Breaking; ಶಾಲಾ ಬಸ್ ಡಿಕ್ಕಿ, ಬೆಂಗಳೂರಲ್ಲಿ 16 ವರ್ಷದ ಬಾಲಕಿ ಸಾವು

ಬೆಂಗಳೂರು, ಮೇ 26; ಶಾಲಾ ಬಸ್ ಡಿಕ್ಕಿ ಹೊಡೆದು 16 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಬೆಂಗಳೂರು ನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಈ ಅಪಘಾತ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಹಾರೋಹಳ್ಳಿ ನಿವಾಸಿ ಕೀರ್ತನಾ ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಹರ್ಷಿತಾ, ದರ್ಶನ್ ಮತ್ತು ಕೀರ್ತನಾ ತ್ರಿಬಲ್‌ ರೈಡ್ ಹೋಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕೀರ್ತನಾ ಮೃತಪಟ್ಟಿದ್ದಾರೆ.

School Bus Accident 16 Year Old Girl Killed In Bengaluru

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೀರ್ತನಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 82ರಷ್ಟು ಅಂಕಗಳಿಸಿದ್ದಳು. ಪಿಯುಸಿಗೆ ಸೇರ್ಪಡೆಯಾಗುವ ತಯಾರಿಯಲ್ಲಿದ್ದಳು. ಓದುತ್ತಲೇ ಪಾರ್ಟ್‌ ಟೈಂ ಕೆಲವನ್ನು ಮಾಡುತ್ತಿದ್ದ ಕೀರ್ತನಾ ಮನೆ ನಡೆಸಲು ಸಹಾಯವನ್ನು ಮಾಡುತ್ತಿದ್ದಳು.

ಕೀರ್ತನಾ ತಂದೆ ನಾಗರಾಜ್ ಆಟೋ ಚಾಲಕರು. ತಾಯಿ ಮನೆಗೆಳಸ ಮಾಡುತ್ತಾರೆ. ಗುರುವಾರ ಪತ್ನಿ ಮತ್ತು ಮಕ್ಕಳನ್ನು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಕರೆದುಕೊಂಡು ಬಂದ ನಾಗರಾಜ್ ಮಕ್ಕಳನ್ನು ಇಳಿಸಿ, ಆಟೋದಲ್ಲಿ ಪತ್ನಿಯನ್ನು ಕೆಲಸ ಮಾಡುವ ಸ್ಥಳಕ್ಕೆ ಬಿಡಲು ಹೋಗಿದ್ದರು.

Recommended Video

      Virat ಸಿಡಿಸಿದ ಅದ್ಭುತ ಫೋರ್ ಮತ್ತು ಇದಕ್ಕೆ ಗಂಗೂಲಿ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ |#cricket|Oneindia Kannada

      ಬಳಿಕ ಕೀರ್ತನಾ ಸ್ನೇಹಿತ ದರ್ಶನ್‌ಗೆ ಕರೆ ಮಾಡಿ ಮನೆಗೆ ಬೈಕ್‌ನಲ್ಲಿ ಹೊರಟಿದ್ದಳು. ಈ ವೇಳೆ ಶಾಲಾ ಬಸ್ ಡಿಕ್ಕಿ ಹೊಡೆದು ಕೀರ್ತನಾ ಸ್ಥಳದಲ್ಲಿ ಮೃತಪಟ್ಟರೇ ಕೀರ್ತನಾ ಅಕ್ಕ ಹರ್ಷಿತಾ ಮತ್ತು ಸ್ನೇಹಿತ ದರ್ಶನ್‌ಗೆ ಗಾಯಗಳಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+