• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುತಾತ್ಮರ ಸ್ಮಾರಕ ಸಂರಕ್ಷಣೆಗಾಗಿ ಎಸ್ಎಫ್ ಐನಿಂದ ಪ್ರತಿಭಟನೆ

By Mahesh
|

ಬೆಂಗಳೂರು, ಮಾರ್ಚ್ 22: ಹುತಾತ್ಮ ಭಗತ್‌ಸಿಂಗ್ ಮತ್ತು ಆತನ ಸಂಗಾತಿಗಳ ಹುತಾತ್ಮ ದಿನದ ಅಂಗವಾಗಿ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಹುತಾತ್ಮ ಸ್ಮಾರಕವನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲು ಆಗ್ರಹಿಸಿ ಪ್ರತಿಭಟನಾ ಧರಣಿಯನ್ನು ಭಾರತ ವಿದ್ಯಾರ್ಥಿ ಫೆಢರೇಷನ್ (ಎಸ್.ಎಫ್.ಐ) ಹಾಗೂ ಇನ್ನಿತರ ಸಂಘಟನೆಗಳು ಮಾರ್ಚ್ 23ರಂದು ಹಮ್ಮಿಕೊಂಡಿವೆ.

ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್‌ರವರನ್ನು ಬ್ರಿಟೀಷರು ಗಲ್ಲಿಗೇರಿಸಿದ ದಿನ ಮಾರ್ಚ್ 23, ಈ ದಿನವನ್ನು ಭಾರತ ವಿದ್ಯಾರ್ಥಿ ಫೆಢರೇಷನ್ (ಎಸ್.ಎಫ್.ಐ), ಭಾರತ ಪ್ರಜಾಸತ್ತಾತ್ಮ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಜೆ.ಎಂ.ಎಸ್) ಸಂಘಟನೆಗಳು ಜಂಟಿಯಾಗಿ ದೇಶಾದ್ಯಂತ ಹುತಾತ್ಮರ ಸಂಸ್ಮರಣಾ ಕಾರ್ಯಕ್ರಮವನ್ನು ಆಚರಿಸುತ್ತಿವೆ.

ಇದರ ಭಾಗವಾಗಿ ಬೆಂಗಳೂರಿನಲ್ಲಿ ಈ ಹುತಾತ್ಮರ ಸಂಸ್ಮರಣೆಯ ಅಂಗವಾಗಿ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಹುತಾತ್ಮರ ಸ್ಮಾರಕವನ್ನು ಸಂರಕ್ಷಿಸಿ ಆಭಿವೃದ್ದಿಪಡಿಸಬೇಕೆಂದು ಆಗ್ರಹಿಸಿ ಅರ್ಥಪೂರ್ಣವಾಗಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಆಗಿರುವ ಡಾ.ಎಚ್.ಎಸ್ ದೊರೆಸ್ವಾಮಿರವರು ಉದ್ಘಾಟನೆ ಮಾಡಿ ಚಾಲನೆ ನೀಡುವರು. ವಿಚಾರವಾದಿಗಳಾಗಿರುವ ಕೆ.ಮರುಳಸಿದ್ದಪ್ಪರವರು ಸೇರಿದಂತೆ ಹಲವು ಸಾಹಿತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು. ಕಾರ್ಯಕ್ರಮದ ವಿವರಗಳು

ದಿನಾಂಕ : 23/03/2017, ಗುರುವಾರ

ಸಮಯ : ಬೆಳಗ್ಗೆ 11.30 ರಿಂದ ಮಧ್ಯಾಹ್ನ 3 ರವರೆಗೆ

ಸ್ಥಳ : ಮೈಸೂರು ಬ್ಯಾಂಕ್ ವೃತ್ತದ ಬಳಿಯಿರುವ ಹುತಾತ್ಮರ ಸ್ಮಾರಕದ ಹತ್ತಿರ

ಸಂಪರ್ಕಕ್ಕಾಗಿ : 8880031843, 7022700332

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Martyrs Day, also known as Shaheed Diwas or Sarvodaya Day, will be observed by SFI and other organisation in Bengaluru on March 23 this year to pay homage to Martyrs Bhagat Singh, Sukhdev and Rajguru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more