ದರ್ಶನ್ ಜೈಲಿಗೆ ಹೋಗಿರುವ ವಿಚಾರ ನನಗೆ ಗೊತ್ತೇ ಇರಲಿಲ್ಲ: ನಟಿ ಶರ್ಮಿಳಾ ಮಾಂಡ್ರೆ
ಬೆಂಗಳೂರು, ಆಗಸ್ಟ್ 08: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳು ಕಳೆಯುತ್ತಿದೆ. ದರ್ಶನ್ ಬಂಧನವಾದ ದಿನದಿಂದ ಈವರೆಗೂ ನಟನ ಬಿಡುಗಡೆಗಾಗಿ ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಆದರೆ ದರ್ಶನ್ ಪಾಲಿಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದ್ದು, ಜೈಲೇ ಗತಿಯಾಗಿದೆ. ಇಷ್ಟೆಲ್ಲಾ ಬೆಳೆವಣಿಗೆಗಳ ನಡುವೆ ನಟ ದರ್ಶನ್ ಬಗ್ಗೆ ಆಗಾಗ ಕನ್ನಡ ಚಿತ್ರರಂಗದ ನಟ-ನಟಿಯರು ಪ್ರತಿಕ್ರಿಯಿಸುತ್ತಿದ್ದು, ಇದೀಗ ದರ್ಶನ್ ಜೊತೆ ನಟಿಸಿರುವ ನಟಿ ಶಿರ್ಮಿಳಾ ಮಾಂಡ್ರೆ ಮಾತನಾಡಿದ್ದಾರೆ.
ತಮ್ಮ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಶಿರ್ಮಿಳಾ ಮಾಂಡ್ರೆ, 'ದರ್ಶನ್ ಅವರ ಜೊತೆ ಕೆಲಸ ಮಾಡಿದ ಅನುಭವ ತುಂಬಾ ಚೆನ್ನಾಗಿ ಇತ್ತು. ಅದರಲ್ಲೂ ನವಗ್ರಹ ಸಮಯದಲ್ಲಿ. ದರ್ಶನ್ ಅವರ ಪೂರ್ತಿ ಕುಟುಂಬ ನನಗೆ ಪರಿಚಯ. ಆ ಸಮಯದಲ್ಲಿ ಅವರ ಜೊತೆ ಶೂಟಿಂಗ್ ಮಾಡಿದ್ದು, ಜೀವನದಲ್ಲಿ ಒಳ್ಳೆಯ ಅನುಭವ ಎಂದರು.

ದರ್ಶನ್ ಅವರು ಸೆಟ್‌ನಲ್ಲಿ ತುಂಬಾ ಚೆನ್ನಾಗಿ ಇರುತ್ತಿದ್ದರು. ಅವರ ತಮ್ಮ ದಿನಕರ್ ತೂಗುದೀಪ್ ಅವರು ನಾವು ಒಟ್ಟಾಗಿ ನಟಿಸಿದ ಸಿನಿಮಾವನ್ನು ನಿರ್ದೇಶಕರಾಗಿದ್ದರು. ಅವರದೇ ಹೋಮ್ ಬ್ಯಾನರ್ ಆಗಿತ್ತು. ಆ ಸಿನಿಮಾ ಶೂಟಿಂಗ್ ಅನುಭವ ತುಂಬಾ ಚೆನ್ನಾಗಿ ಇತ್ತು. ಇದು 2007ರಲ್ಲಿ ಶೂಟಿಂಗ್ ಮಾಡಿರುವ ಸಿನಿಮಾ. ಆ ಸಮಯದಲ್ಲಿ ನಟ ದರ್ಶನ್ ಜೊತೆ ಶೂಟಿಂಗ್ ಮಾಡಿದ್ದು, ಜೀವನದಲ್ಲಿ ಒಳ್ಳೆಯ ಅನುಭವ ಎಂದು ನಟಿ ಶಿರ್ಮಿಳಾ ಮಾಂಡ್ರೆ ಹೇಳಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬಗ್ಗೆ ಮಾತನಾಡಿದ ಅವರು, ಇತ್ತೀಚಿಗೆ ನಾನು ತುಂಬಾ ಟ್ರಾವೆಲ್ ಮಾಡುತ್ತಿದ್ದೆ. ದರ್ಶನ್ ಅರೆಸ್ಟ್ ಆಗಿರುವ ವಿಚಾರ ನನಗೆ ಗೊತ್ತೇ ಇರಲಿಲ್ಲ. ಈಗ ನನಗೆ ಗೊತ್ತಾಗಿದೆ. ನನ್ನ ಪ್ರಕಾರ ಎಲ್ಲವನ್ನೂ ಕಾನೂನು ನಿರ್ಧರಿಸುತ್ತದೆ ಎಂದು ಹೇಳಿದರು.

ದರ್ಶನ್ ಪ್ರಕರಣ ತೀವ್ರ ಗತಿಯಲ್ಲಿ ಮುಗಿಸಲು ಪೊಲೀಸರ ಸಜ್ಜು
ಇತ್ತ ಪೊಲೀಸರು ಕೂಡ ತನಿಖೆಯನ್ನು ತೀವ್ರ ಗತಿಯಲ್ಲಿ ಮುಗಿಸಲು ಸಜ್ಜಾಗುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಬಂಧಿತರಾದ 17 ಮಂದಿ ಆರೋಪಿಗಳಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಾಗಿದ್ದಾರೆ.
ದರ್ಶನ್ ಹಾಗೂ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಅಥವಾ ತ್ವರಿತಗತಿ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಹತ್ಯೆ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಎಫ್ಎಎಸ್‌ಎಲ್ ವರದಿ ಸೇರಿದಂತೆ ಕೆಲ ಪರೀಕ್ಷೆಗಳ ವೈಜ್ಞಾನಿಕ ವರದಿಗಳ ಬರಬೇಕಿದೆ. ಈ ತಿಂಗಳ್ಯಾಂತಕ್ಕೆ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.












Click it and Unblock the Notifications