ಎಂಎಲ್ಎ ರೆಡ್ಡಿ ಕಾರಿಗೆ ಬಂಡೆಪಾಳ್ಯದ ಬೆಂಕಿ: ಜನ ಪ್ರತಿನಿಧಿಗಳು ಕಲಿಯಬೇಕಾದ ಪಾಠವೇನು?
ಬೆಂಗಳೂರು, ಆ. 16: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬಂಡೆಪಾಳ್ಯದ ಬೆಂಕಿ ಬಿದ್ದು ನಾಲ್ಕು ದಿನ ಕಳೆದಿದೆ. ಇದು ಜನ ಪ್ರತಿನಿಧಿಗಳಿಗೆ ಪಾಠವೇ? ಹೀಗೊಂದು ಪ್ರಶ್ನೆ ಕೇಳಬೇಕಾದ ಬೆಳವಣಿಗೆ ಶಾಸಕ ಸತೀಶ್ ರೆಡ್ಡಿ ಪ್ರಕರಣದಲ್ಲಿ ನಡೆದಿದೆ. ಅಂದಹಾಗೆ ಸತೀಶ್ ರೆಡ್ಡಿ ಅವರ ಎರಡು ಕಾರುಗಳಿಗೆ ಬಂಡೆ ಪಾಳ್ಯದ ಹುಡುಗರು ಬೆಂಕಿ ಇಟ್ಟಿರುವ ಹಿಂದನ ಅಸಲಿ ಕಾರಣ ಹುಡುಕುತ್ತಾ ತೆರಳಿದ ಒನ್ ಇಂಡಿಯಾ ಕನ್ನಡಕ್ಕೆ ಸಿಕ್ಕ ಮಾಹಿತಿ ಇಲ್ಲಿದೆ.
ಬಡವ, ಶ್ರೀಮಂತ ಎನ್ನುವ ತಾರತಮ್ಯ ನೋಡದೇ ಮತ ಕೇಳುವ ಜನ ಪ್ರತಿನಿಧಿಗಳು ಶಾಸಕರಾಗಿ ಆಯ್ಕೆಯಾದ ಬಳಿಕವೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಸಣ್ಣ ನಿರ್ಲಕ್ಷ್ಯ ಮಾಡಿದರೂ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳುತ್ತದೆ. ಇಲ್ಲದೇ ಜನ ನಾಯಕ ಎಂಬ ಪಟ್ಟಕ್ಕೆ ಧಕ್ಕೆ ಆಗುವ ಅಪಾಯ ಎದುರಾಗುತ್ತದೆ. ಅಂತಹ ಅನೇಕ ಪ್ರಕಣಗಳು ರಾಜ್ಯದಲ್ಲಿ ಮರುಕಳುಸಿವೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಪ್ರಕರಣ ಕೂಡ ಇದೀಗ ಅದೇ ಸಾಲಿನಲ್ಲಿ ಬಂದು ನಿಂತಿದೆ.
ಆ. 12 ರಂದು ಮಧ್ಯರಾತ್ರಿ ಮೂವರು ಅಪರಿಚಿತರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆ ಅಂಗಳದಲ್ಲಿ ನಿಂತಿದ್ದ ದುಬಾರಿ ಬೆಲೆಯ ಐಶರಾಮಿ ಕಾರುಗಳಿಗೆ ಬೆಂಕಿ ಇಟ್ಟಿದ್ದರು. ಎರಡು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ಘಟನೆಗೂ ಕೆಲವು ದಿನಗಳ ಹಿಂದಷ್ಟೇ ರೆಡ್ಡಿ ಸಮುದಾಯದ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಸತೀಶ್ ರೆಡ್ಡಿ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು.

ಬೆಂಕಿ ಬಿದ್ದ ರಾತ್ರಿ ಅವತ್ತು ನಡೆದಿದ್ದೇನು?
