ಹೆಸರಘಟ್ಟದ ಕೆರೆಗಳಿಗೆ ಕೊಳಚೆ ನೀರಿನ ಹರಿವು: ಕೆಎಸ್‌ಪಿಸಿಬಿ
ಬೆಂಗಳೂರು, ಏಪ್ರಿಲ್ 3: ಹೆಸರಘಟ್ಟದ ಮೇಲ್ಭಾಗದ ಕೆರೆಗಳು ದೊಡ್ಡಬಳ್ಳಾಪುರ ಮತ್ತು ಬಾಶೆಟ್ಟಿಹಳ್ಳಿಯ ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿವೆ ಎಂದು ಕೆಎಸ್‌ಪಿಸಿಬಿ ಪತ್ತೆ ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಹಿನ್ನೆಲೆಯಲಲ್ಇ ಒಳಚರಂಡಿ ಜಾಲವನ್ನು ಪರೀಕ್ಷಿಸಲು ಮತ್ತು ಮಾಲಿನ್ಯದ ಸಂಪೂರ್ಣ ಪ್ರಮಾಣವನ್ನು ಕಂಡುಹಿಡಿಯಲು ಮೂರು ತಿಂಗಳ ಕಾಲಾವಕಾಶವನ್ನು ಕೆಎಸ್‌ಪಿಸಿಬಿ ಕೋರಿದೆ.

ದೊಡ್ಡಬಳ್ಳಾಪುರ ಮತ್ತು ಸುತ್ತಮುತ್ತಲಿನ ನಗರಕೆರೆ, ಮಜರಹೊಸಹಳ್ಳಿ (ಚಿಕ್ಕತುಮಕೂರು), ದೊಡ್ಡತುಮಕೂರು, ವೀರಾಪುರ ಮತ್ತು ಮುತ್ತೂರು ಕೆರೆಗಳು ಕಲುಷಿತಗೊಂಡಿವೆ ಎಂದು ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮುಂದೆ ಸ್ಥಿತಿಗತಿ ವರದಿಯನ್ನು ಸಲ್ಲಿಸಿದೆ.
ಪರಿಸರ ಹೋರಾಟಗಾರ ಎನ್‌ಪಿ ಗಿರೀಶ್ ಅವರು ಪರಿಸರ ಉಲ್ಲಂಘನೆಗಳ ಬಗ್ಗೆ ಗಮನ ಸೆಳೆದಿರುವ ಮನವಿಯ ಮೇರೆಗೆ ಕಾರ್ಯನಿರ್ವಹಿಸಿದ ಎನ್‌ಜಿಟಿ, ಈ ಕೆರೆಗಳಿಗೆ ಕೊಳಚೆ ನೀರು ಹರಿಯುವುದು ಮತ್ತು ಕೆರೆಯ ತಳದಲ್ಲಿ ಅಳವಡಿಸಲಾಗಿರುವ ಒಳಚರಂಡಿ ಸೇರಿದಂತೆ ಈ ಬಗ್ಗೆ ತನಿಖೆ ನಡೆಸುವಂತೆ ಕೆಎಸ್‌ಪಿಸಿಬಿಗೆ ಆದೇಶಿಸಿದೆ.
ಚಿಕ್ಕತುಮಕೂರು ಕೆರೆ ಎಂದೇ ಕರೆಯಲ್ಪಡುವ ಮಜರಹೊಸಹಳ್ಳಿ ಕೆರೆಗೆ ಸಂಸ್ಕರಿಸದ ಕೊಳಚೆ ನೀರು ಬಿಡುತ್ತಿರುವುದನ್ನು ಒಪ್ಪಿಕೊಂಡ ಮಂಡಳಿ, ದೊಡ್ಡಬಳ್ಳಾಪುರದ ಕೊಳಚೆ ನೀರನ್ನು ಕೆರೆಗೆ ಬಿಡುವ ಮುನ್ನ ಆಕ್ಸಿಡೇಷನ್ ಹೊಂಡಕ್ಕೆ ಕೊಂಡೊಯ್ದರೆ, ಬಾಶೆಟ್ಟಿಹಳ್ಳಿಯ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.

