ಶ್ರದ್ಧ ಹಾಗು ಸ್ಟೇನ್ ಲೆಸ್ ಸ್ಟೀಲ್ ನಾಟಕ ತಪ್ಪದೇ ನೋಡಿ
ಬೆಂಗಳೂರು, ಆಗಸ್ಟ್ 08: ಸಾಹಿತಿ ಶ್ರೀನಿವಾಸ ವೈದ್ಯ ಅವರು ಬರೆದಿರುವ 'ಶ್ರದ್ಧ' ಹಾಗೂ ವಸುಧೇಂದ್ರ ಅವರ' ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು' ಕಥೆಯನ್ನು ಆಧಾರಿಸಿ ವಟಿ ಕುಟೀರ ತಂಡವು ಅಭಿನಯಿಸುವ ಯಶಸ್ವಿ ನಾಟಕವು ಮತ್ತೊಮ್ಮೆ ಪ್ರದರ್ಶಿತವಾಗುತ್ತಿದೆ.
ಬೆಂಗಳೂರಿನ ಹನುಮಂತನಗರದ ಪ್ರಭಾತ್ ಕೆಎಚ್ ಕಲಾಸೌಧದಲ್ಲಿ ಆಗಸ್ಟ್ 12(ಭಾನುವಾರ)ದಂದು ಸಂಜೆ 7.30ಕ್ಕೆ ಪ್ರದರ್ಶನವಿದೆ. ಆಸಕ್ತರು ಬುಕ್ ಮೈಶೋನಲ್ಲಿ ಟಿಕೆಟ್ ಕೊಳ್ಳಬಹುದು.
ದಿನಾಂಕ : ಆಗಸ್ಟ್ 12, 2018
ಎರಡು ಪ್ರದರ್ಶನ: 3.30 ಹಾಗೂ 7.30
ಟಿಕೆಟ್ ಬೆಲೆ: 150ರು
ನಿರ್ದೇಶನ: ಕಿರಣ್ ವಟಿ
ಕಲಾವಿದರು: ಗಣೇಶ್ ಶೆಣೈ, ಕೀರ್ತಿ ಭಾನು, ಸೋಯಯಾಜಿ, ಸುನೀಲ್ ಕುಮಾರ್, ಸತೀಶ್ ಕೆಎಸ್, ಪ್ರಾಚಿ ರವೀಂದ್ರ, ಅರವಿಂದ್ ನಾಡಿಗ್.
ಸ್ಥಳ: ಕೆಎಚ್ ಕಲಾಸೌಧ, ಹನುಮಂತನಗರ.
ನಾಟಕದ ಬಗ್ಗೆ ಹರೀಶ್ ರಾಮ್ ಪ್ರಸಾದ್ ಅವರು ಬರೆದಿರುವ ಅನಿಸಿಕೆ ಇಲ್ಲಿದೆ:
ತಾಯಿ, ಮುಗ್ಧೆ, ಮಮತೆಯ, ಪ್ರೀತಿಯ ಮೂರ್ತಿ, ಮನೆಯವರ, ಮಕ್ಕಳ ಸೇವೆಯೇ ತನ್ನ ಏಕೈಕ ಕರ್ತವ್ಯ ಎಂದು ದುಡಿದೂ ದುಡಿದೂ ಸವೆಯುವ ಜೀವ. ಅದರೂ ಬಹುಶಃ taken for granted ಆಗೇ ಉಳಿಯುವ ಇವಳ ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ simple ಬಯಕೆಗಳನ್ನು ಅರ್ಥಮಾಡಿಕೊಳ್ಳುವವರು ಅಪರೂಪ.
ಮಾಡಿಕೊಂಡವರು ಪೂರೈಸುವ ಗೋಜಿಗೆ ಹೋಗೋದು ಇನ್ನೂ ಅಪರೂಪ. ನಾಟಕದಲ್ಲಿನ ಸ್ಟೀಲ್ ಪಾತ್ರೆ ದೇವಿ ದರ್ಶನ ನಮ್ಮಗಳ ಕಣ್ಣು ತೆರೆಸಲಿ.

