ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?

ಬೆಂಗಳೂರು, ಜುಲೈ.23: ಕೊರೊನಾವೈರಸ್ ಸೋಂಕು ನಿರ್ವಹಣೆಗೆ ಉಪಕರಣಗಳ ಖರೀದಿಸಲು 324 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳುತ್ತಿದೆ. ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ನೀಡಿರುವ ಮಾಹಿತಿ ಶುದ್ಧ ಸುಳ್ಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂಷಿಸಿದ್ದಾರೆ.

Recommended Video

      2000Cr Covid scam by Yediyurappa Govt : Siddaramaiah | Oneindia Kannada

      ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದು, ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಒಟ್ಟು ಮೊತ್ತ 4167 ಕೋಟಿ ರೂಪಾಯಿ ಆಗಿದ್ದು, ಈ ಪೈಕಿ 2000 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಉಭಯ ನಾಯಕರು ಆರೋಪಿಸಿದ್ದಾರೆ.

      ಇನ್ನು ಕೊರೊನಾವೈರಸ್ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ಇಲಾಖೆಗಳಷ್ಟೇ ಅಲ್ಲದೇ ಜಿಲ್ಲಾಡಳಿತದ ಮಟ್ಟದಲ್ಲಿ ಅಧಿಕಾರಿಗಳು ಕೂಡಾ ಹಣವನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಹಾಗಿದ್ದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಯಾವ ಯಾವ ಇಲಾಖೆಗಳಲ್ಲಿ ಕೊವಿಡ್-19 ನಿರ್ವಹಣೆಗಾಗಿ ಎಷ್ಟು ಹಣ ಖರ್ಚು ಮಾಡಿದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.

      Siddaramaiah Releases Details Of Karnataka Govt Department-Wise Covid-19 Expenses


      ಕೊವಿಡ್-19 ನಿರ್ವಹಣೆಗೆ ಇಲಾಖಾವಾರು ಖರ್ಚು:

      ಆರೋಗ್ಯ ಇಲಾಖೆ - 700 ಕೋಟಿ ರೂಪಾಯಿ

      ಬಿಬಿಎಂಪಿ, ನಗರ, ಸ್ಥಳೀಯ ಸಂಸ್ಥೆಗಳು - 200 ಕೋಟಿ ರೂಪಾಯಿ

      ವೈದ್ಯಕೀಯ ಶಿಕ್ಷಣ ಇಲಾಖೆ - 815 ಕೋಟಿ ರೂಪಾಯಿ

      ಜಿಲ್ಲಾಡಳಿತಗಳಿಗೆ ನೀಡಿರುವ ಎಸ್ ಡಿಆರ್ಎಫ್ ಹಣ - 742.32 ಕೋಟಿ ರೂಪಾಯಿ

      ಕಾರ್ಮಿಕ ಇಲಾಖೆ ಸುಮಾರು - 1,000 ಕೋಟಿ ರೂಪಾಯಿ

      ಸಮಾಜ ಕಲ್ಯಾಣ, ಆಹಾರ, ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಳಗೊಂಡಂತೆ ಇಲಾಖೆಗಳು - 500 ಕೋಟಿ ರೂಪಾಯಿ

      ಕೊವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ ದಿಂಬು ಖರೀದಿ - 160 ಕೋಟಿ ರೂಪಾಯಿ

      ಕೇಂದ್ರ ಸರ್ಕಾರವು ಖರೀದಿಸಿ ಸರಬರಾಜು ಮಾಡಿರುವ ಉಪಕರಣಗಳು ಮೌಲ್ಯ - 50 ಕೋಟಿ ರೂಪಾಯಿ

      ಕೊವಿಡ್ ನಿರ್ವಹಣೆಗೆ ಇದುವರೆಗೂ ಖರ್ಚು ಮಾಡಿರುವ ಒಟ್ಟು ವೆಚ್ಚ - 4167 ಕೋಟಿ ರೂಪಾಯಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+