಂಕ, ಬೆಂಗಳೂರು ದಕ್ಷಿಣ, ದಾಸರಹಳ್ಳಿ, ಕೆಆರ್ ಪುರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಪೂರ್ಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು. ಈ ಯೋಜನೆಗೆ ಸರ್ಕಾರದಿಂದಲೇ ಜಮೀನು ನೀಡಲಾಗಿದೆ. ಮೂಲ ಸೌಕರ್ಯ ಸೇರಿ ಫ್ಲ್ಯಾಟ್ ದರ 11.20 ಲಕ್ಷ ರೂಪಾಯಿ ನಿಗದಿ ಮಾಡಿದ್ದು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಸರ್ಕಾರದಿಂದ 3.50 ಲಕ್ಷ ರೂಪಾಯಿ ಸಬ್ಸಿಡಿ, ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

ಮುಂಗಡವಾಗಿ ಫ್ಲ್ಯಾಟ್ ಬುಕ್ ಮಾಡಿ ಮುಂಗಡ ಠೇವಣಿ ಇಟ್ಟಿರುವ ಅರ್ಜಿದಾರರಿಗೆ ರಾಜ್ಯ ಸರ್ಕಾರ ಮತ್ತೆ ಒಂದು ಲಕ್ಷ ರೂಪಾಯಿ ಕಡಿತಗೊಳಿಸಿದ್ದು, ಫ್ಲ್ಯಾಟ್ ದರ ಅಂತಿಮವಾಗಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರಿಗೆ 6.7 ಲಕ್ಷ ರೂಪಾಯಿ, ಸಾಮಾನ್ಯ ವರ್ಗದವರಿಗೆ 7.50 ಲಕ್ಷ ರೂಪಾಯಿ ಆಗಲಿದೆ. ಅರ್ಜಿದಾರರು ಪಡಿತರ ಚೀಟಿ, ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮಿತಿಯಲ್ಲಿರಬೇಕು. ಯೋಜನೆಯಲ್ಲಿ ಒಟ್ಟು 46,499 ಮನೆಗಳನ್ನು ನಿರ್ಮಿಸಲಾಗುವುದು.

ಬೆಂಗಳೂರಿನಲ್ಲಿ ನಮ್ಮ ರಾಜ್ಯದವರೇ ಎಷ್ಟೋ ಜನರು ಮನೆಯಿಲ್ಲದೇ ಬೀದಿಗಳಲ್ಲಿ ಜೀವನ ಮಾಡುತ್ತಿರುವ ಉದಾಹರಣೆಳಿವೆ. ಪುಟ್‌ ಪಾತ್‌, ರಾಜಕಾಲುವೆಗಳ ಮೇಲೆ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದು, ಮಳೆಗಾಲದಲ್ಲಿ ಇವರ ಜೀವನ ಹೇಳತೀರದಾಗಿರುತ್ತದೆ. ಇದೀಗ ಸರ್ಕಾರ ಇಂತಹವರ ಕಡೆಗೂ ಗಮನಹರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+