ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಖಾತೆ ಏಕೆ ಹೋಯಿತು ಅಂದ್ರು ಡಿವಿಎಸ್ ನಗ್ತಾರೆ : ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಏಪ್ರಿಲ್ 05 : 'ಸದಾನಂದಗೌಡರನ್ನು ರೈಲ್ವೆ ಮಂತ್ರಿ ಸ್ಥಾನದಿಂದ ಯಾಕೆ ಕಿತ್ತು ಹಾಕಿದ್ರು ಅಂತ ಕೇಳಿದರೆ ಅದಕ್ಕೂ ನಗ್ತಾರೆ. ಸಮರ್ಥರಾಗಿದ್ದರೆ ಖಾತೆ ಕಿತ್ತುಕೊಳ್ಳುತ್ತಿದ್ದರಾ? ಅಸಮರ್ಥರಾಗಿದ್ದಕ್ಕೆ ಕಿತ್ತು ಹಾಕಿದ್ದು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಮಲ್ಲೇಶ್ವರಂನ ಸುಬ್ರಹ್ಮಣ್ಯ ನಗರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರವಾಗಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸದಾನಂದ ಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡದ್ವಾರಕನಾಥ್ ಗುರೂಜಿ ಭೇಟಿಯಾದ ಡಿ.ವಿ.ಸದಾನಂದ ಗೌಡ

'ಮೋದಿ ಹಾಗೂ ನಮಗೂ ವೈಯಕ್ತಿಕ ದ್ವೇಷ ಇಲ್ಲ. ರಾಜಕೀಯವಾಗಿ ಮಾತ್ರ ನಾವು ವಿರೋಧಿಗಳು. ಅಭಿವೃದ್ದಿ ಬಗ್ಗೆ ಎಲ್ಲೂ ಅವರು ಮಾತನಾಡಲ್ಲ. ಮೋದಿ ಐದು ವರ್ಷದಲ್ಲಿ ಏನು ಮಾಡಿದ್ದಾರೆ? ಎಂದು ಲೆಕ್ಕ ಕೊಡಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡ

ಏಪ್ರಿಲ್ 18ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಡಿ.ವಿ.ಸದಾನಂದ ಗೌಡ ಅವರು ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕೃಷ್ಣ ಬೈರೇಗೌಡ ಅ ವರು ಕಣದಲ್ಲಿದ್ದಾರೆ...

ಬೆಂಗಳೂರು ಉತ್ತರ ಚುನಾವಣಾ ಪುಟ

ಒಂದೇ ಒಂದು ಕೆಲಸ ಮಾಡಿಲ್ಲ

ಒಂದೇ ಒಂದು ಕೆಲಸ ಮಾಡಿಲ್ಲ

'ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕೆಲಸವನ್ನು ಮೋದಿ ಮಾಡಿಲ್ಲ. ಐದು ವರ್ಷ ನಾನು ಕೂಡ ಮುಖ್ಯಮಂತ್ರಿ ಆಗಿದ್ದೆ. ಏನು ಹೇಳಿದ್ದೆ, ಏನು ಮಾಡಿದೆ ಎನ್ನುವುದನ್ನು ಹೇಳುವುದಕ್ಕೆ ನಾನು ರೆಡಿ. 165 ಭರವಸೆಗಳನ್ನ ಕೊಟ್ಟಿದ್ದೆ, ಎಲ್ಲವನ್ನೂ ಈಡೇರಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದರು.

ಉದ್ಯೋಗ ಕೊಡುವುದು ಎಲ್ಲಿ ಹೋಯಿತು

ಉದ್ಯೋಗ ಕೊಡುವುದು ಎಲ್ಲಿ ಹೋಯಿತು

'ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ, ಇರುವ ಉದ್ಯೋಗವನ್ನು ಕಿತ್ತುಕೊಳ್ಳುತ್ತಿದ್ದಾರೆ. ಸಣ್ಣ ಕೈಗಾರಿಕೆಗಳನ್ನು ಮುಚ್ಚಲಾಗುತ್ತಿದೆ. ಬಿಎಸ್‌ಎನ್‌ಎಲ್‌ನಲ್ಲಿ 54 ಸಾವಿರ ಉದ್ಯೋಗಿಗಳನ್ನು ತೆಗೆಯುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸದಾ + ಆನಂದ

