ಬೆಂಗಳೂರಿನ ತ್ಯಾಜ್ಯದಿಂದ ಬನ್ನೇರುಘಟ್ಟ ಉದ್ಯಾನವನ್ನು ರಕ್ಷಿಸಿ

ಬೆಂಗಳೂರು, ಏಪ್ರಿಲ್ 9: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಲೂ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯವಷ್ಟೇ ಅಲ್ಲದೆ ಅದನ್ನು ಸುಡುವುದರಿಂದ ಪ್ರಾಣಿಗಳ ಅರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.

ಇದೆಲ್ಲವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸಲುವಾಗಿ ಅರಣ್ಯ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರೆಲ್ಲರೂ ಸೇರಿ ಉದ್ಯಾನದ ಸ್ವಚ್ಛ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 60ಮಂದಿ ಸ್ವಯಂ ಸೇವಕರು ಹಾಗೂ 35 ಮಂದಿ ಅರಣ್ಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

ಕಳೆದ ವಾರ ಉದ್ಯಾನದ ಕೆಲವು ಭಾಗಗಳನ್ನು ಸ್ವಚ್ಛಗೊಳಿಸಿ ಆ ಸ್ಥಳದಿಂದ 11 ಟ್ರಕ್ ನಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ. ಸುಮಾರು 1 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸ್ವಚ್ಛಗೊಳಿಸಿದ್ದಾರೆ. ಬನ್ನೇರುಘಟ್ಟ ಉದ್ಯಾನ ಸುಮಾರು 3.5ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

Saving Bannerghatta National Park from citys garbage

ಉದ್ಯಾನದ ಸುತ್ತಮುತ್ತಲಿರುವ ಕಾಂಪೌಂಡ್ ಬಳಿ ಸ್ಥಳೀಯರು ತ್ಯಾಜ್ಯವನ್ನು ತಂದು ಎಸೆಯುತ್ತಾರೆ. ತಿಂಗಳ ಎರಡನೇ ಶನಿವಾರ ಶುಚಿಗೊಳಿಸಲಾಗುತ್ತದೆ ಎಂದು ಕೆ.ಆರ್ ಪುರಂ ಕಾಂಸ್ಟಿಟುಯೆನ್ಸಿ ವೆಲ್ ಫೇರ್ ಫೆಡರೇಷನ್ ನ ವಿ.ಪಿ. ಕೃಷ್ಣ ತಿಳಿಸಿದ್ದಾರೆ.

ಆನೆಯ ಲದ್ದಿಯಲ್ಲಿ ಪ್ಲಾಸ್ಟಿಕ್ ನೋಡಿ ಭಯವಾಗಿತ್ತು. ಉದ್ಯಾನದ ಸುತ್ತಮುತ್ತ ತ್ಯಾಜ್ಯವನ್ನು ಸುರಿಯದಂತೆ ಸ್ಥಳೀಯರ ಬಳಿ ಮಾತುಕತೆ ನಡೆಸಲಾಗಿದೆ. ಸ್ವಯಂ ಸೇವಕರು ಕೈಗೊಂಡ ಸ್ವಚ್ಛತಾ ಅಭಿಯಾನದಿಂದ ಶೇ. 50ರಷ್ಟು ತ್ಯಾಜ್ಯ ವಿಲೇವಾರಿಯಾಗಿದೆ. ಒಟ್ಟು 33 ಟನ್‌ ಆಗುವಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+