ಶಾಕಿಂಗ್: ಈ ಕಾರಣಕ್ಕೆ ಅಪ್ಪಿ ತಪ್ಪಿಯೂ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ!
ಬಹುತೇಕ ಜನ ಈಗೆಲ್ಲ ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ರಂಚ್ ಎನ್ನುವ ಕಾನ್ಸೆಪ್ಟ್ ಹೆಚ್ಚು ಫೇಮಸ್ ಆಗ್ತಿದೆ. ಬ್ರಂಚ್ ಅಂತ ಅಂದರೆ ಬೆಳಿಗ್ಗೆ ಬ್ರೇಕ್‌ಫಾಸ್ಟ್ ಹಾಗೂ ಊಟವನ್ನು ಸೇರಿಸಿ ಮಾಡುವುದು. ಟಿಫಿನ್ ಮಾಡದೆ ಇರುವುದು ಅಥವಾ ಊಟ ಹಾಗೂ ಟಿಫಿನ್ ಸೇರಿಸಿ ಮಾಡುವುದರಿಂದ ಆರೋಗ್ಯದ ಮೇಲೆ ಭಾರೀ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿಯೊಂದು ಎಚ್ಚರಿಸಿದೆ. ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವೇ ಬೀರಲಿದೆ ಎಂದು ವರದಿಯಲ್ಲಿ ಆಘಾತಕಾರಿ ಅಂಶಗಳು ಇವೆ.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಒತ್ತಡ ಹೆಚ್ಚಾದಂತೆ ಜನ ಬೆಳಿಗ್ಗೆ ಬ್ರೇಕ್‌ಫಾಸ್ಟ್ ಮಾಡುವುದನ್ನು ಸ್ಕಿಪ್ ಮಾಡ್ತಾರೆ. ನಿತ್ಯವೂ ಟಿಫಿನ್ ಬ್ರೇಕ್ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವೇ ಆಗಲಿದೆ. ಇದು ಜೀವಕ್ಕೇ ಕುತ್ತಾಗುವ ಸಾಧ್ಯತೆಯೂ ಇದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಾಗೂ ನಗರ ಪ್ರದೇಶದಲ್ಲಿ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ತುಂಬಾನೇ ಬದಲಾವಣೆ ಆಗುತ್ತಿದೆ. ಇದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ರೀತಿ ಏಕಾಏಕಿ ಆಹಾರ ಶೈಲಿ ಬದಲಾಗಿರುವುದರಿಂದ ಜನರಲ್ಲಿ ರಕ್ತದ ಒತ್ತಡ, ಕೊಬ್ಬಿನಾಂಶ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಇದೇ ಕಾರಣಕ್ಕೆ ಬ್ರೇಕ್‌ಫಾಸ್ಟ್ ತಪ್ಪಿಸಲೇಬಾರದು ಎಂದು ವೈದರು ಎಚ್ಚರಿಸಿದ್ದಾರೆ.
ಪುರುಷರಿಗೆ ಸಮಸ್ಯೆ: ಈ ರೀತಿ ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಮಸ್ಯೆ ಆಗಲಿದೆ ಎಂದಿದೆ ವರದಿ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಹೃದಯಾಘಾತ (heart attack) ಸಂಭವಿಸುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ. ಬ್ರೇಕ್‌ಫಾಸ್ಟ್ ತಪ್ಪಿಸುವ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಸಂಭವಿಸುವ ಸಾಧ್ಯತೆ ಹೆಚ್ಚು. ಶೇಕಡ 27ರಷ್ಟು ಪುರಷರಲ್ಲಿ ಈ ಅಪಾಯ ಇದೆ ಎಂದು ವೈದರು ಹೇಳಿದ್ದಾರೆ.
ಬ್ರೇಕ್‌ಫಾಸ್ಟ್ ಅನ್ನು ಸ್ಕಿಪ್ ಮಾಡುವುದರಿಂದಾಗಿ ಪುರುಷರಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಾಗುವ ಸಾಧ್ಯತೆ ಹೆಚ್ಚು ಅಲ್ಲದೇ ಸ್ಥೂಲಕಾಯತೆ, ಹೆಚ್ಚು ರಕ್ತದೊತ್ತಡ, ಬಯೋಕೊಲೆಸ್ಟರಾಲೀಮಿಯಾ ಮತ್ತು ಶುಗರ್ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಇದು ಮುಂದುವರಿದರೆ, ಅದು ಸಾವು ಸಹ ಸಂಭವಿಸಬಹುದು ತಜ್ಞರ ವೈದ್ಯರ ತಂಡ ಸಲಹೆ ನೀಡಿದೆ.

ವಿವಿಧ ಆರೋಗ್ಯ ಸಮಸ್ಯೆ: ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹಲವು ಬಾರಿ ಎಚ್ಚರಿಸಲಾಗಿದೆ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಮರೆವು ಹಾಗೂ ಹೊಟ್ಟೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈ ಹಿಂದೆಯೂ ಎಚ್ಚರಿಸಲಾಗಿತ್ತು.
ಇದೀಗ ಮುಂದಿನ ಹಂತದ ಸಮಸ್ಯೆಗಳು ಸಹ ಕಾಣಿಸಿಕೊಳ್ಳಲಿದೆ ಎಂದು ತಜ್ಞ ವೈದ್ಯರ ತಂಡ ಇದೀಗ ಎಚ್ಚರಿಸಿದೆ. ಇದನ್ನು ಬ್ರೇಕ್‌ಫಾಸ್ಟ್ ಮಾಡದೆ ಇರುವವರೆಲ್ಲ ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನು ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ ಯಾವುದೇ ಕಾರಣಕ್ಕೂ ಬ್ರೇಕ್‌ಫಾಸ್ಟ್ ತಪ್ಪಿಸಲೇಬಾರದು ವೈದ್ಯರು ಇದೀಗ ಹೊಸ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications