ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತಾ ಪರಮಾಪ್ತೆ ಶಶಿಕಲಾ ಈ ಮೊತ್ತದ ದಂಡ ಕಟ್ಟಿದ್ರೆ ಮಾತ್ರ ಬಿಡುಗಡೆ

|
Google Oneindia Kannada News

Recommended Video

ಶಶಿಕಲಾ ಕೊರ್ಟ್ ಗೆ ಕಟ್ಟಬೇಕಾದ ಮೊತ್ತ ಎಷ್ಟು ಗೊತ್ತಾ? | Oneindia Kannada

ಬೆಂಗಳೂರು, ಫೆಬ್ರವರಿ 4: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಕೋರ್ಟ್‌ಗೆ ಕಟ್ಟಬೇಕಾದ ದಂಡದ ಮೊತ್ತ ಎಷ್ಟಿದೆ ಗೊತ್ತಾ?

ಶಶಿಕಲಾಗೆ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದ್ದು, 10 ಕೊಟಿ ರೂ ದಂಡವನ್ನು ಆಕೆ ನ್ಯಾಯಾಲಯಕ್ಕೆ ಕಟ್ಟಬೇಕಿದೆ. ಒಂದೊಮ್ಮೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಒಂದು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಿದೆ.

ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 9934ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 9934

ಮತ್ತೆ ಎಲ್ಲೆಲ್ಲೂ ಶಶಿಕಲಾ ಅವರದ್ದೇ ಮಾತು ಕೇಳಿಬರುತ್ತಿದೆ. ಇನ್ನೂ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ಬಾಕಿ ಇದೆ.

2017ರಲ್ಲಿ ಶಿಶಿಕಲಾ ಜೈಲು ಸೇರಿದ್ದರು

2017ರಲ್ಲಿ ಶಿಶಿಕಲಾ ಜೈಲು ಸೇರಿದ್ದರು

ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. 2014ರ ಸೆಪ್ಟೆಂಬರ್‌ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು.

ಜಯಲಲಿತಾಗೆ ವಿಧಿಸಿದ್ದ ದಂಡವೆಷ್ಟು?

ಜಯಲಲಿತಾಗೆ ವಿಧಿಸಿದ್ದ ದಂಡವೆಷ್ಟು?

ಜಯಲಲಿತಾಗೆ 100 ಕೋಟಿ ರೂ., ಶಶಿಕಲಾ, ಇಳವರಸಿ, ಸುಧಾಕರನ್‌ಗೆ ತಲಾ 10 ಕೋಟಿ ರೂ. ದಂಡ ವಿಧಿಸಿದ್ದರು. ಒಂದೊಮ್ಮೆ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಇನ್ನೂ ಒಂದು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತ್ತು.

ಜೈಲು ಶಿಕ್ಷೆಯ ಅಂತ್ಯದಲ್ಲಿ ದಂಡ ಕಟ್ಟುತ್ತಾರೆ

ಜೈಲು ಶಿಕ್ಷೆಯ ಅಂತ್ಯದಲ್ಲಿ ದಂಡ ಕಟ್ಟುತ್ತಾರೆ

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ಹೆಚ್ಚು ದಂಡ ವಿಧಿಸಿದ್ದರೆ ಜೈಲು ಶಿಕ್ಷೆಯ ಅಂತಿಮ ಅವಧಿಯಲ್ಲಿ ಸಾಮಾನ್ಯವಾಗಿ ಕಟ್ಟುತ್ತಾರೆ. ಶಶಿಕಲಾ ಪ್ರಕರಣದಲ್ಲಿ ದಂಡವನ್ನು ಚೆಕ್ ಅಥವಾ ಡಿಮ್ಯಂಡ್ ಡ್ರಾಫ್ಟ್‌ ಮೂಲಕ ನೀಡಬಹುದಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ತರಬೇಕಾಗುತ್ತದೆ.

ಶಶಿಕಲಾ ಬೇಗ ಬಿಡುಗಡೆಯಾಗಲ್ಲ

ಶಶಿಕಲಾ ಬೇಗ ಬಿಡುಗಡೆಯಾಗಲ್ಲ

ಶಶಿಕಲಾ ಸನ್ನಡತೆ ಆಧಾರದಲ್ಲಿ ಬೇಗ ಬಿಡುಗಡೆಗೊಳ್ಳುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದೆಲ್ಲವೂ ಸುಳ್ಳು ಎಂದು ಕಾರಾಗೃಹ ಅಧಿಕಾರಿ ತಿಳಿಸಿದ್ದಾರೆ. ಕಳೆದ 14 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಕೈದಿಗಳಿಗೆ ಮಾತ್ರ ಈ ಅವಕಾಶ ದೊರೆಯಲಿದೆ. ಅವರು ದಂಡ ಕಟ್ಟಿದರೆ 2021ರ ಜನವರಿ 25ಕ್ಕೆ ಬಿಡುಗಡೆಯಾಗಲಿದೆ. ಇಲ್ಲವಾದಲ್ಲಿ 2022ರ ಫೆಬ್ರವರಿ 15ಕ್ಕೆ ಬಿಡುಗಡೆಯಾಗಲಿದೆ.

English summary
Stepping into the last year of the four-year simple imprisonment awarded to her in a disproportionate assets case, former AIADMK secretary VK Sasikala is yet to pay a fine of Rs 10 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X