• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು:ಅಕ್ರಮ ವೀಸಾದಲ್ಲಿ ನೆಲೆಸಿದ್ದ ವಿದೇಶಿ ಪ್ರಜೆ ಬಂಧನ

|

ಬೆಂಗಳೂರು,ಜನವರಿ 27: ವೀಸಾ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ.

ವೀಸಾ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಭಾರತದಲ್ಲೇ ನೆಲೆಸಿ ಪಾಸ್‍ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ವಿದೇಶಿ ಪ್ರಜೆಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

FAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲFAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲ

ಸಿರಿಯಾ ದೇಶದ ಒಸಾಮ ಮಹಮ್ಮದ್ ದುಬೆ (30) ಬಂಧಿತ ವಿದೇಶಿ ಪ್ರಜೆ. ಈತನಿಂದ ಪಾಸ್‍ಪೋರ್ಟ್, ಗುರುತಿನ ಚೀಟಿ, ನಕಲಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತೀಯನೆಂದು ಗುರುತಿಸಿಕೊಳ್ಳಲು ಆತ ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿನಲ್ಲಿಯೇ ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ ಮಾಡಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಕಂಡುಬಂದಿದೆ.

ಹೆಗಡೆನಗರದ ಬಾಲಾಜಿ ಕೃಪಾ ಲೇಔಟ್‍ನಲ್ಲಿ ವಿದೇಶಿ ಪ್ರಜೆಯೊಬ್ಬರು ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಸಂಪಿಗೆಹಳ್ಳಿ ಪೋಲೀಸರಿಗೆ ಮಾಹಿತಿ ಬಂದಿದೆ. ಈ ಆಧಾರದ ಮೇಲೆ ಪೊಲೀಸರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಆತನ ಬಳಿ ಭಾರತೀಯ ಪಾಸ್‍ಪೋರ್ಟ್ ಇರುವುದು ಕಂಡು ಆತನ ಮೇಲೆ ಶಂಕೆ ವ್ಯಕ್ತವಾಗಿ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡದೆ ತಡಬಡಾಯಿಸಿದ್ದಾನೆ.

   ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

   ಆತ ಈ ಹಿಂದೆ ವಿದೇಶದಿಂದ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ ಅನಧಿಕೃತವಾಗಿ ಭಾರತದಲ್ಲೇ ನೆಲೆಸಿ ಪಾಸ್‍ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.

   English summary
   Acting On a tipoff, Sampigehalli Police arrested a Saudi national living illegally in the city and recovered 3 Passports including an Indian One.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X