ಮಾತೃ-ಪಿತೃ ದೇವೋ ಭವ... ಹಾಗಂತ ಎಲ್ಲೋ ಕೇಳಿದ ನೆನಪುಳ್ಳ ಕೆಲವರು... ಮಾತೃನೋ ಪಿತೃನೋ just दे बा ಅನ್ನೋ ಈಗಿನವರು... ಮಧ್ಯೆ ಸೇತುವೆಯಾಗುವ ಜವಾಬ್ದಾರಿಯನ್ನು ಹೊರುವ ತಾಕತ್ತಿದೆ ಇಂಥಹ ನಾಟಕಗಳಿಗೆ, ಕಥೆಗಳಿಗೆ. ನಾಟಕಗಳಿಗೆ ತುಸು ಜಾಸ್ತಿ, ಯಾಕಂದ್ರೆ ಈಗಿನ ಎಷ್ಟೋ ನಮ್ಮ ಜನಕ್ಕೆ ಕನ್ನಡ ಮಾತಾಡಿದ್ದು ಅರ್ಥ ಆಗುತ್ತೆ ಓದಕ್ಕೆ ಬರಲ್ಲ...
ಜನ್ಮದಾತೃಗಳ ಬಗ್ಗೆಯ ಎರಡು ಸಣ್ಣ ಕಥೆಗಳನ್ನು ಹುಡುಕಿ, ಮದುವೆ ಮಾಡಿ, ಒಳ್ಳೆಯ, ಚಿಕ್ಕದಾದ, ಚೊಕ್ಕದಾದ, ಮುದ್ದಾದ ನಾಟಕ ವಟಿ ಕುಟೀರದ ಈ ಕೂಸು.
ಈ ಕೂಸನ್ನು ನೋಡಿದ ಮೇಲೆ ನಾವು "ಇಂಥ ಮಕ್ಕಳಿರಲವ್ವ ನಮ್ಮೊರ ತುಂಬಾ" ಎಂದು ಹಾಡಿ ಹರಸುತ್ತೇವೆ.

ಕುಟುಂಬದಲ್ಲಿನ ಸಂಬಂಧಗಳು ಅವುಗಳ ನಡುವೆಯ ಭಾವಗಳು ಭಾವನೆಗಳು, ಹಾಸ್ಯ, ವಿಡಂಬನೆ, ಕೋಪ, ತಾಪ, ಸುಖ-ದುಃಖ, ಪ್ರೀತಿ, ಭೀತಿ ಎಲ್ಲದರ ರಸಾಯನ ಬಡಿಸಿದ್ದಾರೆ.
ಶಿಸ್ತುದಾರ ಸದಾ ಬೈಯ್ಯುವ ತಂದೆ, ಅತ್ಯಂತ ಮುಗ್ಧ ಅಷ್ಟೇ ಛಲಗಾತಿ ತಾಯಿಯ ಚಿತ್ರಣವು ಸೊಗಸಾಗಿತ್ತು. ಸಂಪೂರ್ಣ ಅವಧಿ ನಮ್ಮನ್ನು ಬೇರೆಯೇ ಒಂದು ಪ್ರಪಂಚಕ್ಕೆ ಕೊಂಡೊಯ್ದಿತ್ತು. ಮನೋರಂಜನೆಯ ಮೂಲ ಉದ್ದೇಶ ಇದೆ ಅಲ್ಲವೆ ಮತ್ತೆ?
ದಯವಿಟ್ಟು ಮಿಸ್ ಮಾಡ್ಕೋಬೇಡಿ. ಮಿಸ್ ಮಾಡ್ಕೊಂಡ್ರೆ ತಲೆ ಬೊಡ್ಸ್ಕೊಳಿ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications