School Fee Hike: ಶಾಲಾ & ಕಾಲೇಜ್ ಫೀಸ್ ಈ ವರ್ಷದಿಂದ ಈ ಕಾರಣಕ್ಕೆ ಇನ್ನಷ್ಟು ದುಬಾರಿ!
School Fee Hike: ಬೆಂಗಳೂರು ಸೇರಿ ರಾಜ್ಯದಲ್ಲಿ ಈಗಾಗಲೇ ಶಾಲಾ - ಕಾಲೇಜುಗಳು ಫೀಸ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಇದೀಗ ಶಾಲಾ - ಕಾಲೇಜು ಫೀಸ್‌ನೊಂದಿಗೆ ಮತ್ತೊಂದು ಶಾಕ್ ಅನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಕೊಟ್ಟಿದ್ದು, ಇದೀಗ 2025-2026ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಶಾಲಾ ಶುಲ್ಕ / ಸ್ಕೂಲ್ ಫೀಸ್ ಇನ್ನಷ್ಟು ಹೆಚ್ಚಳವಾಗಲಿದೆ. ರಾಜ್ಯ ಸರ್ಕಾರವು ವಿವಿಧ ಬೆಲೆ ಏರಿಕೆಗಳ ನಂತರ ಇದೀಗ ಪಠ್ಯ - ಪುಸ್ತಕದ ಬೆಲೆಯಲ್ಲೂ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ದೊಡ್ಡ ಶಾಕ್ ಕೊಟ್ಟಿದೆ. ಈಗಾಗಲೇ ಶಾಲಾ ವಾಹನಗಳ ಫೀಸ್ ಸಹ ಹೆಚ್ಚಾಗುವ ಆತಂಕವೂ ಇದೆ ಅದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆಯ ಬಿಸಿಯನ್ನು ಕೊಟ್ಟಿದೆ. ಇದೀಗ ಪಠ್ಯ - ಪುಸ್ತಕಗಳ ಬೆಲೆಯನ್ನೂ ಸಹ ಭರ್ಜರಿ ಹೆಚ್ಚಳ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳ ಬುಕ್ ರೇಟ್ ಜಾಸ್ತಿಯಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇನ್ನು ಕರ್ನಾಟಕ ಸರ್ಕಾರವು ಶಾಲಾ ವಿದ್ಯಾರ್ಥಿಗಳ ಪಠ್ಯ - ಪುಸ್ತಕದ ಬೆಲೆಯನ್ನು ಬರೋಬ್ಬರಿ ಶೇ 10ರಷ್ಟು ಹೆಚ್ಚಳ ಮಾಡಿದೆ. ಸರ್ಕಾರದ ಈ ಹೊಸ ಕ್ರಮವು ಶಾಲಾ - ಕಾಲೇಜು ವಿದ್ಯಾರ್ಥಿಗಳ ಪ್ರವೇಶ ಶುಲ್ಕ / ಫೀಸ್ ಹೆಚ್ಚಾಗುವುದಕ್ಕೂ ಕಾರಣವಾಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಇದರಿಂದ ಶಾಲಾ ವಾಹನಗಳ ವೆಚ್ಚವನ್ನೂ ಖಾಸಗಿ ಶಾಲೆಗಳು ಹೆಚ್ಚಳ ಮಾಡುವ ಆತಂಕ ಇದೆ.

ಪಠ್ಯ ಪುಸ್ತಕ ಬೆಲೆ ಹೆಚ್ಚಳ: ಕರ್ನಾಟಕ ಸರ್ಕಾರ ಸರಬರಾಜು ಮಾಡುವ ಪಠ್ಯ - ಪುಸ್ತಕಗಳ ಬೆಲೆಯನ್ನು ಶೇ 10% ಹೆಚ್ಚಳ ಮಾಡಲಾಗಿದೆ. ರ್ನಾಟಕ ಪಠ್ಯಪುಸ್ತಕ ಸಂಘವು ರಾಜ್ಯದ ಎಲ್ಲಾ ಶಾಲೆಗಳ ಬೇಡಿಕೆಗೆ ತಕ್ಕಂತೆ ರಾಜ್ಯ ಪಠ್ಯಕ್ರಮದ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುತ್ತದೆ ಮತ್ತು ಶಾಲೆಗಳಿಗೆ
ವಿತರಿಸುತ್ತದೆ. ಇದೀಗ ಸರ್ಕಾರಿ ಶಾಲೆಗಳಿಗೆ ಉಚಿತ ಹಾಗೂ ಖಾಸಗಿ ಶಾಲೆಗಳಿಗೆ ನಿಗದಿತ ದರ ತೆಗೆದುಕೊಳ್ಳುತ್ತಿದೆ.
ಆದರೆ, ಕಳೆದ ಬಾರಿ 34 ರೂಪಾಯಿ ಇದ್ದ ಶುಲ್ಕವು ಈ ಬಾರಿ 36 ರೂಪಾಯಿಗೆ ಹೆಚ್ಚಳವಾಗಿದೆ. ಅಲ್ಲದೇ ಕೆಲವು ಪುಸ್ತಕಗಳ ಬೆಲೆಯು ಶೇ.100ರಷ್ಟು ಹೆಚ್ಚಳವಾಗಿದೆ. ಇಂಗ್ಲಿಷ್ ಭಾಷೆಯ ಪುಸ್ತಕವು ಕಳೆದ ವರ್ಷ 25 ರೂಪಾಯಿ ಇತ್ತು. ಈ ವರ್ಷ 51 ರೂಪಾಯಿಗೆ ಏರಿಕೆ ಕಂಡಿದೆ.

ಪಠ್ಯ ಪುಸ್ತಕ ಫೀಸ್ ಹೆಚ್ಚಳ: ಇನ್ನು ಒಂದೊಂದು ಪಠ್ಯ ಪುಸ್ತಕದ ಬೆಲೆಯೂ ಒಂದೊಂದು ರೀತಿಯಲ್ಲಿ ಹೆಚ್ಚಳವಾಗಿದ್ದು. ಇದರಿಂದ ಈ ವರ್ಷ ಖಾಸಗಿ ಶಾಲೆಗಳು ಪಠ್ಯ ಪುಸ್ತಕದ ಫೀಸ್ ಹೆಚ್ಚಾಗಿ ನಮೂದಿಸುವ ಅಥವಾ ಪಡೆಯುವ ಆತಂಕ ಎದುರಾಗಿದೆ. ಈಗಾಗಲೇ ಶಾಲಾ ಫೀಸ್‌ಗಳು ಲಕ್ಷ .. ಲಕ್ಷ ಆಗಿವೆ. ಇದೀಗ ಇದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ.
ಶಾಲಾ ವಾಹನಗಳ ಬೆಲೆ ಹೆಚ್ಚಳ ಸಾಧ್ಯತೆ !
ಇನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಪರಸ್ಪರ ಬೆಲೆ ಏರಿಕೆಯ ಬಗ್ಗೆ ದೂರುತ್ತಲ್ಲೇ ಎರಡೂ ಸರ್ಕಾರಗಳು ಸಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿವೆ. ಇದದಿಂದ ಈ ಬಾರಿ ಶಾಲಾ - ಕಾಲೇಜು ವ್ಯಾನ್ (ಶಾಲಾ - ಕಾಲೇಜಿಗೆ ಮಕ್ಕಳು, ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಬಸ್)ನ ಫೀಸ್ ಹೆಚ್ಚಳ ಮಾಡುವ ಆಂತಕವೂ ಎದುರಾಗಿದೆ. ಈ ಮೂಲಕ ಶಾಲಾ - ಕಾಲೇಜ್ ಫೀಸ್ ಈ ಬಾರಿ ಇನ್ನಷ್ಟು ದುಬಾರಿಯಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.












Click it and Unblock the Notifications