ಸಂಗೀತಾ-ಜೊಮಾಟೋದಿಂದ 10 ಲಕ್ಷ ಕೊವಿಡ್ ವಾರಿಯರ್ಸ್‌ಗೆ ಆಹಾರ
ಬೆಂಗಳೂರು, ಜೂನ್ 8: ಸಂಗೀತಾ ಮೊಬೈಲ್ಸ್ ಹಾಗೂ ಜೊಮಾಟೊ ಸಂಸ್ಥೆ ಫೀಡಿಂಗ್ ಇಂಡಿಯಾದೊಂದಿಗೆ ಸಹಯೋಗವನ್ನು #IamFeedingIndia ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಭಾರತದಾದ್ಯಂತ 10 ಲಕ್ಷ ಜನರಿಗೆ ಭೋಜನ ಪೂರೈಸಲಿದೆ. ಹಾಗೂ ಮಧ್ಯಾಹ್ನ 12ರವರೆಗೆ ವಿವಿಧ ನಗರಗಳಲ್ಲಿ ತನ್ನ ಹಲವು ಮಳಿಗೆಗಳ ಎದುರಿನಲ್ಲಿ ಆಹಾರದ ಪ್ಯಾಕೆಟ್‍ಗಳನ್ನೂ ವಿತರಿಸಲಿದೆ.
ಸಂಗೀತಾ ಮೊಬೈಲ್ಸ್ ರವರು ಹೋಮ್ ಕ್ವಾರೆಂಟೈನ್ ಆಗಿರುವ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಪೂರೈಕೆ ಮತ್ತು ರೀಫಿಲ್ ಪಿಕಪ್ ಕೂಡಾ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರ ನಿರ್ವಹಣೆಯಲ್ಲಿ ಮಾಡುತ್ತಿದ್ದು ಅವರು ತಮ್ಮ MP OXY BANK' ಕಾರ್ಯಕ್ರಮದ ಮೂಲಕ ರೋಗಿಗಳಿಗೆ 85-92ರ SPO2 ಮಟ್ಟವನ್ನು ಸ್ಥಿರಗೊಳಿಸಲು ನೆರವಾಗಿ ವೇಗವಾಗಿ ಗುಣವಾಗುವಂತೆ ಮಾಡುತ್ತಿದೆ.
ಡಾ.ತೇಜಸ್ವಿನಿ ಅನಂತ್‍ಕುಮಾರ್ ಅವರ ಅಧ್ಯಕ್ಷತೆಯ ಖ್ಯಾತ ಸ್ವಯಂಸೇವಾ ಸಂಸ್ಥೆ ಅದಮ್ಯ ಚೇತನದೊಂದಿಗೆ ಸಹಯೋಗ ಹೊಂದಿರುವ ಸಂಗೀತಾ ಸಿಬ್ಬಂದಿ ಮತ್ತು ಅದರ ಡೆಲಿವರಿ ಟ್ರಕ್‍ಗಳು ಆಹಾರದ ಪ್ಯಾಕೆಟ್‍ಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ಆರೋಗ್ಯಸೇವಾ ಕಾರ್ಯಕರ್ತರಿಗೆ ವಿತರಿಸಲು ನೆರವಾಗುತ್ತಿದೆ.

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಈ ಸಂಕಷ್ಟದ ಸಮಯದಲ್ಲಿ ಶ್ರಮಿಸುತ್ತಿರುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಕೆಲವು ಪೊಲೀಸ್ ಠಾಣೆಗಳಿಗೂ ಭೋಜನದ ಪಾಕೆಟ್‍ಗಳನ್ನು ಪೂರೈಸಿದೆ. ಮತ್ತು ಗ್ರೀನ್ ಆರ್ಮಿ ಸಹಯೋಗದಲ್ಲಿ 300 ಹೋಮ್-ಐಸೊಲೇಟ್ ಆಗಿರುವ ಕೋವಿಡ್ ರೋಗಿಗಳಿಗೆ ಔಷಧಗಳನ್ನೂ ವಿತರಿಸಲು ನೆರವಾಗಿದೆ.
ಸಂಗೀತಾ ಕನ್ನಡದ ಖ್ಯಾತ ನಟ ಉಪೇಂದ್ರ ಅವರೊಂದಿಗೆ ಚಿತ್ರರಂಗದ ಹಾಗೂ ಹೊರಗಿನವರಿಗೆ ನೆರವಾಗುವ ಯೋಜನೆಗೂ ಧನಸಹಾಯ ನೀಡಿದೆ.

"ಸನ್ನಿವೇಶ ಹೇಗೆಯೇ ಇರಲಿ, ನಾವು ಪರಸ್ಪರರಿಗೆ ನೆರವಾಗಬೇಕು. ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ನೆರೆಹೊರೆಯ ರಾಯಭಾರಿಗಳಾಗಬೇಕು. ನಾವು ಸದ್ಯದ ಪರಿಸ್ಥಿತಿ ಕೂಡ ಬೇಗನೇ ಅಂತ್ಯಗೊಳ್ಳುತ್ತದೆ ಎಂದು ನಮ್ಮ ನಂಬಿಕೆ ಹಾಗೂ ಆಸೆ. ಅಲ್ಲಿಯವರೆಗೂ ಸುರಕ್ಷಿತವಾಗಿರಿ ಮತ್ತು ನಿಮ್ಮ ಬಂಧುಮಿತ್ರರಿಗೆ ಈ ಬಿಕ್ಕಟ್ಟಿನಿಂದ ಹೊರಬರಲು ನೆರವಾಗಿರಿ" ಎಂದು ಸಂಗೀತಾ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಸುಭಾಶ್ ಚಂದ್ರ ಹೇಳಿದ್ದಾರೆ.
Recommended Video
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications