ಹಣದಾಹಿ ಶಾಲೆ ವಿರುದ್ಧ ತಿರುಗಿಬಿದ್ದ ಪೋಷಕರು

ಬೆಂಗಳೂರು, ಜೂನ್‌.17: ಏಕಾಏಕಿ ಬೋಧನಾ ಶುಲ್ಕ ಏರಿಕೆಯನ್ನು ಖಂಡಿಸಿ ಸಹಕಾರ ನಗರದ ಸ್ವಾಮಿ ವಿವೇಕಾನಂದ ಶಾಲೆಯ ಪೋಷಕರ ಸಂಘದ ಸದಸ್ಯರು ಶಾಲೆಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

27,300 ರೂಪಾಯಿ ಇದ್ದ ಶುಲ್ಕ ಇದ್ದಕ್ಕಿದ್ದಂತೆ 46 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕಟ್ಟಡ ನವೀಕರಣ, ಈಜುಕೊಳ ನಿರ್ಮಾಣದ ಹೆಸರಿನಲ್ಲಿ ಶುಲ್ಕವನ್ನು ಹೆಚ್ಚಿಸಿದ್ದಾರೆ. ಜೊತೆಗೆ ಇಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ ಎಂದು ಪೋಷಕರಾದ ಚಿದಾನಂದ ಅವರು ಒನ್‌ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಪೋಷಕರ ಪ್ರತಿಭಟನೆ ಯಾಕೆ?
ಸಹಕಾರ ನಗರದಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಕಳೆದ ವರ್ಷ‌ 27,300 ರೂಪಾಯಿ ಬೋಧನಾ ಶುಲ್ಕ ನಿಗದಿಯಾಗಿತ್ತು. ಆದರೆ ಈ ವರ್ಷದಿಂದ ಶುಲ್ಕ 46 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಈ ಸಂಬಂಧ ಪ್ರತಿಭಟನೆ ನಡೆಸಲು ಪೋಷಕರು ನಿರ್ಧರಿಸುತ್ತಿದ್ದಂತೆ ಶುಲ್ಕವನ್ನು 40 ಸಾವಿರ ರೂಪಾಯಿಗೆ ಇಳಿಕೆ ಮಾಡಿದ್ದಾರೆ. ಇದಕ್ಕೂ ಒಪ್ಪದ ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದ ಮೇಲೆ 36 ಸಾವಿರಕ್ಕೆ ಶುಲ್ಕ ಇಳಿಸಿದ್ದಾರೆ.

ಎರಡು ಸಲ ಡೊನೇಷನ್‌:

ಎರಡು ಸಲ ಡೊನೇಷನ್‌:

ಸಾಮಾನ್ಯವಾಗಿ ವಿದ್ಯಾರ್ಥಿಗಳು‌ ಶಾಲೆಗ ಸೇರುವ ಸಂದರ್ಭದಲ್ಲಿ ಒಂದು ಸಲ ಡೊನೇಷನ್‌ ಶುಲ್ಕವನ್ನು ಕಟ್ಟಿದರೆ ಆ ಶಾಲೆಯಲ್ಲಿ ವಿದ್ಯಾರ್ಥಿ‌ ಕಲಿಯುವವರೆಗೂ ಮತ್ತೆ ಡೊನೇಷನ್‌ ಕಟ್ಟಬೇಕಿಲ್ಲ. ಆದರೆ ಇಲ್ಲಿ ಎರಡು ಸಲ ಡೊನೇಷನ್‌ ಶುಲ್ಕ ಕಟ್ಟಬೇಕಿದೆ.

ಇದೇ ಶಾಲೆಯ ಆಡಳಿತ ಮಂಡಳಿಯವರು ನಡೆಸುವ ಶಾಲೆಯಲ್ಲಿ ಪ್ರಿ ಸ್ಕೂಲ್‌ಗೆ ಸೇರಿದ ವಿದ್ಯಾರ್ಥಿ‌ಯನ್ನು ಮತ್ತೆ ಪುನಃ ಒಂದನೇ ತರಗತಿಗೆ ಸೇರಿಸಬೇಕಿದ್ದರೆ ಮತ್ತೊಮ್ಮೆ ಡೊನೇಷನ್‌ ನೀಡಬೇಕಿದೆ.

