ಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು: ಬಿಜೆಪಿಯಲ್ಲಿ ಕೆಂಪು ಬಾವುಟ

Recommended Video

      By Elections 2019 : ಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು | Oneindia Kannada

      ಬೆಂಗಳೂರು, ಸೆಪ್ಟೆಂಬರ್ 24: ಹೊಸಕೋಟೆ ಕ್ಷೇತ್ರ ಉಪಚುನಾವಣೆ ಟಿಕೆಟ್ ನೀಡಿದೆ ವಿಷಯವಾಗಿ ಬಿಜೆಪಿಯಲ್ಲಿ ಭಾರಿ ಬಿಕ್ಕಟ್ಟು ತಲೆದೂರಿದ್ದು, ಬಿಜೆಪಿಗೆ ಇಕ್ಕಟ್ಟಾಗಿ ಪರಿಣಮಿಸಿದೆ.

      ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಎಂಟಿಬಿ ನಾಗರಾಜು ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು.

      ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಟಿಕೆಟ್ ಶರತ್ ಬಚ್ಚೇಗೌಡ ಬದಲಿಗೆ ವಿರೋಧಿ ಎಂಟಿಬಿ ನಾಗರಾಜು ಅಥವಾ ಅವರ ಪುತ್ರನಿಗೆ ನೀಡಲಾಗುತ್ತಿದೆ. ಇದು ಶರತ್ ಬಚ್ಚೇಗೌಡ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿದ್ದು, ಬಂಡಾಯದ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.

      ಸಂಸದ ಬಚ್ಚೇಗೌಡ ಅವರು ಯಡಿಯೂರಪ್ಪ ಮನವಿಯಂತೆ ಪುತ್ರ ಶರತ್ ಬಚ್ಚೇಗೌಡ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರಾದರೂ ಶರತ್ ಬಚ್ಚೇಗೌಡ ಅವರು ಸುಮ್ಮನಾಗುವ ಯಾವ ಲಕ್ಷಣವನ್ನೂ ತೊರಿಲ್ಲ, ಬದಲಿಗೆ ಬಿಜೆಪಿ ಟಿಕೆಟ್‌ಗಾಗಿ ಅವರು ಪಟ್ಟು ಹಿಡಿದಿದ್ದಾರೆ.

      ಯಡಿಯೂರಪ್ಪ ನಿವಾಸಕ್ಕೆ ಶರತ್ ಬೆಂಬಲಿಗರ ಮುತ್ತಿಗೆ

      ಯಡಿಯೂರಪ್ಪ ನಿವಾಸಕ್ಕೆ ಶರತ್ ಬೆಂಬಲಿಗರ ಮುತ್ತಿಗೆ

      ಇಂದು ಶರತ್ ಬಚ್ಚೇಗೌಡ ಬೆಂಬಲಿಗರು ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಮನೆ ಮುಂದೆ ಜಮಾವಣೆಗೊಂಡು ತಮ್ಮ ನಾಯಕನಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ. ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನೂ ಕೂಗುತ್ತಿದ್ದಾರೆ.

      ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧ: ಶರತ್ ಬಚ್ಚೇಗೌಡ

      ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧ: ಶರತ್ ಬಚ್ಚೇಗೌಡ

      ಬಿಜೆಪಿ ಟಿಕೆಟ್ ದೊರೆಕದ ಪಕ್ಷದಲ್ಲಿ ಪಕ್ಷೇತರನಾಗಿಯಾದರೂ ಚುನಾವಣೆಗೆ ನಿತೇ ಸರಿ ಎಂದು ಈಗಾಗಲೇ ಶರತ್ ಬಚ್ಚೇಗೌಡ ಅವರು ರಾಜ್ಯ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಹಾಗೊಂದು ವೇಳೆ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸಿದರೆ ಎಂಟಿಬಿ ನಾಗರಾಜು ಅಥವಾ ಅವರ ಪುತ್ರ ಅಥವಾ ಇನ್ಯಾರೇ ಬಿಜೆಪಿಯಿಂದ ಸ್ಪರ್ಧಿಸಿದರೂ ಗೆಲುವು ಕಷ್ಟಕರವಾಗಲಿದೆ.

      ಬಿಜೆಪಿ ಟಿಕೆಟ್‌ಗೆ ಎಂಟಿಬಿ ನಾಗರಾಜು ಪಟ್ಟು

      ಬಿಜೆಪಿ ಟಿಕೆಟ್‌ಗೆ ಎಂಟಿಬಿ ನಾಗರಾಜು ಪಟ್ಟು

      ಮತ್ತೊಂತೆಡೆ ಎಂಟಿಬಿ ನಾಗರಾಜು ಸಹ ಬಿಜೆಪಿ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು, ತಮ್ಮ ಪುತ್ರ ನಿತಿನ್ ಪುರುಶೋತ್ತಮ್ ಅವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನ ಮುಂದುವರೆಸಿದ್ದಾರೆ. ಇಂದು ಬೆಳಿಗ್ಗೆಯೇ ಎಂಟಿಬಿ ನಾಗರಾಜು ಅವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು, ಟಿಕೆಟ್‌ಗಾಗಿ ಮಾತುಕತೆ ನಡೆಸಿದ್ದಾರೆ.

      ಶರತ್ ಬಚ್ಚೇಗೌಡರನ್ನು ಸಂಪರ್ಕಿಸಿರುವ ಕಾಂಗ್ರೆಸ್‌

      ಶರತ್ ಬಚ್ಚೇಗೌಡರನ್ನು ಸಂಪರ್ಕಿಸಿರುವ ಕಾಂಗ್ರೆಸ್‌

      ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕ ಮಾಡಿದ್ದು, ಎರಡು ಬಾರಿ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶರತ್ ಬಚ್ಚೇಗೌಡ ಅವರು ಇನ್ನೂ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲವಾದ ಕಾರಣ ಪ್ರಸ್ತುತ ಮಾತುಕತೆ ಜಾರಿಯಲ್ಲಿಯೇ ಇದೆ.

      7,597 ಮತಗಳ ಅಂತರದಿಂದ ಗೆದ್ದಿದ್ದ ಎಂಟಿಬಿ

      7,597 ಮತಗಳ ಅಂತರದಿಂದ ಗೆದ್ದಿದ್ದ ಎಂಟಿಬಿ

      2018 ರ ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜು ಮತ್ತು ಶರತ್ ಬಚ್ಚೇಗೌಡ ಅವರು ಪರಸ್ಪರ ಎದುರಾಗಿದ್ದರು. ಆಗ ಎಂಟಿಬಿ ನಾಗರಾಜು ಅವರು 7,597 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಬರಲು ಕಾರಣವಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+