ಮೌನ ಮುರಿದ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಬಗ್ಗೆ ಹೇಳಿದ್ದೇನು?
Recommended Video

ಬೆಂಗಳೂರು, ಸೆಪ್ಟೆಂಬರ್ 18: ಅಕ್ಟೋಬರ್ 3 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರ ಸುಭದ್ರವಾಗಿದೆ, ಯಾರ ರಕ್ಷಣೆಯೂ ಅಗತ್ಯವಿಲ್ಲ, ಸಚಿವಾಕಾಂಕ್ಷಿಗಳು ಸಾಕಷ್ಟಿದ್ದಾರೆ, ಅದರಲ್ಲಿ ತಪ್ಪೇನು? ಅ.3ರಂದು ಮೇಲ್ಮನೆಗೆ ಚುನಾವಣೆ ಇದೆ, ಅದರ ನಂತರ ಯಾವುದೇ ಕ್ಷಣದಲ್ಲಾದರೂ ಸಂಪುಟ ವಿಸ್ತರಣೆಯಾಗಬಹುದು. ಸಮನ್ವಯ ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ ಕೊನೆಯವಾರದಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಿದ್ದು ನಿಜ ಎಂದರು.

ಕಾಂಗ್ರೆಸ್ ಶಾಸಕರು ಶಿಸ್ತಿನ ಸಿಪಾಯಿಗಳು. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧ. ಸಮಸ್ಯೆ ಆಗಿದ್ದರೆ ಪರಿಹಾರ ಆಗಿದೆ ಎಂದು ಹೇಳಬಹುದಿತ್ತು. ಯಾವುದೇ ಸಮಸ್ಯೆಗಳಿಲ್ಲ, ಕಾಂಗ್ರೆಸ್ ನಲ್ಲಿ ಎಲ್ಲಿದೆ ಸಮಸ್ಯೆ ಎಂದು ಪ್ರಶ್ನಿಸಿದರು.
ಯಾರೂ ಕಾಂಗ್ರೆಸ್ ಬಿಡಲ್ಲ, ಯಾರೂ ರಾಜಿನಾಮೆ ನೀಡಲ್ಲ, ಎಂಬಿ ಪಾಟೀಲ್ ಕೂಡ ಸಚಿವ ಸ್ಥಾನ ಕೇಳ್ತಿದ್ದಾರೆ ಅದರಲ್ಲಿ ತಪ್ಪೇನಿಲ್ಲ, ಬಿಜೆಪಿ ಆಮಿಷದ ಬಗ್ಗೆ ನಮ್ಮ ಶಾಸಕರೇ ಹೇಳಿದ್ದಾರೆ.
ಅಧಿಕಾರದ ಆಸೆಯಿಂದ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದಾರೆ.ಬಿಸಿ ಪಾಟೀಲ್, ಎಎಸ್ ಶಿವಳ್ಳಿಗೆ ಆಮಿಷ ಒಡ್ಡಿದ್ದಾರೆ. ಆದರೆ ನಮ್ಮ ಪಕ್ಷದವರು ಶಿಸ್ತಿನ ಸಿಪಾಯಿಗಳು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಿಂಗ್ ಪಿನ್ ಯಾರು ಎಂದು ಕುಮಾರಸ್ವಾಮಿಯನ್ನು ಕೇಳಿ ನನಗೇನು ಗೊತ್ತು, ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುವುದಿಲ್ಲ, ಆರು ಪರಿಷತ್ ಸ್ಥಾನಕ್ಕೆ ಆಯ್ಕೆ ಮಾಡಲು ಚರ್ಚಿಸುತ್ತೇವೆ, ಸಂಪುಟ ವಿಸ್ತರಣೆ ಸೂಕ್ತ ಕಾಲದಲ್ಲಿ ಮಾಡುತ್ತೇವೆ, ಕಾಂಗ್ರೆಸ್ ಶಾಸಕರು ಮುಂಬೈಗೆ ಹೋಗುತ್ತಾರೆಂಬುದು ಸುಳ್ಳುಸುದ್ದಿ ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದರು.












Click it and Unblock the Notifications