 ಆದಾಯ ನೋಡಿ ಡೊನೇಷನ್‌ ಶುಲ್ಕ!

ಆದಾಯ ನೋಡಿ ಡೊನೇಷನ್‌ ಶುಲ್ಕ!

ಪೋಷಕರ ಉದ್ಯೋಗ ಮತ್ತು ಆದಾಯವನ್ನು ನೋಡಿ ಡೊನೇಷನ್‌ ಶುಲ್ಕವನ್ನು ನಿಗದಿ ಪಡಿಸುತ್ತಾರೆ. ಈ ವಿಚಾರವನ್ನು ಪ್ರಶ್ನಿಸಿದರೆ ಮಾತ್ರ ಆಡಳಿತ ಮಂಡಳಿಯವರು ಸ್ವಲ್ಪ ಶುಲ್ಕದಲ್ಲಿ ವಿನಾಯಿತಿ ನೀಡಿ ಯಾರಿಗೂ ಈ ವಿಚಾರವನ್ನು ಹೇಳಬೇಡಿ ಎಂದು ಪೋಷಕರಲ್ಲಿ ಹೇಳುತ್ತಾರೆ.

ಸಭೆ ಇಲ್ಲ:

ಸಭೆ ಇಲ್ಲ:

ಈ ಹಿಂದೆ ಎಲ್ಲಾ ಪೋಷಕರನ್ನು ಸೇರಿಸಿ ಬಹಿರಂಗ ಸಭೆಗಳನ್ನು ಶಾಲೆ ಆಯೋಜಿಸುತಿತ್ತು. ಆದರೆ ಕಳೆದ ಎರಡುವರೆ ತಿಂಗಳಿನಿಂದ ಯಾವುದೇ ಸಭೆ ನಡೆಸುತ್ತಿಲ್ಲ. ಎಲ್ಲಾ ಪೋಷಕರು ಒಗ್ಗಟ್ಟಾದರೆ ಶಾಲೆಯ ಅವ್ಯವಹಾರ ತಿಳಿಯುತ್ತದೆ ಎನ್ನುವ ಕಾರಣಕ್ಕೆ ಸಭೆ ನಡೆಸುತ್ತಿಲ್ಲ ಎಂದು ಪೋಷಕರು ಶಾಲೆಯ ಆಡಳಿತ ಮಂಡಳಿಯ ವಿರುದ್ದ ಆರೋಪ ಮಾಡಿದ್ದಾರೆ.

 ಮುಂದಿನ ವರ್ಷ ಶುಲ್ಕ ಗೊತ್ತಿಲ್ಲ!

ಮುಂದಿನ ವರ್ಷ ಶುಲ್ಕ ಗೊತ್ತಿಲ್ಲ!

ಪೋಷಕರ ಪ್ರತಿಭಟನೆಯಿಂದ ಎಚ್ಚೆತ್ತ ಆಡಳಿತ ಮಂಡಳಿ ಈಗ ಶುಲ್ಕವನ್ನು ಇಳಿಕೆ ಮಾಡಿದೆ. ಆದರೆ ಮುಂದಿನ ವರ್ಷ‌ ಶಾಲೆ ಎಷ್ಟು ಶುಲ್ಕ ನಿಗದಿ ಪಡಿಸಲಿದೆ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಹೆಚ್ಚು ಶುಲ್ಕ ವಿಧಿಸಿದರೂ ಬೇರೆ ಶಾಲೆಗೆ ಸೇರಿಸಲು ಸಾಧ್ಯವಾಗದೇ ಶಾಲೆ ನಿಗದಿ ಪಡಿಸಿದ ಶುಲ್ಕವನ್ನೇ ಕಟ್ಟಬೇಕಿದೆ ಅಂತಾರೆ ಪೋಷಕರು.

 ಪ್ರತಿಕ್ರಿಯೆ ಇಲ್ಲ:

ಪ್ರತಿಕ್ರಿಯೆ ಇಲ್ಲ:

ಪೋಷಕರ ಪ್ರತಿಭಟನೆಗೆ ಸಂಬಂಧಿಸಿದಂತೆ ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆಯನ್ನು ಇದುವರೆಗೂ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+