ನಾಲ್ಕು ಬಾರಿ ಶಾಸಕನಾದ ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಸತೀಶ್ ರೆಡ್ಡಿ ಕೂಡ ಅಸಮಾಧಾನ ತೋಡಿಕೊಂಡಿದ್ದರು. ಇದಾದ ಕೆಲವೇ ದಿನಗಳ ನಂತರ ಸತೀಶ್ ರೆಡ್ಡಿ ಕಾರುಗಳಿಗೆ ಅಪರಿಚಿತರು ಬೆಂಕಿ ಇಟ್ಟಿದ್ದರು. ಇದು ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿತ್ತು.
ಬೇಗೂರು ಕೆರೆ ಬಳಿ ಶಿವಮೂರ್ತಿ ಪ್ರತಿಷ್ಠಾಪನೆ ಮಾಡಲು ಹಿಂದೂ ಪರ ಸಂಘಟನೆಗಳ ಯುವಕರಿಗೆ ಬೆಂಬಲ ನೀಡಿದ್ದರು.ಇದರ ದ್ವೇಷಕ್ಕಾಗಿ ಅವರ ಮನೆ ಮುಂದಿನ ಕಾರುಗಳಿಗೆ ಅನ್ಯ ಕೋಮಿನ ಜನ ಬೆಂಕಿ ಇಟ್ಟಿದ್ದಾರೆ ಎಂದೇ ಬಿಂಬಿಸಲಾಯಿತು. ಆನಂತರ ಸತೀಶ್ ರೆಡ್ಡಿ ಅವರು ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆ ಹಾಕಿದ್ದರು. ಇದರಲ್ಲಿ ಒಂದು ಕೋಮಿನ ಹುಡುಗರು ಬಂಧನಕ್ಕೆ ಒಳಗಾಗಿ, ಸುಮಾರು ಮಂದಿ ಕೆಲಸ ಕಳೆದುಕೊಂಡಿದ್ದರು. ಈ ಲೆಕ್ಕಾಚಾರದಿಂದ ಯಾರಾದರೂ ಬೆಂಕಿ ಇಟ್ಟಿರಬಹುದೇ ಎಂಬ ಆರೋಪ ಕೇಳಿ ಬಂತು. ಇದರ ನಡುವೆ ಸ್ಥಳೀಯ ಕೇಬಲ್ ಮಾಫಿಯಾ ಕೈವಾಡ ಇರಬಹುದು ಎಂದು ಸತೀಶ್ ರೆಡ್ಡಿಯೇ ಸ್ವತಃ ಮಾರ್ಮಿಕವಾಗಿ ನುಡಿದಿದ್ದರು. ಆದರೆ ಪೊಲೀಸರು ಮೂವರನ್ನು ಬಂಧಿಸಿದಾಗ ಕಾರಣ ಕೇಳಿ ಅಚ್ಚರಿ ಪಟ್ಟಿದ್ದರು.

ಪೊಲೀಸರ ಪರಿಶ್ರಮ ಮತ್ತು ಸತ್ಯ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದು 48 ತಾಸಿನಲ್ಲಿ ಮೂವರು ಯುವಕರನ್ನು ಪತ್ತೆ ಮಾಡಿದ್ದರು. ಗಾರ್ವೆಭಾವಿ ಪಾಳ್ಯದ ಸಾಗರ್ (19), ಬೇಗೂರು ನಿವಾಸಿ ಶ್ರೀಧರ್ (20), ಬಂಡೆಪಾಳ್ಯದ ನಿವಾಸಿ ನವೀನ್ ( 22) ಎಂಬ ಮೂವರು ಯುವಕರನ್ನು ಬಂಧಿಸಿದ್ದರು. ಬಂಧಿತರಲ್ಲಿ ಪ್ರಮುಖ ಆರೋಪಿ ಬಂಡೆಪಾಳ್ಯದ ನವೀನ್ ಎಂಬುದನ್ನು ಸ್ವತಃ ಪೊಲೀಸರೇ ಸ್ವತಃ ತಿಳಿಸಿದ್ದರು. ಮೂವರನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಪೊಲೀಸ್ ಆಯುಕ್ತ ಕಮಲಪಂತ್ ಒಂದು ಲಕ್ಷ ರೂ. ಬಹುಮಾನ ಕೂಡ ಘೋಷಣೆ ಮಾಡಿದ್ದರು.

ಬಂಧಿತರ ಹೇಳಿಕೆ
ಬಂಧಿತ ಆರೋಪಿ ನವೀನ್ ನೀಡಿರುವ ಕಾರಣ ನೋಡಿ ಪೊಲೀಸರೇ ಅಚ್ಚರಿಗೊಂಡಿದ್ದರು. ಕೆಲಸ ಕೇಳಿಕೊಂಡು ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಲು ನವೀನ್ ಪ್ರಯತ್ನಿಸಿದ್ದ. ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ನಾವು ಹೀಗೆ ಇರಬೇಕು, ಈತ ಯಾಕೆ ಐಷಾರಾಮಿ ಕಾರುಗಳಲ್ಲಿ ಓಡಾಡಬೇಕು ಎಂಬ ಸಿಟ್ಟಿನಿಂದ ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತರೇ ಸ್ವತಃ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸತೀಶ್ ರೆಡ್ಡಿ, ಇವರು ಪಾತ್ರಧಾರಿಗಳು, ಇದರ ಹಿಂದೆ ದೊಡ್ಡ ಸೂತ್ರಧಾರಿಗಳು ಇದ್ದಾರೆ ಎಂದು ಮಾರ್ಮಿಕವಾಗಿ ನುಡಿಸಿದ್ದರು. ಇದರ ನಡುವೆಯೇ ಈ ಹಿಂದಿನ ಚುನಾವಣೆಯಲ್ಲಿ ಎದುರಾಳಿಯಾಗಿ ಸ್ಪರ್ಧಿಸಿ ಸೋತಿದ್ದ ವ್ಯಕ್ತಿಯೇ ಈ ಕೃತ್ಯ ಮಾಡಿಸಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾನು ಹೇಳುವುದು ತಪ್ಪಾಗುತ್ತದೆ ಸ್ವಲ್ಪ ದಿನ ಕಾದು ನೋಡಿ ಪೊಲೀಸರೇ ಹೇಳುತ್ತಾರೆ ಎಂದು ಸತೀಶ್ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಪೊಲೀಸರ ತನಿಖೆಯ ಸತ್ಯ
ಈ ಎಲ್ಲಾ ಬೆಳವಣಿಗೆ ನಡುವೆ ಪ್ರಮುಖ ಆರೋಪಿ ಬಂಡೆಪಾಳ್ಯದ ನವೀನ್ ಹಿನ್ನೆಲೆ ನೋಡಿದಾಗ ಪೊಲೀಸರು ಹೇಳಿರುವ ಮಾತು ಸತ್ಯ. ಅಂದಹಾಗೆ ನವೀನ್ ಬಂಡೆಪಾಳ್ಯದ ನಿವಾಸಿ. ಈತನೇ ಕಾರುಗಳಿಗೆ ಬೆಂಕಿ ಇಟ್ಟಿದ್ದಾನೆ. ಆದರೆ, ಇಬ್ಬರನ್ನು ಪುಸಲಾಯಿಸಿ ಜತೆ ಕರೆದು ಕೊಂಡು ಹೋಗಿರುವುದನ್ನು ಪೊಲೀಸರು ತಿಳಿಸಿದ್ದರು. ಪೊಲೀಸರು ಹೇಳಿರುವ ಮಾತು ಸತ್ಯ. ಆದರೆ ರಾಜಕಾರಣಿಗಳು ಮಾತ್ರ ಈ ಘಟನೆಯಿಂದ ಪಾಠ ಕಲಿಯಬೇಕಿದೆ. ಸತೀಶ್ ರೆಡ್ಡಿ ಕಾರುಗಳಿಗೆ ಬಂಡೆಪಾಳ್ಯದ ಬೆಂಕಿ ಬಿದ್ದಿರುವ ಹಿಂದೆ ಅಸಲಿ ಕಾರಣಗಳು ಇದೀಗ ಹೊರಗೆ ಬಿದ್ದಿವೆ.

