ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ: ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?
ಬೆಂಗಳೂರು, ಜೂನ್ 16: ಎಲ್ಲವೂ ಅಂದುಕೊಂಡಂತೆ ಆದರೆ ಮಹಾನಗರ ಬೆಂಗಳೂರಿಗೆ ಇನ್ನು ಕೆಲವು ವರ್ಷಗಳಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಹೊಂದಲಿದೆ. ಸಂಪರ್ಕ ಸಮಸ್ಯೆಗಳನ್ನು ಪರಿಸುವ ದೃಷ್ಟಿಯಿಂದ ಎರಡನೇ ವಿಮಾನ ನಿಲ್ದಾಣ ಮಾಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯು ಸಂಪರ್ಕ ಸಮಸ್ಯೆಗಳನ್ನು ಸುಧಾರಿಸುವುದರ ಜೊತೆಗೆ ದಟ್ಟಣೆಯಿಂದ ಪರಿಹಾರವನ್ನು ನೀಡುತ್ತದೆ, ಆದರೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಅಗತ್ಯವು ನಗರದ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸಾರಿಗೆ ಸಂಪರ್ಕ ಪ್ರಮುಖ ಸಮಸ್ಯೆಯಾಗಿದೆ. ಇಲಾಖೆಯೂ ಈಗಾಗಲೇ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆ ನಡೆಸಲಾಗುತ್ತಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು.
ಮೊದಲು, ಹೆಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಎಟಿಆರ್ ಗಳು ಮತ್ತು ಪ್ರಾದೇಶಿಕ ವಿಮಾನಗಳಂತಹ ಸಣ್ಣ ವಿಮಾನಗಳನ್ನು ನಿಭಾಯಿಸಬಲ್ಲ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಯು ಇನ್ನೂ ಯೋಜನೆಯ ಹಂತದಲ್ಲಿದೆ, ಮುಂದಿನ ಸಭೆಯಲ್ಲಿ ಆಯ್ಕೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲುಮಾರ್ಗ ಸಹಾಯಕ
ಬೆಂಗಳೂರು ಉಪನಗರ ರೈಲುಮಾರ್ಗದ ಬಗ್ಗೆ ತಮ್ಮ ಯೋಜನೆಗಳನ್ನು ಹಂಚಿಕೊಂಡ ಅವರು, ನಗರ ದಟ್ಟಣೆಯನ್ನು ಕಡಿಮೆ ಮಾಡಲು ಇದು ಅತ್ಯಗತ್ಯ ಎಂದು ಹೇಳಿದರು. ಉಪನಗರ ಯೋಜನೆಯನ್ನು ಮೈಸೂರು, ತುಮಕೂರು, ಗೌರಿಬಿದನೂರು, ದಾಬಸ್‌ಪೇಟೆ ಮತ್ತು ಕೋಲಾರಕ್ಕೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಹೇಳಿದರು.
"ನಾವು ಎರಡು ಹಂತಗಳಲ್ಲಿ ಉಪನಗರ ರೈಲನ್ನು ಪ್ರಾರಂಭಿಸುವ ಸಾಧ್ಯತೆ ಬಗ್ಗೆ ಚಿಂತಿಸುತ್ತಿದ್ದೇವೆ, ವಿಸ್ತರಣೆಗಳನ್ನು 2 ಹಂತದಲ್ಲಿ ಪರಿಗಣಿಸಲಾಗುವುದು. ನಾವು ಪೆರಿಫೆರಲ್ ರಿಂಗ್ ರಸ್ತೆಯ ಉದ್ದಕ್ಕೂ ವೃತ್ತಾಕಾರದ ಮಾರ್ಗಗಳನ್ನು ನಿರ್ಮಿಸುವ ಬಗ್ಗೆ ಸಹ ಪರಿಗಣಿಸಬಹುದು" ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಕೈಗಾರಿಕೀಕರಣದ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವಾಗ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಯೋಜನೆಯ ಬಗ್ಗೆ ತಿಳಿಸಿದರು. ಆರಂಭಿಕ ಯೋಜನೆಗಳ ಭಾಗವಾಗಿ, ಅವರು ಇತ್ತೀಚೆಗೆ ತಮ್ಮ ಅಧೀನದಲ್ಲಿರುವ ಇಲಾಖೆಗಳನ್ನು ಪರಿಶೀಲಿಸಿದರು ಮತ್ತು ಕೈಗಾರಿಕೆಗಳಿಗೆ ಕರ್ನಾಟಕವು ಅತ್ಯುತ್ತಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ನಾವು ಐಟಿ-ಬಿಟಿ ಮತ್ತು ಸೇವೆಗಳಲ್ಲಿ ಮುನ್ನಡೆಸುತ್ತಿರುವಾಗ, ನಾವು ಉತ್ಪಾದನಾ ವಲಯದಲ್ಲಿ ಹಿಂದುಳಿದಿದ್ದೇವೆ. ನಾವು ಈ ವಲಯಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದಲು ಉದ್ದೇಶಿಸಿದ್ದೇವೆ." ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications