ಸಿಲ್ಕ್‌ಬೋರ್ಡ್- ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿ ಎಲ್ಲಿವರೆಗೆ ಬಂದಿದೆ? ಯಾವಾಗ ಮುಗಿಯುತ್ತೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಪ್ರಮುಖವಾಗಿ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ದೊರೆತದ್ದು, ಇದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕು. ಈ ವಿಚಾರದ ಕುರಿತು 'ಪ್ರಜಾವಾಣಿ' ವಿಶೇಷ ವರದಿಯನ್ನು ಮಾಡಿದೆ.
ಸಿಲ್ಕ್‌ಬೋರ್ಡ್ - ವಿಮಾನ ನಿಲ್ದಾಣ ನಡುವಿನ ಮೆಟ್ರೋ ಮಾರ್ಗದ ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಸಿಲ್ಕ್‌ಬೋರ್ಡ್‌ನಿಂದ ಕೆ. ಆರ್. ಪುರಂ ವರಗೆ, ಎರಡನೇ ಹಂತದಲ್ಲಿ ಕೆ. ಆರ್. ಪುರಂನಿಂದ ವಿಮಾನ ನಿಲ್ದಾಣದವರೆಗೆ ನಡೆಯಲಿದೆ.
ಈ ಕುರಿತು 'ಪ್ರಜಾವಾಣಿ' ಜೊತೆ ಮಾತನಾಡಿರುವ ಬಿಎಂಆರ್‌ಸಿಎಲ್ ಎಂ.ಡಿ. ಅಂಜುಂ ಪರ್ವೇಜ್, ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್. ಪುರಂ ನಡುವಿನ ಮಾರ್ಗದ ಕಾಮಗಾರಿ 2024ರ ಕೊನೆಯಲ್ಲಿ ಪೂರ್ಣಗೊಳ್ಳಲಿದೆ. ಕೆ.ಆರ್.ಪುರಂ ನಿಂದ ವಿಮಾನ ನಿಲ್ದಾಣದ ವರೆಗಿನ ಮಾರ್ಗದ ಕಾಮಗಾರಿ 2025ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಹೃದಯ ಭಾಗದಿಂದ 35 ರಿಂದ 40 ಕಿಮೀ ದೂರದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾಣ ನಿಲ್ದಾಣಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿದೆ. ಆದ್ದರಿಂದ, ಈ ನಿಲ್ದಾಣಕ್ಕೆ ಮೆಟ್ರೋ ಒದಗಿಸಬೇಕೆಂದು ಜನರ ಬಹುದಿನದ ಬೇಡಿಕೆಯಾಗಿದೆ.
ಸಿಲ್ಕ್‌ಬೋರ್ಟ್ ಹಾಗೂ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗವು ನೀಲಿ 38.44 ಕಿಮೀ ದೂರವನ್ನು ಹೊಂದಿದೆ. ಈ ಮಾರ್ಗದಲ್ಲಿ ಬರುವ ಒಟ್ಟು ನಿಲ್ದಾಣಗಳ ಸಂಖ್ಯೆ 30. ಇದಕ್ಕೆ 14, 788 ಕೋಟಿ ರೂಪಾಯಿ ವ್ಯಯವಾಗಲಿದೆ. ಈಗ ಶೇ 21.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗವು ಸಂಪೂರ್ಣವಾಗಿ ಎಲಿವೇಟರ್ ಮಾರ್ಗವಾಗಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಈ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ರಸ್ತೆ ವಿಭಜಕ ಹಾಗೂ ರಸ್ತೆ ಬದಿಯಲ್ಲಿ ನಿರ್ಮಾಣವಾಗುತ್ತಿರುವ ಮಾರ್ಗಕ್ಕೆ ಸರ್ಕಾರಿ ಹಾಗೂ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಲ್ಲರ್‌ಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕೆಲವಡೆ ಪಿಲ್ಲರ್‌ಗಳಿಗೆ ಕ್ಯಾಪ್‌ಗಳನ್ನು ಹಾಕಲಾಗಿದೆ. ಸಿಲ್ಕ್‌ಬೋರ್ಟ್ ಹಾಗೂ ಕೆ.ಆರ್.ಪುರಂ ನಡುವಿನ ಕಾಮಗಾರಿಯು ವೇಗವಾಗಿ ಸಾಗುತ್ತಿದೆ. ಕಾರಣ ಇದು ಹೊರ ವರ್ತುಲ ರಸ್ತೆಯಾಗಿರುವುದರಿಂದ ಅಡೆತಡೆಗಳು ಕಡಿಮೆ ಇದೆ.
ಸಿಲ್ಕ್‌ಬೋರ್ಡ್ ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣದ ನಡುವಿನ ಮೆಟ್ರೋ ನಿಲ್ದಾಣಗಳು
ಸಿಲ್ಕ್ ಬೋರ್ಡ್
ಎಚ್‌ಎಸ್‌ಆರ್ ಬಡಾವಣೆ (ವೆಂಕಟಾಪುರ)
ಅಗರ
ಇಬ್ಬಲೂರು
ಬೆಳ್ಳಂದೂರು
ಕಾಡುಬೀಸನಹಳ್ಳಿ
ಕೋಡುಬೀಸನಹಳ್ಳಿ (ದೇವರಬೀಸನಹಳ್ಳಿ)
ಮಾರತ್ತಹಳ್ಳಿ
ಇಸ್ರೊ
ದೊಡ್ಡನೆಕ್ಕುಂದಿ
ಡಿಆರ್‌ಡಿಒ ಸಂಕೀರ್ಣ
ಸೀತಾರಾಮ ಪಾಳ್ಯ (ಸರಸ್ವತಿ ನಗರ)
ಕೆ.ಆರ್. ಪುರ
ಕಸ್ತೂರಿ ನಗರ
ಹೊರಮಾವು
ಎಚ್‌ಆರ್‌ಬಿಆರ್ ಬಡಾವಣೆ
ಕಲ್ಯಾಣ ನಗರ
ಎಚ್‌ಬಿಆರ್ ಬಡಾವಣೆ
ನಾಗವಾರ
ವೀರಣ್ಣ ಪಾಳ್ಯ
ಕೆಂಪಾಪುರ
ಹೆಬ್ಬಾಳ
ಕೊಡಿಗೆಹಳ್ಳಿ
ಜಕ್ಕೂರು ಅಡ್ಡರಸ್ತೆ
ಯಲಹಂಕ
ಬಾಗಲೂರು ಅಡ್ಡರಸ್ತೆ
ಬೆಟ್ಟಹಲಸೂರು
ದೊಡ್ಡಜಾಲ
ವಿಮಾನ ನಿಲ್ದಾಣ ನಗರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ












Click it and Unblock the Notifications