ಬಂಡೆಪಾಳ್ಯದ ಸ್ಲಂ ನಿಂದ ಹೊರ ಬಿದ್ದ ಬೆಂಕಿ ಸತ್ಯ
ಈ ಎಲ್ಲಾ ಬೆಳವಣಿಗೆ ನಡುವೆ ಬಂಡೆಪಾಳ್ಯದ ನಿವಾಸಿಗಳನ್ನು ಕೇಳಿದಾಗ ಸಿಕ್ಕ ಉತ್ತರ ಅಚ್ಚರಿ ಮೂಡಿಸುತ್ತದೆ. ಬಂಡೆಪಾಳ್ಯ ಬೊಮ್ಮನಹಳ್ಳಿ ಕ್ಷೇತ್ರದ ದೊಡ್ಡ ಕೊಳಗೇರಿ ಪ್ರದೇಶ. ಇಲ್ಲಿ ಒಂದು ವೋಟು ಆಚೆ - ಈಚೆ ಆಗದೇ ಸಾಲಿಡ್ ಮತ ಬೀಳುವುದು ಸತೀಶ್ ರೆಡ್ಡಿಗೆ. ಅಷ್ಟರ ಮಟ್ಟಿಗೆ ಅಲ್ಲಿನ ಜನ ಶಾಸಕರನ್ನು ಹಚ್ಚಿಕೊಂಡಿದ್ದಾರಂತೆ. ಕೊರೊನಾ ಬಂದು ಸಂಕಷ್ಟಕ್ಕೆ ಒಳಗಾಗಿದ್ದ ಸ್ಲಂ ನ ಸುಮಾರು ಹದಿನೈದು ಮಂದಿ ಸಹಾಯ ಕೇಳಿಕೊಂಡು ಶಾಸಕ ಸತೀಶ್ ರೆಡ್ಡಿ ಅವರ ಮನೆ ಬಳಿ ಹೋಗಿದ್ದರಂತೆ. "ಸತೀಶ್ ರೆಡ್ಡಿ ಅದ್ಯಾವ ಮನಸ್ಥಿತಿಯಲ್ಲಿದ್ದರೋ ಗೊತ್ತಿಲ್ಲ. ಅವತ್ತು ತುಂಬಾ ಕೆಟ್ಟ ಮಾತುಗಳಿಂದ ನಿಂದಿಸಿದರು. ಭೇಟಿ ಮಾಡಲಿಕ್ಕೂ ಅವಕಾಶ ಬಿಡಲಿಲ್ಲ. ಮತಕ್ಕಾಗಿ ನಮ್ಮ ಮನೆ ಅಂಗಳ ಬರುತ್ತಾರೆ. ಆದೇ, ಕಷ್ಟ ಹೇಳಿಕೊಳ್ಳಲು ಹೋದಾಗ ನಮ್ಮನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ, ಬರಲಿ ವಾಪಸು ನಮ್ಮ ಏರಿಯಾಗೆ ರಾಜಕಾರಣ ಮಾಡಲಿಕ್ಕೆ" ಎಂದು ತೀರ್ಮಾನಿಸಿ ಹೊರ ಬಂದಿದ್ದರು.
