ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸಭಾ ಚುನಾವಣೆ: ಶಿವಾಜಿನಗರದಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್; ದೂರು ನೀಡಿದ ಶಾಸಕ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರ ಪಟ್ಟಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಪಟ್ಟಿಯಿಂದ ಕೆಲವರನ್ನು ತೆಗೆಯುವುದು, ಮತ್ತೆ ಹೊಸ ಮತದಾರರನ್ನು ಸೇರಿಸುವುದು ನಡೆಯುತ್ತದೆ. ಆದರೆ, ಶಿವಾಜಿನಗರದಲ್ಲಿ ಹೊಸ ಆರೋಪ ಕೇಳಿ ಬಂದಿದೆ. ಏನೆಂದು ಮುಂದೆ ಓದಿ..

|
Google Oneindia Kannada News

ಬೆಂಗಳೂರು, ಜನವರಿ. 31: ಇನ್ನೇನು ರಾಜ್ಯ ಚುನಾವಣೆ ಹತ್ತಿರ ಬರುತ್ತಿದೆ. ಈ ಹಿನ್ನೆಲೆ ಚುನಾವಣಾ ಆಯೋಗ ಹಲವು ಬದಲಾವಣೆಗಳನ್ನು ಮಾಡುತ್ತದೆ. ಮೃತಪಟ್ಟವರು, ವಿಳಾಸ ಬದಲಾದವರ ಹೆಸರು ತೆಗೆಯುವುದು ಮತ್ತು ಹೊಸ ಮತದಾರರನ್ನು ಸೇರಿಸುವುದು ನಡೆಯುತ್ತದೆ. ಇಂತಹ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಹಲವು ಮತದಾರರನ್ನು ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಶಿವಾಜಿನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಶಿವಾಜಿ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾಡಿದ್ದಾರೆ.

Assembly Elections: ರಾಜ್ಯ ಚುನಾವಣಾ ಪ್ರಚಾರಕ್ಕೆ ವಾಟ್ಸಾಪ್ ಮುಖ್ಯ ಕೀಲಿ ಕೈ! ಹೇಗೆ ಇಲ್ಲಿದೆ ವಿವರAssembly Elections: ರಾಜ್ಯ ಚುನಾವಣಾ ಪ್ರಚಾರಕ್ಕೆ ವಾಟ್ಸಾಪ್ ಮುಖ್ಯ ಕೀಲಿ ಕೈ! ಹೇಗೆ ಇಲ್ಲಿದೆ ವಿವರ

8000 ಅಲ್ಪಸಂಖ್ಯಾತ ಮತದಾರರು ಪಟ್ಟಿಯಿಂದ ಔಟ್!

8000 ಅಲ್ಪಸಂಖ್ಯಾತ ಮತದಾರರು ಪಟ್ಟಿಯಿಂದ ಔಟ್!

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 9,195 ಮತದಾರರನ್ನು, ಅದರಲ್ಲೂ8000 ಅಲ್ಪಸಂಖ್ಯಾತ ಸಮುದಾಯಗಳ ಮತದಾರರನ್ನು ಮರು ಪರಿಶೀಲಿಸುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಜನವರಿ 15 ರಂದು ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ 9,195 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ತಯಾರಿ ನಡೆಸಲಾಗುತ್ತಿದೆ ಎಂದು ಜನವರಿ 30 ರಂದು ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ನು ಘೋಷಿಸಿದ ನಂತರವೂ ಮತ್ತೆ 9,195 ಮತದಾರರನ್ನು ಪಟ್ಟಿಯಿಂದ ಕೈಬಿಡಲು ನೋಟಿಸ್ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರ ಹೆಸರು ಟಾರ್ಗೆಟ್!

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರ ಹೆಸರು ಟಾರ್ಗೆಟ್!

ಪಟ್ಟಿಯಿಂದ ತೆಗೆಯಲು ಯೋಜಿಸಿರುವ 9, 195 ಮತಗಳಲ್ಲಿ ಸುಮಾರು 8000 ಮತಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿವೆ. ಕ್ಷೇತ್ರದ 193 ಮತಗಟ್ಟೆಗಳ ಪೈಕಿ 91 ಮತಗಟ್ಟೆಗಳಲ್ಲಿ ಮಾತ್ರ ಈ ಕಸರತ್ತು ಮಾಡಲಾಗಿದೆ ಎಂದು ರಿಜ್ವಾನ್ ಅರ್ಷದ್ ಅವರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಪತ್ರ ಬರೆದಿದ್ದಾರೆ.