ಸದಾ + ಆನಂದ

'ಸದಾ + ಆನಂದ ಸೇರಿದರೆ ಸದಾನಂದ ಆಗುತ್ತದೆ. ಇದು ಸವರ್ಣ ದೀರ್ಘ ಸಂಧಿ. ಸದಾನಂದಗೌಡರ ಬಳಿ ಇದ್ದ ರೈಲ್ವೆ ಮಂತ್ರಿ ಸ್ಥಾನವನ್ನು ಏಕೆ ಕಿತ್ತುಕೊಂಡರು ಎಂದು ಕೇಳಿದರೆ ಅದಕ್ಕೂ ನಗ್ತಾರೆ. ಸಮರ್ಥರಾಗಿದ್ದರೆ ಖಾತೆ ಕಿತ್ತುಕೊಳ್ಳುತ್ತಿದ್ದರಾ?. ಅಸಮರ್ಥರಾಗಿದ್ದಕ್ಕೆ ಖಾತೆ ಕಿತ್ತುಕೊಂಡರು' ಎಂದು ಲೇವಡಿ ಮಾಡಿದರು.

ಹಿಂದುತ್ವದ ಇಟ್ಟುಕೊಂಡು ಚುನಾವಣೆ

ಹಿಂದುತ್ವದ ಇಟ್ಟುಕೊಂಡು ಚುನಾವಣೆ

'ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ಪಡೆದಿದ್ದಾರೆ. ಹಿಂದುತ್ವ ಇಟ್ಟುಕೊಂಡು ಚುನಾವಣೆ ಮಾಡ್ತಾರೆ. ಹಿಂದೂ, ಮುಸ್ಲಿಂ ಅಂತ ಭೇದ ಭಾವ ಮಾಡ್ತಾರೆ ಯಡಿಯೂರಪ್ಪಗೆ ಒಂದು ವೇಳೆ ಆಪರೇಷನ್ ಆಗಿ ರಕ್ತ ಬೇಕು ಅಂದ್ರೆ ಹಿಂದೂ ರಕ್ತನೇ ಕೊಡಿ ಅಂತ ಕೇಳ್ತಾರಾ?, ಮುಸ್ಲಿಂ ರಕ್ತ ಕೊಟ್ರೆ ಒಳಗೆ ಹೋಗಲ್ವಾ?
ಜಾತಿ ಧರ್ಮದಿಂದ ಜನರನ್ನು ಒಡೆಯುವವರು. ಸಮಾಜ ಘಾತಕರು' ಎಂದು ಟೀಕಿಸಿದರು.

ಬಿಜೆಪಿ ಕೊಡುಗೆ ಏನು

ಬಿಜೆಪಿ ಕೊಡುಗೆ ಏನು

'ನಾನೇನು ಹಿಂದೂ ಅಲ್ವಾ. ಹಿಂದೂ ಧರ್ಮದಲ್ಲಿ ಬಡವರು, ದಲಿತರು ಇದ್ದಾರೆ. ಅವರಿಗೆ ಬಿಜೆಪಿ ಕೊಡುಗೆ ಏನು?. ನನ್ನ ಅವಧಿಯಲ್ಲಿ ನಾನು ಉಚಿತವಾಗಿ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಬಿಜೆಪಿ ಯವರಿಗೆ ಒರಿಜಿನಾಲಿಟಿ ಇಲ್ಲ. ಮುಖವಾಡ ಹಾಕಿಕೊಂಡು ಬರ್ತಾರೆ' ಎಂದು ಆರೋಪಿಸಿದರು.

English summary
Former chief Minister Siddaramaiah busy in election campaign in Bangalore North Lok sabha seat for Congress and JD(S) candidate Krishna Byre Gowda. Siddaramaiah attacked on PM Narendra Modi and BJP candidate D.V.Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X