Get Updates
Get notified of breaking news, exclusive insights, and must-see stories!

3 ಮಕ್ಕಳನ್ನು ಕೊಂದು ಸೆಕ್ಯುರಿಟಿ ಗಾರ್ಡ್ ತಾನೂ ಆತ್ಮಹತ್ಯೆ !

ಬೆಂಗಳೂರು ನ.13: ಬಯಸಿ ಜನ್ಮ ಕೊಟ್ಡಿದ್ದು ನೀನೆ...ಅಮ್ಮ ಸತ್ತ ಮೇಲೆ ಎಲ್ಲವೂ ನೀನೆ ಅಂತ ಮಡಿಲಲ್ಲಿ ಮಲಗಿದಾಗ ಭಾರವಾದೆನಾ ? ಬಿಟ್ಟು ಬಿಟ್ಟಿದ್ದರೆ ಭಿಕ್ಷೆಯಾದರೂ ಬೇಡಿ ಬದುಕುತ್ತಿರಲಿಲ್ಲವೇ ? ಮಕ್ಕಳ ಅಕ್ಕಂದಿರ ಜತೆ ಆಟ ವಾಡಬೇಕಿದ್ದ ಮೂರು ವರ್ಷದ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಮಲಗಿದ್ದ. ಜತೆಗೆ ಇಬ್ಬರು ಪುಟ್ಟ ಅಕ್ಕಂದಿರು ಚಿರ ನಿದ್ರೆಗೆ ಜಾರಿದ್ದರು.

ಇಂತಹ ಕರುಣಾ ಜನಕ ಘಟನೆ ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ‌. ಮೂರು ಮುದ್ದು ಕಂದಮ್ಮಗಳನ್ನು ನೇಣು ಹಾಕಿ ಕೊಲೆ ಮಾಡಿರುವ ತಂದೆ ತಾನೂ ಆತ್ಮಹತ್ಯೆ ಗೆ ಶರಣಾಗಿದ್ದಾನೆ.

ಮೈಕೋ ಲೇಔಟ್ ನ ರಮಣಶ್ರೀ ಎನ್ ಕ್ಲೇವ್ ನಿವಾಸಿ ಜನಕರಾಜ್ ಬಿಸ್ತಾ, 32 ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೂ ಮುನ್ನ ತನ್ನ ಮೂವರು ಮಕ್ಕಳಾದ ಸರಸ್ವತಿ, ಹೇಮಂತಿ, ಮೂರು ವರ್ಷದ ಕಂದಮ್ಮ ರಾಜ್ ಕುಮಾರ್ ಜನ್ಮ ಕೊಟ್ಟ ತಂದೆಯಿಂದಲೇ ಕೊಲೆಯಾದ ದುರ್ದೈವಿಗಳು. ನಾಲ್ಕು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೈಕೋ ಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Security guard killed his 3 children and then ended his life too

ಎರಡು ತಿಂಗಳ ಹಿಂದೆ ಜನಕರಾಜ್ ಪತ್ನಿ ನಂದಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಜನಕರಾಜ್ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಮಕ್ಕಳನ್ನು ನೋಡಿಕೊಳ್ಳಲಾಗದೇ ಖಿನ್ನತೆಗೆ ಒಳಗಾಗಿದ್ದರು‌.

Recommended Video

      ಅವರ ಪೇಪರ್ ನಲ್ಲಿ ಆರ್ಟಿಕಲ್ ಬಂದ್ರೆ ಪೊಲೀಸ್ ಕೆಲಸ ಹೋಗೋದು ಪಕ್ಕ | oneindia Kannada

      ಗುರುವಾರ ರಾತ್ರಿ ಮಕ್ಕಳಿಗೆ ಊಟ ಕೊಟ್ಟು ಮಲಗಿಸಿದ್ದ ಜನಕರಾಜ್ ಮೂವರನ್ನು ನೇಣಿಗೆ ಹಾಕಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಮೆ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಮೈಕೋ ಲೇವೌಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+