ಮೂರು ತಿಂಗಳ ಕಾಲಾವಕಾಶ ಕೋರಲು ವಿಧಾನಸಭೆ ಚುನಾವಣೆ ಕಾರಣ ಎಂದು ಕೆಎಸ್‌ಪಿಸಿಬಿ ಮಂಡಳಿ ಹೇಳಿದೆ. ಕಂದಾಯ ಇಲಾಖೆಯ ದಿಶಾಂಕ್ ಆ್ಯಪ್‌ನಲ್ಲಿ ಒದಗಿಸಲಾದ ನಕ್ಷೆಯ ಪ್ರಕಾರ, ಚಿಕ್ಕತುಮಕೂರು ಕೆರೆಯು ಹೆಸರಘಟ್ಟ ಕೆರೆಗೆ ಸಂಪರ್ಕ ಹೊಂದಿದ ಇತರ ಜಲಮೂಲಗಳ ಜಾಲದೊಂದಿಗೆ ಸಂಪರ್ಕ ಹೊಂದಿದೆ ಎಂದು ತಿಳಿಸಲಾಗಿದೆ.
ಕಳೆದ ತಿಂಗಳು ಮಾರ್ಚ್‌ನಲ್ಲಿ ಬೆಂಗಳೂರು ನಗರದ 40 ಕೆರೆಗಳಲ್ಲಿ ಶೇಕಡ 95 ಪ್ರತಿಶತದಷ್ಟು ಅತಿಕ್ರಮಿಸಲ್ಪಟ್ಟಿದೆ. ಆ 40 ಕೆರೆಗಳಲ್ಲಿ ಶೇಕಡ 85 ಪ್ರತಿಶತದಷ್ಟು ಘನತ್ಯಾಜ್ಯ ಸುರಿಯಲಾಗಿದೆ. ಅಲ್ಲದೆ ಆ ಕೆರೆಗಳಿಗೆ 80 ಪ್ರತಿಶತದಷ್ಟು ಕೊಳಚೆನೀರು ಮುಕ್ತವಾಗಿ ಹರಿಯುತ್ತಿರುವುದು ಕಂಡುಬಂದಿದೆ ಎಂದು ವರದಿಯೊಂದು ತಿಳಿಸಿತ್ತು.
ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ಐಎಸ್‌ಇಸಿ) ಪ್ರಕಟಿಸಿದ ಕಾರ್ಯಾಗಾರದ ಭಾಗವಾಗಿರುವ ಅಧ್ಯಯನವು ನಾಗರಿಕ ಗುಂಪುಗಳು, ಎನ್‌ಜಿಒಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯೂಎ) ಕೆರೆಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಕಂಡುಹಿಡಿದಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.
'ಬೆಂಗಳೂರು ಕೆರೆಗಳನ್ನು ಉಳಿಸುವ ಸವಾಲುಗಳನ್ನು ನಾಗರಿಕ ಗುಂಪುಗಳು ಹೇಗೆ ಎದುರಿಸುತ್ತಿವೆ: ಒಂದು ಅಧ್ಯಯನ' ಎಂಬ ಶೀರ್ಷಿಕೆಯ ಪತ್ರಿಕೆಯ ಸಹ-ಲೇಖಕಿ ಡಾ.ಮಾನಸಿ ಎಸ್, ನಗರದ ಕೆರೆಗಳು ಹಲವಾರು ಸಮಸ್ಯೆಗಳಿಂದ ಕೂಡಿವೆ. ಆದರೆ ಎನ್‌ಜಿಒಗಳು ಮತ್ತು ಸರೋವರ ಸಂರಕ್ಷಣಾ ಗುಂಪುಗಳ ಒಳಗೊಳ್ಳುವಿಕೆ ದೊಡ್ಡ ವ್ಯತ್ಯಾಸವನ್ನು ಮಾಡಿದೆ. ವಿವಿಧ ಗುಂಪುಗಳು, ಸರ್ಕಾರಿ ಏಜೆನ್ಸಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಹಕರಿಸುವ ಮೂಲಕ ಅವರು ನಗರಕ್ಕೆ ಅನೇಕ ಕೆರೆಗಳ ನಿರ್ವಹಣೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದರು.
ಕೆರೆಗಳ ಖಾಸಗೀಕರಣವನ್ನು ವಿರೋಧಿಸಿ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್‌ಜಿ) ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದೆ. ನಾಗರಿಕ ಗುಂಪುಗಳು ಕೆರೆಗಳನ್ನು ರಕ್ಷಿಸಲು ಕ್ರಮವನ್ನು ಕೈಗೊಂಡಿವೆ ಎಂದು ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಥಳೀಯ ನಾಗರಿಕರು ಕೆರೆಗಳ ಸ್ಥಿತಿಯಿಂದ ಬಳಲುತ್ತಿರುವವರು ಅಥವಾ ಪ್ರಯೋಜನ ಪಡೆಯುತ್ತಾರೆ ಮತ್ತು ಆದ್ದರಿಂದ ಅವರು ಅವುಗಳ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಇದು ಪ್ರೋತ್ಸಾಹದಾಯಕವಾಗಿದೆ. ಇಂತಹ ಗುಂಪುಗಳು ಸಹಭಾಗಿತ್ವದ ಆಡಳಿತದಲ್ಲಿ ಸಹಾಯ ಮಾಡುತ್ತವೆ ಎಂದು ಫ್ರೆಂಡ್ಸ್ ಆಫ್ ಲೇಕ್ಸ್ (FoL) ಗುಂಪಿನ ಸಹ-ಸಂಸ್ಥಾಪಕ ಮತ್ತು ಸಂಚಾಲಕ ವಿ ರಾಮಪ್ರಸಾದ್ ಹೇಳಿದ್ದರು.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ











Click it and Unblock the Notifications