ಪ್ರತಿಭಟನೆಯಲ್ಲಿ ಭಾಗವಹಿಸಿ ವಿಪಕ್ಷ ಸಿದ್ದರಾಮಯ್ಯ ರೈತರಿಗೆ ಕೊಟ್ಟ ಭರವಸೆ ಏನು?

ಬೆಂಗಳೂರು.

ಡಿ.
10:
ರೈತ
ವಿರೋಧಿ
ಕಾನೂನುಗಳನ್ನು
ಕೇಂದ್ರ
ಸರ್ಕಾರ
ಜಾರಿಗೆ
ತರುತ್ತಿದೆ
ಎಂದು
ಆರೋಪಿಸಿ
ವಿಧಾನಸೌಧದಿಂದ
ಫ್ರೀಡಂ
ಪಾರ್ಕ್‌ವರೆಗೆ
ವಿರೋಧ
ಪಕ್ಷದ
ನಾಯಕ
ಸಿದ್ದರಾಮಯ್ಯ
ಅವರ
ನೇತೃತ್ವದಲ್ಲಿ
ಕಾಂಗ್ರೆಸ್
ನಾಯಕರು
ಪಾದಯಾತ್ರೆ
ನಡೆಸಿದರು.
ಫ್ರೀಡಂ
ಪಾರ್ಕ್‌ನಲ್ಲಿ
ಪ್ರತಿಭಟನೆ
ನಡೆಸುತ್ತಿರುವ
ರೈತರಿಗೆ
ಬೆಂಬಲವನ್ನು
ಕೊಟ್ಟರು.
ಅದೇ
ಸಂದರ್ಭದಲ್ಲಿ
ರೈತ
ವಿರೋಧಿ
ಮಸೂದೆಗಳ
ಪ್ರತಿಗಳಿಗೆ
ಸಿದ್ದರಾಮಯ್ಯ
ಅವರು
ಬೆಂಕಿ
ಹಚ್ಚಿ
ಪ್ರತಿಭಟಿಸಿ
ತಮ್ಮ
ಆಕ್ರೋಶ
ವ್ಯಕ್ತಪಡಿಸಿದರು.

id="toptextpromo">
id='are-slot-1'
class='oiad
oi-axt
oiadv'>

ವಿಧಾನಸೌಧದಲ್ಲಿ

ನಡೆದ
ಕಾಂಗ್ರೆಸ್
ಶಾಸಕಾಂಗ
ಪಕ್ಷದ
ಸಭೆಯಲ್ಲಿ
ಮೊದಲೇ
ನಿರ್ಧರಿಸಿದಂತೆ
ವಿಧಾನಸಭೆ
ಕಲಾಪ
ಬಹಿಷ್ಕರಿಸಿ
ರೈತರ
ಪ್ರತಿಭಟನೆಗೆ
ಬೆಂಬಲ
ಕೊಡಲು
ತೀರ್ಮಾನ
ಮಾಡಲಾಯಿತು.
ಅದರಂತೆ
ವಿಧಾನಸೌಧದಿಂದ
ಪಾದಯಾತ್ರೆ
ಮೂಲಕ
ಫ್ರೀಡಂ
ಪಾರ್ಕ್‌
ತಲುಪಿದ
ಕಾಂಗ್ರೆಸ್
ನಾಯಕರು,
ಅಲ್ಲಿ
ರೈತರೊಂದಿಗೆ
ಧರಣಿ
ಸತ್ಯಾಗ್ರಹದಲ್ಲಿ
ಭಾಗವಹಿಸಿದರು.
ಸತ್ಯಾಗ್ರಹದಲ್ಲಿ
ಭಾಗವಹಿಸಿ
ಮಾತನಾಡಿದ
ಸಿದ್ದರಾಮಯ್ಯ
ಅವರು,
ರೈತರಿಗೆ
ಮಹತ್ವದ
ಭರವಸೆ
ಕೊಟ್ಟರು.