"ಇದು ಅಲ್ಪಸಂಖ್ಯಾತರಿಗೆ ಮತ ಚಲಾಯಿಸುವ ಮೂಲಭೂತ ಹಕ್ಕನ್ನು ನಿರಾಕರಿಸುವ ಮತ್ತು ಮುಂಬರುವ ಚುನಾವಣೆಯ ಫಲಿತಾಂಶಗಳನ್ನು ತಿರುಗಿಸಲು ಮಾಡಿರುವ ದುರಾಲೋಚನೆಯ ಉದ್ದೇಶದಿಂದ ಪೂರ್ವಾಗ್ರಹ ಪೀಡಿತ ಕ್ರಮವಾಗಿದೆ" ಎಂದು ರಿಜ್ವಾನ್ ಅರ್ಷದ್ ಸಿಇಒಗೆ ಬರೆದ ಪತ್ರದಲ್ಲಿ ಸೇರಿಸಿದ್ದಾರೆ.

ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ

ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ

ಚುನಾವಣಾ ಆಯೋಗವು ಜನವರಿ 15 ರಂದು ಬೆಂಗಳೂರಿನ ಶಿವಾಜಿನಗರ, ಮಹದೇವಪುರ ಮತ್ತು ಚಿಕ್ಕಪೇಟೆಯ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನವೆಂಬರ್ 2022 ರಲ್ಲಿ ಖಾಸಗಿ ಕಂಪನಿಯೊಂದು ದೊಡ್ಡ ಪ್ರಮಾಣದ ಮತದಾರರ ಮಾಹಿತಿ ಕಳ್ಳತನ ಪ್ರಕರಣ ವರದಿಯಾಗಿತ್ತು. ಬಳಿಕ ಈ ಮೂರು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ವಿಳಂಬವಾಗಿದೆ.

ಶಿವಾಜಿನಗರದಲ್ಲಿ ಈಗಾಗಲೇ ಅಂತಿಮ ಮತಪಟ್ಟಿ ಪರಿಷ್ಕರಣೆ ಆಗಿದೆ. 17,000 ಮತದಾರರನ್ನ ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆದಾದ ಬಳಿಕವೂ 9,195 ಮತದಾರರನ್ನು ಪಟ್ಟಿಯಿಂದ ಕೈಬಿಡಲು ನೊಟೀಸ್ ನೀಡಲಾಗಿದೆ.

ಮತದಾರರ ಪಟ್ಟಿ ಪರಿಶಿಲಿಸುವಂತೆ ಆಯೋಗಕ್ಕೆ ದೂರು

ಮತದಾರರ ಪಟ್ಟಿ ಪರಿಶಿಲಿಸುವಂತೆ ಆಯೋಗಕ್ಕೆ ದೂರು

ಈ ಹಿಂದೆ, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೋಷಗಳಿವೆ ಎಂದು ಅಕ್ಟೋಬರ್ 2022 ರಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ಬೆಂಗಳೂರಿನ ನಿವಾಸಿಗಳಾದ ಅಫ್ಸರ್ ಪಾಷಾ, ಭಾಸ್ಕರ್ ಡಿ, ಗಿರೀಶಂ ಎನ್, ಶ್ರೀಕಾಂತ್ ಎಸ್, ಮಹಮ್ಮದ್ ಇನಾಯತ್, ಶೇಖ್ ದಾವೂದ್ ಮತ್ತು ಅನ್ವರ್ ಬಾಷಾ ಎಂಬ ಏಳು ಮಂದಿ ಸಲ್ಲಿಸಿದ ದೂರಿನಲ್ಲಿ ಕ್ಷೇತ್ರದ ಮತದಾರರ ಪಟ್ಟಿಯನ್ನು ಮರುಪರಿಶೀಲಿಸುವಂತೆ ಕೋರಲಾಗಿದೆ.

ದೂರುದಾರರಲ್ಲಿ ಒಬ್ಬರಾದ ಬಿಜೆಪಿ ಕಾರ್ಯಕರ್ತ ಗಿರೀಶಂ ಫೆಬ್ರವರಿ 2022 ರಲ್ಲಿ ಕ್ಷೇತ್ರದಲ್ಲಿ ತಮ್ಮದೇ ಆದ ಸಮೀಕ್ಷೆಯನ್ನು ನಡೆಸಿದ್ದು, ಸಾವಿರಾರು ಮತದಾರರು ನಕಲಿಯಾಗಿದ್ದಾರೆ ಅಥವಾ ಕ್ಷೇತ್ರದಲ್ಲಿ ವಾಸಿಸುತ್ತಿಲ್ಲ ಎಂದು ತಿಳಿಸಿದ್ದರು.

English summary
karnataka assembly elections 2023: Congress MLA Rizwan Arshad files a complaint to the Election Commission over deletion of 9,195 voters in Shivajinagar's list . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X