ಜ.14, 15ರಂದು ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ
ಬೆಂಗಳೂರು, ಜ.13 : ಸಂಕ್ರಾಂತಿ ಹಬ್ಬದೂಟಕ್ಕೆ ಮಲ್ಲೇಶ್ವರಂನಲ್ಲಿರುವ 'ಹಳ್ಳಿಮನೆ' ಸಜ್ಜಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಜನವರಿ 14 ಮತ್ತು 15ರಂದು ಹಳ್ಳಿಮನೆಯಲ್ಲಿ ಹಬ್ಬದೂಟವನ್ನು ಸವಿಯಬಹುದಾಗಿದೆ. ಸಂಕ್ರಾಂತಿ ವಿಶೇಷ ಅವರೇ ಖಾದ್ಯಗಳನ್ನು ಹಳ್ಳಿಮನೆ ಈ ಬಾರಿಯ ಮೆನುವಿನಲ್ಲಿ ಸೇರಿಸಿಕೊಂಡಿದೆ.
ಗ್ರಾಮೀಣ ಶೈಲಿಯ ಕಲಾತ್ಮಕ ವಾತಾವರಣದ ಹಳ್ಳಿಮನೆ ಈ ಬಾರಿಯ ಸಂಕ್ರಾಂತಿ ಹಬ್ಬದೂಟಕ್ಕಾಗಿ ಸಿದ್ಧವಾಗಿದೆ ಎಂದು ಹೋಟೆಲ್ ವ್ಯವಸ್ಥಾಪಕ ನಿರ್ದೇಶಕರಾದ ನೀಲಾವರ ಸಂಜೀವರಾವ್ ತಿಳಿಸಿದ್ದಾರೆ. ಜ.14 ಮತ್ತು 15 ರಂದು ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಹಬ್ಬದೂಟ ಲಭ್ಯವಿರುತ್ತದೆ.

ಊಟದ ಮೆನು : ಸಂಕ್ರಾಂತಿಯ ಪಾರಂಪರಿಕ ಹಬ್ಬದೂಟದ ರುಚಿಯೊಂದಿಗೆ ಅವರೇ ಕಾಳು ಅಕ್ಕಿರೊಟ್ಟಿ, ಅವರೇಕಾಳು ಗಸಿ, ಅವರೇಕಾಳು ಮಸಾಲೆ ವಡೆ, ಅವರೇ ಕಾಳು ಉಸ್ಲಿ, ಅವರೇ ಚಿತ್ರಾನ್ನ ಹೀಗೆ ವಿವಿಧ ಭಕ್ಷ್ಯಗಳ ರುಚಿಯನ್ನು ಸವಿಯಬಹುದಾಗಿದೆ. [2015 ಸಂಕ್ರಮಣ ರಾಶಿಫಲ : ಯಾರಿಗೆ ಲಾಭ, ನಷ್ಟ]
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಎಳ್ಳು ಬೆಲ್ಲ ವಿನಿಮಯ, ಹಳ್ಳಿಯ ವಿಶಿಷ್ಟ ಸೊಬಗಿನ ಅಲಂಕಾರಗಳನ್ನು ಎರಡೂ ದಿನಗಳ ಕಾಲ ಹಳ್ಳಿಮನೆ ಪರಿಸರದಲ್ಲಿ ಕಾಣಬಹುದು. ಇಂದಿನ ಜೀವನ ಶೈಲಿಯ ಒತ್ತಡದಲ್ಲಿ ಹಬ್ಬದ ಸಂಭ್ರಮ-ಸಡಗರ ಮರೆಯಾಗುತ್ತಿದೆ. ಕುಟುಂಬ ಸಮೇತರಾಗಿ ಹಳ್ಳಿಮನೆಯ ಈ ಪಾರಂಪರಿಕ, ಸಾಂಪ್ರದಾಯಿಕ ಹಬ್ಬದೂಟಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. [ಅಮೆರಿಕನ್ನಡಿಗರಲ್ಲಿ ಎಳ್ಳುಬೆಲ್ಲ ಬೀರಲಿಕ್ಕೆ ಬರುತ್ತಿದ್ದಾನೆ 'ಡಿಂಕು']
ಪಾರ್ಸೆಲ್ ನೀಡಲಾಗುತ್ತದೆ : ಹಬ್ಬದೂಟದಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಹಬ್ಬದೂಟದ ಎರಡೂ ದಿನಗಳಲ್ಲಿ ಮಧ್ಯಾಹ್ನ 12 ರಿಂದ 3 ಹಾಗೂ ಸಂಜೆ 7.30ರಿಂದ 10ರವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ 9945761283 ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications