ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ: ಸದಾನಂದಗೌಡ
Recommended Video
ಬೆಂಗಳೂರು, ನವೆಂಬರ್ 22:ಸಿದ್ದರಾಮಯ್ಯ ದಿನದಿಂದ ದಿನಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ವಾಮಮಾರ್ಗದಲ್ಲಿ ಯಾರು ಚುನಾವಣೆ ಮಾಡಿದ್ದಾರೆ ಎಂದು ಗೊತ್ತಿದೆ,ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ದಾರೆ.ಅವ್ರ ಹಿಂದೆ ಯಾವೊಬ್ಬ ನಾಯಕರೂ ಇಲ್ಲ.ಹತಾಶರಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಹದಿನೈದು ಕ್ಷೇತ್ರಗಳಿಗೆ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದ್ದು, ಡಿಸೆಂಬರ್ 9ಕ್ಕೆ ಫಲಿತಾಂಶ ಹೊರಬೀಳಲಿದೆ.

ಜೆಡಿಎಸ್ ಸ್ಟಾರ್ ಪ್ರಚಾರಕರ ಬಗ್ಗೆ ವ್ಯಂಗ್ಯ
ಜೆಡಿಎಸ್ ಸ್ಟಾರ್ ಪ್ರಚಾರಕರ ಬಗ್ಗೆ ಡಿವಿ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.ಸ್ಟಾರ್ ಪ್ರಚಾರಕರು ಅಂತ ಹೇಳ್ತಾರೆ,ಆದ್ರಲ್ಲಿ 9 ಜನರು ಒಂದೇ ಕುಟುಂಬದವರು, ಮೂರು ಜನ ಮಾತ್ರ ಬೇರೆ ಇದ್ದಾರೆ .ಅವ್ರ ಮನೆಯವರೇ ಸ್ಟಾರ್ ಪ್ರಚಾರಕರಾ ಎಂದು ಪ್ರಶ್ನೆ ಮಾಡಿದ್ದಾರೆ.

ದೇವೇಗೌಡರು ಮನೆಯಲ್ಲೇ ಕುಳಿತು ಪ್ರಚಾರ
ಹಾಗಾದರೆ ಮಾಜಿ ಪ್ರಧಾನಿ ದೇವೇಗೌಡರು ಮನೆಯಲ್ಲೇ ಕುಳಿತು ಪ್ರಚಾರ ಮಾಡಬಹುದು.ಎರಡು ಕ್ಷೇತ್ರದಲ್ಲಿ ನಾಮಪತ್ರ ಯಾರೂ ಒತ್ತಾಯದಿಂದ ಹಿಂಪಡೆದಿಲ್ಲ.ಅಭ್ಯರ್ಥಿಗಳಿಗೂ ಕೂಡಾ ಸ್ವಂತ ನಿರ್ಧಾರ ಮಾಡೇ ನಾಮಪತ್ರ ವಾಪಸ್ ಪಡೆದಿರೋದು ಎಂದರು.

ಕುತಂತ್ರ ಮಾಡಿ ನಾಮಪತ್ರ ತೆಗೆಸಿದ್ದು ಅವ್ರು
ಈ ಹಿಂದೆ ರಾಮನಗರದಲ್ಲಿ ಕುತಂತ್ರ ಮಾಡಿ ಅಭ್ಯರ್ಥಿ ನಾಮಪತ್ರ ತೆಗೆಸಿದ್ದು ಅವರು ನಾನಲ್ಲ, ಇದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ನಾಯಕರ ವಿರುದ್ಧ ಸದಾನಂದಗೌಡ ಕಿಡಿಕಾರಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್ ಬರುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ. ಒಬ್ಬರು ಇವರತ್ತು ತಿಂಡಿಗೆ ಬರುತ್ತಾರೆ ಅಂತಾ ಮಾಹಿತಿ ಗೊತ್ತಾಗಿದೆ. ತಿಂಡಿ ಕೊಡುವ ಮನೆಯವರು ನಮ್ಮ ಜೊತೆ ಇದ್ದಾರೆ. ಬಂದವರು ತಿಂಡಿ ತಿಂದು ಹೋಗಬೇಕಷ್ಟೆ, ತಿಂಡಿ ಕೊಟ್ಟವರು ನಮಗೆ ಮತ ಹಾಕುತ್ತಾರೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮನೆ ಮನೆ ಭೇಟಿ ಕುರಿತು ವ್ಯಂಗ್ಯವಾಡಿದ್ದಾರೆ.












Click it and Unblock the Notifications