Sarjapur-Hebbal Metro Line: ಕೆಂಪು ಮಾರ್ಗದ ಯೋಜನೆ ಶುರು, ಬಹುಕೋಟಿ ರೂ. ಟೆಂಡರ್ ಆಹ್ವಾನ

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಗರವು ಮತ್ತೊಂದು ಹೊಸ ಮೆಟ್ರೋ ಮಾರ್ಗದ ನಿರ್ಮಾಣದ ಶಂಕುಸ್ಥಾಪನೆಗೆ ಸಾಕ್ಷಿಯಾಗಿದೆ. ಈವರೆಗೆ ಯೋಜನೆ, ಪ್ರಸ್ತಾವನೆ, ಅನುಮೋದನೆ ಹಂತದಲ್ಲಿದ್ದ ನಮ್ಮ ಮೆಟ್ರೋ ಮೂರನೇ ಹಂತದ ಕೆಂಪು ಮಾರ್ಗ ಯೋಜನೆ ಆರಂಭಕ್ಕೆ ಅಧಿಕೃತ ಚಾಲನೆ ದೊರೆತಿದೆ. ಈ ಮಾರ್ಗವು ನಗರದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಗೆ ಸಂಪರ್ಕ ಸಾಧಿಸಲಿದೆ. ಇದರಿಂದಾಗಿ ಈ ಭಾಗದಲ್ಲಿ ಐಟಿ ಕಾರಿಡಾರ್‌ಗೆ ಸಾರಿಗೆ ಸಿಗುವ ಜೊತೆಗೆ ಇಲ್ಲಿನ ಆಸ್ತಿಗಳ ಮೌಲ್ಯ, ಮನೆ ಬಾಡಿಗೆ ಸಹ ಹೆಚ್ಚಾಗಲಿದೆ ಎಂದು ವರದಿ ಆಗಿದೆ.

ಬೆಂಗಳೂರು ಸರ್ಜಾಪುರ-ಹೆಬ್ಬಾಳವರೆಗೆ ಕೆಂಪು ಮಾರ್ಗ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಮಗ (BMRCL) ಪ್ಲಾನ್ ಮಾಡಿಕೊಂಡಿದೆ. ಇದು ಈ ಭಾಗದಲ್ಲಿ ನಿರ್ಣಾಯಕ ಸಂಪರ್ಕ ಸಾರಿಗೆಯಾಗಿದೆ. BMRCL ಈ ಮಾರ್ಗಕ್ಕಾಗಿ ಭೂಮಿ ಸಮೀಕ್ಷೆಗಾಗಿ ಬರೋಬ್ಬರಿ 6.86 ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ಆಹ್ವಾನಿಸಿದೆ. ನವೆಂಬರ್ 3 ರೊಳಗೆ ಟೆಂಡರ್ ಸಲ್ಲಿಸಬೇಕಿದೆ. ಅಲ್ಲಿಂದ 150 ದಿನಗೊಳಗೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕಾಗುತ್ತದೆ.

Sarjapur-Hebbal Red Metro Line Work Start BMRCL Rs 6 86 Cr Tender Invited

ರಾಜಧಾನಿಯಲ್ಲಿ ನೇರಳೆ ಮಾರ್ಗ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವೆ ಇದೆ. ಸದ್ಯ ಕಾಳೇನ ಅಗ್ರಹಾರ- ನಾಗವಾರವರೆಗಿನ ಗುಲಾಬಿ ಮಾರ್ಗವು 2026ರಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ. ಅದೇ ರೀತಿ ಸಿಲ್ಕ್‌ಬೋರ್ಡ್-ಕೆ.ಆರ್.ಪುರಂ-ಬೆಂಗಳೂರು ಏರ್‌ಪೋರ್ಟ್‌ವರೆಗೆ ಮೆಟ್ರೋ ನೀಲಿ ಮಾರ್ಗವು 2027 ಅಂತ್ಯಕ್ಕೆ ಸಿದ್ಧವಾಗಲಿದೆ. ಈ ಮೂಲಕ ಮೆಟ್ರೋ ಜಾಲ ಅಷ್ಟ ದಿಕ್ಕುಗಳಿಗೂ ವಿಸ್ತರಣೆ ಆಗುವ, ಸೇವೆ ಸಿಗಲು ಇನ್ನು ಎರಡು ವರ್ಷ ಕಾಯಬೇಕಾಗುತ್ತದೆ.

