ಇಂದಿರಾನಗರದಲ್ಲಿ ಶಂಕರ್ ಮಹಾದೇವನ್ ಸಂಗೀತ ಸಂಜೆ!
ಬೆಂಗಳೂರು, ಫೆ.11: ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ರವರ ಸಂಗೀತ ಕಾರ್ಯಕ್ರಮವನ್ನು ಹಾರ್ಮನಿ ಸಂಸ್ಥೆ ಫೆಬ್ರವರಿ 14, ಭಾನುವಾರದಂದು ಇಂದಿರಾನಗರ ಕ್ಲಬ್ ನಲ್ಲಿ ಏರ್ಪಡಿಸಿದೆ.
ಹಾರ್ಮನಿ ಸಂಸ್ಥೆಯು ಕಳೆದ 14 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಅನಾಥ ಮಕ್ಕಳ ಸೇವೆಯಲ್ಲಿ ನಿರತವಾಗಿದೆ. ಇವರು ವೈದ್ಯಕೀಯ ಹಾಗು ಶಿಕ್ಷಣ ಕ್ಷೇತ್ರಗಳಲ್ಲಿ ಹಲವಾರು ಮಕ್ಕಳಿಗೆ ನೆರವು ನೀಡಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಹಾರ್ಮನಿ ಸಂಸ್ಥೆಯು ಸಲ್ಲಿಸಿರುವ ಸತತ ಸೇವೆಯಿಂದ ಇಂದು ಸಮಾಜದ ಎಲ್ಲ ವರ್ಗದಿಂದ ಸದಸ್ಯರನ್ನು ಸಂಪಾದಿಸಿದೆ. ಪ್ರಮುಖರು ಖ್ಯಾತ ಕ್ರಿಕೆಟ್ ಆಟಗಾರ ಸೈಯದ್ ಕಿರ್ಮಾನಿ, ಬಿಲಿಯರ್ಡ್ಸ್ ಆಟಗಾರ ಪಂಕಜ್ ಅದ್ವಾನಿ ಹಾಗು ಕನ್ನಡ ಚಿತ್ರ ರಂಗದ ಮೇರುನಟ ದಿವಂಗತ ವಿಷ್ಣುವರ್ಧನ್ ಅವರು ಈ ಸಂಸ್ಥೆಯ ಪೋಷಕರಾಗಿದ್ದಾರೆ.
ಕಲಾವಿದ ಶಂಕರ್ ಮಹಾದೇವನ್: ವಿದ್ವಾನ್ ಶಂಕರ್ ಮಹಾದೇವನ್ ರವರು ಖ್ಯಾತ ಹಾಡುಗಾರ ಹಾಗು ಸುಪ್ರಸಿದ್ಧ ಸಂಗೀತ ಸಂಯೋಜಕ. ಇವರು ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದ್ದು, ಕನ್ನಡ, ತಮಿಳು, ತೆಲುಗು ಮತ್ತಿತರ ಭಾಷೆಗಳ ಚಿತ್ರಗಳಿಗೆ ಹಾಡಿರುವ ಪ್ರಖ್ಯಾತ ಕಲಾವಿದರು. ಇವರು 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಹಾಗು ಶಂಕರ್-ಎಹ್ಸಾನ್-ಲಾಯ್ ಎಂಬ ಹೆಸರಾಂತ ತಂಡವನ್ನು ಪ್ರಾರಂಭಿಸಿದ್ದಾರೆ. ಇವರ ಶಂಕರ್ ಮಹಾದೇವನ್ ಮ್ಯೂಸಿಕ್ ಅಕಾಡೆಮಿಯು ಪ್ರಪಂಚಾದ್ಯಂತ ಮಕ್ಕಳಿಗೆ ಇಂಟರ್ನೆಟ್ ಮೂಲಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿಯನ್ನು ನೀಡುತ್ತಿದೆ.
ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ ಕರೆ ಮಾಡಿ - 98458 24725, visit - www.talkofthetown.in
ಇಂದಿರಾನಗರದ ಕ್ಲಬ್ ಗೆ ಗೂಗಲ್ ಮ್ಯಾಪ್ ದಾರಿ:
(ಒನ್ಇಂಡಿಯಾ ಸುದ್ದಿ)
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market












Click it and Unblock the Notifications