ಇದು ಕೊಳಗೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯೂ ಆಯಿತು. ಇದರಿಂದ ಪ್ರೇರಿತಗೊಂಡು ಚಿಕ್ಕ ವಯಸ್ಸಿನ ಹುಡುಗರು " ನಮ್ಮ ಕಷ್ಟ ಕೇಳದವರು ಇಂತಹ ಕಾರಲ್ಲಿ ಯಾಕೆ ಓಡಾಡಬೇಕು" ಎಂಬ ಜಿದ್ದಿಗೆ ಬಿದ್ದು ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ. ಏನಾದರೂ ಮಾಡಿ ಜೈಲಿಗೆ ಹೋಗಬೇಕು ಎನ್ನುವಂತಹ ಮನಸ್ಥಿತಿಯಲ್ಲಿದ್ದವರು. ಈ ಮಾತು ಸ್ಲಂ ನಲ್ಲಿ ಕೇಳಿದ್ದೇ ಹೋಗಿ ಈ ರೀತಿ ಬೆಂಕಿ ಇಟ್ಟು ಜೈಲಿಗೆ ಹೋಗಿದ್ದಾರೆ ಎಂದು ಸ್ಥಳೀಯರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು. ಸತೀಶ್ ರೆಡ್ಡಿಯ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡುವುದೇ ಬಂಡೆಪಾಳ್ಯದ ಕೊಳಗೇರಿ ಮತಗಳು. ಮುಂದಿನ ದಿನಗಳಲ್ಲಿ ರಾಜಿಯಾದರೂ ಹೇಳಲಿಕ್ಕೆ ಸಾಧ್ಯವಿಲ್ಲ. ನಮ್ಮ ಮತ ಪಡೆಯುವ ಅವರು ನಮ್ಮ ಕಷ್ಟಗಳಿಗೂ ಸ್ಪಂದಿಸಬೇಕಿತ್ತಲ್ಲವೇ ಎನ್ನುತ್ತಾರೆ ಸ್ಥಳೀಯರು. ಹದಿನೈದು ಮಂದಿಯ ಜತೆಯಲ್ಲಿ ನವೀನ್ ಕೂಡ ಹೋಗಿದ್ದ ಎಂದೇ ಹೇಳಲಾಗುತ್ತಿದೆ.
Recommended Video

ಜನ ಪ್ರತಿನಿಧಿಗಳಿಗೆ ಇದೊಂದು ಪಾಠವಾಗಲಿ
ವೋಟು ಕೊಡುವ ಜನ ಸಾಮಾನ್ಯರ ಮನಸ್ಥಿತಿಯೂ ಬದಲಾಗಿದೆ. ಹಣಕ್ಕಾಗಿ ಮತ ಮಾರಿಕೊಂಡರೂ ಜನರ ಕಷ್ಟಗಳಿಗೆ ಸ್ಪಂದಿಸುವ ವಿಚಾರದಲ್ಲಿ ಎಚ್ಚರ ತಪ್ಪಿದರೂ ಎಡವಟ್ಟು ಆಗುತ್ತದೆ ಎನ್ನುವುದಕ್ಕೆ ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಪ್ರಕರಣ ಉದಾಹರಣೆ. ಸರ್ಕಾರ ಪಡಿತರಕ್ಕೆ ಕೊಡುವ ಅಕ್ಕಿ ಪ್ರಮಾಣ ಕಡಿಮೆ ಮಾಡಿದ ಸಚಿವ ಉಮೇಶ್ ಕತ್ತಿ "ಸಾಯೋಗು" ಎಂದಿದ್ದರು. ಇದಕ್ಕೆ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಸಚಿವ ಸ್ಥಾನಕ್ಕೆ ಕುತ್ತು ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ರೀತಿ ಅನೇಕ ಜನ ಪ್ರತಿನಿಧಿಗಳು ನಾಲಗೆ ಎಡವಟ್ಟಿನಿಂದ ಜನ ವಿರೋಧ ಕಟ್ಟಿಕೊಂಡು ಕ್ಷಮೆ ಕೇಳಿದ್ದಾರೆ. ಆದರೆ ಸತೀಶ್ ರೆಡ್ಡಿ ಪ್ರಕರಣದಲ್ಲಿ ಜನರ ಸಿಟ್ಟು ಬೆಂಕಿ ರೂಪದಲ್ಲಿ ಹೊರ ಬಿದ್ದಿದೆ. ಇದು ಅಪಾಯಕಾರಿ ಬೆಳವಣಿಗೆ. ಜನ ಸಾಮಾನ್ಯರ ಮತ ಪಡೆದು ಅಧಿಕಾರ ಚಲಾಯಿಸುವ ಜನ ಪ್ರತಿನಿಧಿಗಳು ಬಂಡೆಪಾಳ್ಯ ಪ್ರಕರಣದಿಂದ ಎಚ್ಚೆತ್ತುಕೊಳ್ಳಬೇಕಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications