ಸೆಕೆಂಡ್ ಹ್ಯಾಂಡ್ ಬೈಕ್ ಕಡಿಮೆ ದರದಲ್ಲಿ ಖರೀದಿಸಿ

ವಾರಸುದಾರರು ಇಲ್ಲದ ಏಳು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ಜೂ.28ರಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯಲಿದೆ.[ಹರಾಜಾದ ಸಚಿನ್ ಬ್ಯಾಟ್ ಕನ್ನಡಿಗನೊಬ್ಬನ ಬಳಿ]
ಅನಾಮದೇಯ ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆಗಾಗಿ ಸಂಬಂಧಪಟ್ಟ ಆರ್.ಟಿ.ಓ ಕಛೇರಿಗಳು ಹಾಗೂ ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದ್ದರೂ ದ್ವಿಚಕ್ರ ವಾಹನಗಳಿಗೆ ವಾರಸುದಾರರು ಇದುವರೆಗೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಅವರಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.
ಟಿವಿಎಸ್ ವಿಕ್ಟರ್, ಹಿರೋಹೊಂಡಾ ಸ್ಪ್ಲಂಡೆರ್, ಸುಜುಕಿ ಸಮುರಾಯ್, ಸುಜುಕಿ ಮ್ಯಾಕ್ಸ್, ಕೈನೆಟಿಕ್ ಹೋಂಡಾ, ಟಿವಿಎಸ್ ಎಚ್‌ಡಿ, ಸುಜುಕಿ ಬೈಕ್‌ಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಶೇಷಾದ್ರಿಪುರಂ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications