ಸಿದ್ದರಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬ ಐವರು ಸಾವು
ಬೆಂಗಳೂರು, ಏ.27: ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಶನಿವಾರ ನಡೆದಿದೆ.
ಶನಿವಾರ ರಜೆ ಇದ್ದ ಕಾರಣ ಕುಟುಂಬ ಸಮೇತರಾಗಿ ಸಿದ್ಧರಬೆಟ್ಟ ನೋಡಲು ಹೋದವರು ಹಿಂದಿರುಗಿ ಬರಲೇ ಇಲ್ಲ. ಸಿದ್ಧರಬೆಟ್ಟ ಬೆಂಗಳೂರಿನ ಹೊರವಲಯ ನೆಲಮಂಗಲದ ಸಮೀಪವಿದೆ.
ರೇಷ್ಮಾ(22), ಮುನೀರ್(49), ಯಾರಬ್ ಖಾನ್(21) ,ಮುಬೀನ್ ತಾಜ್(21), ಸಲ್ಮಾನ್ ಮೃತರು. ಕಲ್ಯಾಣಿ ಆಳ ಎಷ್ಟಿದೆ ಏನು ಎನ್ನುವುದನ್ನು ಪರೀಕ್ಷಿಸದೆ ಕೆಳಗಿಳಿದು ಜೀವಕ್ಕೇ ಆಪತ್ತು ತಂದುಕೊಂಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಎರಡು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಮೃತರೆಲ್ಲರೂ ಕೆಂಗೇರಿ ನಿವಾಸಿಗಳು ಎಂದು ತಿಳಿದುಬಂದಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದವರ ಶೋಧಕಾರ್ಯ ನಡೆಯುತ್ತಿದೆ.












Click it and Unblock the Notifications