ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರು, ನ.26: ಆತ ಖ್ಯಾತ ನಾಟಿ ವೈದ್ಯರ ಮಗ, ಸಂಭ್ರಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಕಳೆದ ರಾತ್ರಿ ಇದ್ದಕ್ಕಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ.ವಿದ್ಯಾರ್ಥಿ ಎಂ ವಂಶಿ ಕೃಷ್ಣರಾಜುವನ್ನು ಕಾಡಿದ್ದು ಪೋಷಕರು ಹೇಳಿದ ಬುದ್ಧಿಮಾತೇ? ಅಥವಾ ಮಂಗಳಮುಖಿಯರ ಸಹವಾಸ ಬಿಡು ಎಂದ ಪೊಲೀಸರ ಹಿತನುಡಿಯೇ? ಸ್ಪಷ್ಟವಾಗಿಲ್ಲ. ಆದರೆ, 23 ವರ್ಷ ವಯಸ್ಸಿನ ಮಗನನ್ನು ಕಳೆದುಕೊಂಡ ಪೋಷಕರು ಆಕಾಶ ಕಳಚಿ ಬೀಳುವಂತೆ ರೋದಿಸಿದ್ದಾರೆ.

ಪೋಷಕರ ನಿಂದನೆಯಿಂದ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕೆ ನಗರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ ಖ್ಯಾತ ನಾಟಿ ವೈದ್ಯ ಮುನಿರಾಜು ಎಂಬವರ ಪುತ್ರ ವಂಶಿಕೃಷ್ಣರಾಜು (23). ಚಿಕ್ಕಬಾಣಾವಾರದ ಸಂಭ್ರಮ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ.

ರವಿವಾರ ಸ್ನೇಹಿತರೊಂದಿಗೆ ತೆರಳಿ ಸಂಜೆ ಮನೆಗೆ ಬಂದಾಗ ಮಂಕಾಗಿದ್ದ. ಪೋಷಕರು ವಿಚಾರಿಸಿದಾಗ ಏನೂ ಹೇಳದೆ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ರಾತ್ರಿ ಊಟವನ್ನೂ ಮಾಡದೆ ಮಲಗಿದ್ದ ವಂಶಿರಾಜು ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದಾಗ ಎಚ್ಚರಗೊಂಡ ಪೋಷಕರು ವಿಚಾರಿಸಿದಾಗ ವಿಷ ಕುಡಿದಿರುವುದಾಗಿ ಹೇಳಿದ್ದಾನೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಗುವ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ' ನಾನು ತಪ್ಪು ಮಾಡುತ್ತಿದ್ದೇನೆ. ಅಪ್ಪ-ಅಮ್ಮ ಕ್ಷಮಿಸಿ, ನಾನೊಬ್ಬ ಕೆಟ್ಟ ಮಗ' ಎಂದು ಬರೆದಿದ್ದಾನೆ. ಮತ್ತು ಬರುವ ಕೆಲವು ಮಾತ್ರೆಗಳೊಂದಿಗೆ ತಿಗಣೆನಾಶಕ ಔಷಧಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ಸಮಾಜಮುಖಿ ವಂಶಿರಾಜು ಮಂಗಳಮುಖಿಯರೊಂದಿಗೆ ಸಲುಗೆಯಿಂದ ಇರುತ್ತಿದ್ದ. ಬಡವರು, ಅನಾಥರ ಕಡೆ ಕರುಣೆಯಿಂದ ನೋಡುತ್ತಿದ್ದ. ಅವರ ದ್ದು, ಇದಕ್ಕೆ ಪೋಷಕರು ಆಕ್ಷೇಪಿಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಂಗಳಮುಖಿಯರ ಮೆರವಣಿಗೆಯೊಂದರಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ. ಆ ಹಿನ್ನೆಲೆಯಲ್ಲಿ ಪೋಷಕರು ಬೈದಿದ್ದರು. ಮಂಗಳಮುಖಿಯರ ಸಹವಾಸ ಬಿಡು ಜನ ಆಡಿಕೊಂಡು ನಗುತ್ತಾರೆ ಎಂದು ಬುದ್ಧಿವಾದ ಹೇಳಿದರು. ಈ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಶಂಕಿಸಲಾಗಿದೆ.

ವಂಶಿರಾಜು ಲೈಂಗಿಕ ಅಲ್ಪಸಂಖ್ಯಾತನಾಗಿದ್ದು, ಆತನ ಸಾವಿಗೆ ಪೋಷಕರ ಕಿರುಕುಳವೇ ಕಾರಣ ಎಂದು ಲೈಂಗಿಕ ಕಾರ್ಯಕರ್ತರಿಗೆ ಸಂಬಂಧಿತ ಸಂಘಟನೆ ಸಂಗಮದ ಅಕ್ಕೈ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆಗೂ ಮುನ್ನ ಕಳೆದ ವಾರ ಕೂಡ ಆತ ತನ್ನ ತಂದೆಯಿಂದ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದ ಎಂದು ಮಾನವಹಕ್ಕುಗಳ ಕಾರ್ಯಕರ್ತ ಮನೋಹರ್ ಎಳವರ್ತಿ ಆರೋಪಿಸಿದ್ದಾರೆ. ಈ ಬಗ್ಗೆ ಸಂಘಟನೆಗಳು ದೂರು ನೀಡಿದಲ್ಲಿ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.ಯಶವಂತಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ..

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಬೆಂಗಳೂರಿನಲ್ಲಿ ನಡೆದ LGBTಗಳ ಮೆರವಣಿಗೆ

ಮಂಗಳಮುಖಿಯರ ಸಂಗ ಬಿಡು ಎಂದ್ರೆ ಪ್ರಾಣ ಬಿಟ್ಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+