ಪ್ರಸ್ತಾವಿತ ಕೆಂಪು ಮಾರ್ಗದಲ್ಲಿ ಮಣ್ಣು ಮತ್ತು ಕಲ್ಲಿನ ಸಂಯೋಜನೆ ಪರೀಕ್ಷೆ ನಡೆಸಲಾಗುತ್ತದೆ. ಈ ಮೂಲಕ ಪಿಲ್ಲರ್‌ಗಳ ಅಡಿಪಾಯದ ಆಳ ಮತ್ತು ಭೂಗತ ಸುರಂಗಗಳ ರಚನಾತ್ಮಕ ಸುರಕ್ಷತೆ ನಿರ್ಧರಿಸಲಾಗುತ್ತದೆ. ಈ ಸಂಶೋಧನೆಗಳು ಯಾವ ಸುರಂಗ ಕೊರೆಯುವ ಯಂತ್ರಗಳನ್ನು (TBM ಗಳು) ಬಳಸಬೇಕೆಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಇದೆಲ್ಲದರ ಬಳಿಕ ಗುತ್ತಿಗೆ ನೀಡಲು ಅಂದಾಜು ಸಿದ್ಧಪಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

ಪ್ರಾಪರ್ಟಿ ಬೆಲೆ ಭರ್ಜರಿ ಏರಿಕೆ

ಬೆಂಗಳೂರಿನ ಪ್ರಮುಖ ಕೇಂದ್ರ ಪ್ರದೇಶಗಳ ಮೂಲಕ ಹಾದುಹೋಗುವ ಈ ಕೆಂಪು ಮಾರ್ಗವು ಭೂಗತ ಮಾರ್ಗವನ್ನು ಹೊಂದಿರುತ್ತದೆ. ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ವಲಯಗಳ ಮಧ್ಯ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಈ ಭಾಗದಲ್ಲಿ ಐಟಿ ಕಾರಿಡಾರ್ ಇದೆ. ಜನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಭಾಗದ ಆಸ್ತಿಗಳ ಮೌಲ್ಯ ವರ್ಷದಿಂದ ವರ್ಷಕ್ಕೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆಸ್ತಿಗಳಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಈ ಮೆಟ್ರೋ ಮಾರ್ಗ ಆರಂಭಿಕ ಹಂತದಲ್ಲೇ ಹೀಗೆ ರಿಯಲ್ ಎಸ್ಟೇಟ್ ಅಭಿವೃದ್ಧಿಯತ್ತ ಮುಖ್ ಮಾಡಿದೆ. ಬಾಡಿಗೆ ಮನೆಗಳಿಗೂ ಸಹ ದುಬಾರಿ ಆಗಿದೆ. ಮುಂಗಡ ಕೊಡುವ ಹಣದಲ್ಲಿ ಬದಲಾವಣೆ, ಇಳಿಕೆ ಮಾಡಬಹುದಾಗಿದೆ. ಆದರೆ ತಿಂಗಳ ಬಾಡಿಗೆ ವಿಚಾರದಲ್ಲಿ ಬಾರ್ಗೆನ್ ಕಷ್ಟಸಾಗಿದೆ ಎನ್ನುತ್ತಾರೆ ಈ ಭಾಗದಲ್ಲಿ ಬಾಡಿಗೆಗೆ ಇರುವ ಉದ್ಯೋಗಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+