id='are-slot-2'
class='oiad
oi-axt
oiadv'>

ಕಾಂಗ್ರೆಸ್ ನಾಯಕರಿಗೆ ರೈತರ ತಿರುಗೇಟು

ಕಾಂಗ್ರೆಸ್ ನಾಯಕರಿಗೆ ರೈತರ ತಿರುಗೇಟು

ಪಾದಯಾತ್ರೆ ಮೂಲಕ ಫ್ರೀಡಂ ಪಾರ್ಕ್‌ಗೆ ತೆರಳಿದ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಕಾಯ್ದಿತ್ತು. ವಿಧಾನಸಭೆ ಕಲಾಪ ಬಹಿಷ್ಕರಿಸಿ ರೈತರಿಗೆ ಬೆಂಬಲ ಕೊಡಲು ಹೋದ ಕಾಂಗ್ರೆಸ್ ನಾಯಕರನ್ನು ರೈತ ಮುಖಂಡರು ಪ್ರಶ್ನೆ ಮಾಡಿದರು. ಪ್ರತಿಭಟನೆ ಮಾಡುತ್ತಿದ್ದ ರೈತರು ನಮಗೆ ಕಾಂಗ್ರೆಸ್ ಪಕ್ಷದ ನೈತಿಕ ಬೆಂಬಲ ನಮಗೆ ಬೇಕಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ನಮ್ಮೊಂದಿಗೆ ಕೈಜೋಡಿಸಿ

ನಮ್ಮೊಂದಿಗೆ ಕೈಜೋಡಿಸಿ

ಕೇವಲ ನಿಮ್ಮ ನೈತಿಕ ಬೆಂಬಲ ನಮಗೆ ಬೇಡ. ಕೊಡುವುದಿದ್ದರೆ ಸಂಪೂರ್ಣ ಬೆಂಬಲವನ್ನು ನೀವು ಕೊಡಬೇಕು. ನಿಮ್ಮ ಪಕ್ಷದ ಕಾರ್ಯಕರ್ತರು ನಮ್ಮೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿ. ರೈತ ಸಂಘದ ಜೊತೆಗೆ ಬೀದಿಗೆ ಇಳಿದು ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಪ್ರತಿಭಟನೆ ಮಾಡಲಿ ಎಂದು ರೈತ ನಾಯಕರು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ರಾಜ್ಯಪಾಲರ ಬೇಟಿ

ರಾಜ್ಯಪಾಲರ ಬೇಟಿ

ನಾವು ರಾಜ್ಯಪಾಲರನ್ನು ಭೇಟಿ ಆಗಬೇಕು. ನಮ್ಮ ಜತೆ ನೀವೂ ಬರಬೇಕು ಎಂದು ಕರ್ನಾಟಕ ಹಸಿರು ಸೇನೆ ಮುಖಂಡ ಕುರುಬೂರು ಶಾಂತಕುಮಾರ್ ಅವರು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದರು.

Recommended Video

    Virushka ದಂಪತಿಗೆ ಇಂದು ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | Oneindia Kannada
    ಕಾಯ್ದೆಗಳನ್ನು ರದ್ದು ಮಾಡುತ್ತೇನೆ

    ಕಾಯ್ದೆಗಳನ್ನು ರದ್ದು ಮಾಡುತ್ತೇನೆ

    ರೈತರ ಆಗ್ರಹವನ್ನು ಒಪ್ಪಿಕೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರೈತ ಮುಖಂಡರಿಗೆ ಮಹತ್ವದ ಭರವಸೆ ನೀಡಿದರು. ಇಡಿ ದೇಶದಲ್ಲಿ ರೈತರ ಹೊರಾಟ ಪ್ರಾರಂಭಾವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯ್ದೆಗಳನ್ನು ತಂದಿದ್ದಾರೆ. ಇವು ಜನ ವಿರೋಧಿ ಕಾಯ್ದೆಗಳು. ರೈತ, ಕಾರ್ಮಿಕ, ದಲಿತ ಮೂರು ಜನ ಇಲ್ಲಿದ್ದೇವೆ. ನಾನು ‌ಕೂಡ ರೈತನ ಮಗ. ರೈತ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗಿದ್ದೆ. ಚುನಾವಣೆಗೆ ಅವಕಾಶ ಇಲ್ಲದ ಕಾರಣ ನಾನು ಹೊರ ಬಂದೆ. ಆದರೆ ನಾನು ಯಾವಾಗಲೂ ರೈತರ ಪರ.

    ನಾವು ಮುಂದೆ ಅಧಿಕಾರಕ್ಕೆ ಬಂದಾಗ ಈಗ ತಂದಿರುವ ಮೂರು‌ ಕಾಯ್ದೆಗಳನ್ನು ರದ್ದು ಮಾಡುತ್ತೇನೆ. ಇದು ಸತ್ಯ, ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ ಎಂದು ರೈತರಿಗೆ ಸಿದ್ದರಾಮಯ್ಯ ಅವರು ವಾಗ್ದಾನ ಮಾಡಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+