• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಗಡಿ-ಒಣಕೆಮ್ಮಿಗೆ ಹೇಳಿ ಗುಡ್ ಬೈ, ಕುಡಿರಿ ಮಯ್ಯಾಸ್ ಕಷಾಯ

|

ಬೆಂಗಳೂರು, ಮಾರ್ಚ್ 18: ಬೆಂಗಳೂರು ನಗರ ಸುಂದರ ಆಗಿರುವುದಕ್ಕೆ ಪೌರಕಾರ್ಮಿಕರೇ ಕಾರಣ. ಬಿಸಿಲು, ಚಳಿ, ಮಳೆ ಲೆಕ್ಕಿಸದೆ ಅವಿರತ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸುವ ಬಿಬಿಎಂಪಿ ಪೌರಕಾರ್ಮಿಕರ ಆರೋಗ್ಯ ವೃದ್ಧಿಸಲು ಮಯ್ಯಾಸ್ ಸಂಸ್ಥೆ ಮುಂದಾಗಿದೆ.

ಪೌರಕಾರ್ಮಿಕರ ಸಾಮಾನ್ಯ ಸಮಸ್ಯೆಗಳಾಗಿರುವ ಉಸಿರಾಟದ ತೊಂದರೆ, ಒಣಕೆಮ್ಮು, ಸೀನು ಹಾಗೂ ನೆಗಡಿಗೆ ಪಾರಂಪರಿಕ ಆಹಾರಶಾಸ್ರ್ತದ ಮೂಲದ್ರವ್ಯಗಳ ಸಮ್ಮಿಶ್ರಣ ಕಷಾಯವನ್ನು ನೀಡುವ ಅಭಿಯಾನವನ್ನು ಜಯನಗರ ಕರಿಸಂದ್ರ ವಾರ್ಡ್‍ನಲ್ಲಿ ಆರಂಭಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊರೊನಾವೈರಸ್ ಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ನಗರದಲ್ಲಿ ಧೂಮಪಾನಿಗಳಿಗೆ, ಟ್ರಾಫಿಕ್ ಪೊಲೀಸರಿಗೆ, ಪೌರಕಾರ್ಮಿಕರಿಗೆ, ಚಾಲಕರು ಹಾಗೂ ಎಲ್ಲರಿಗೂ ಅನ್ವಯವಾಗುವಂತೆ ಕಷಾಯವನ್ನು ತಯಾರಿಸಲಾಗಿದ್ದು, ಅಸ್ತಮಾ ಸೇರಿದಂತೆ ಒಣಕೆಮ್ಮು, ನೆಗಡಿಯಿಂದ ಬಳಲುತ್ತಿರುವವರು ಪ್ರತಿದಿನ ಸೇವನೆಯಿಂದ ಸುಧಾರಿಸಬಹುದಾಗಿದೆ ಎಂದು ಅವರು ಹೇಳಿದರು.

ಕೊರೊನಾ ಹುಟ್ಟಿಸಿರುವ ಭಯ

ಕೊರೊನಾ ಹುಟ್ಟಿಸಿರುವ ಭಯ

ಕೊರೊನಾ ಹುಟ್ಟಿಸಿರುವ ಭಯಕ್ಕೆ ಒಣಕೆಮ್ಮು , ನೆಗಡಿ, ಸೀನು ಜನತೆಯಲ್ಲಿ ಇನ್ನಿಲ್ಲದ ಆತಂಕ ಹುಟ್ಟಿಸಿದೆ. ಸಾಮಾನ್ಯವಾಗಿ ಒಣಕೆಮ್ಮು ನೆಗಡಿಗೆ ಔಷಧ ತೆಗೆದುಕೊಳ್ಳುವ ಪ್ರಮೇಯ ಕಡಿಮೆ, ಆದರೆ ಕರೋನಾ ದಾಂಗುಡಿ ಇಡುತ್ತಿರುವುದರಿಂದ ನೆಗಡಿ ಒಣಕೆಮ್ಮನ್ನೂ ನಿರ್ಲಕ್ಷಿಸುವಂತಿಲ್ಲ.. ಸಾರ್ವಜನಿಕ ಸ್ಥಳಗಳಲ್ಲಿ ನಿಂತಿದ್ದಾಗ ಕೆಮ್ಮು,ವಂತಿಲ್ಲ, ಸೀನುವಂತಿಲ್ಲ ಎಂಬ ಆತಂಕದ ಪರಿಸ್ಥಿತಿ. ಜನರ ಸಮಸ್ಯೆಯನ್ನು ಮನಗಂಡು ಆಹಾರೋದ್ಯಮ ಕ್ಷೇತ್ರದ ದಿಗ್ಗಜ ಡಾ.ಪಿ.ಸದಾನಂದ ಮಯ್ಯ ಅವರು ನಾಡಿನ ಜನತೆಗೆ ಮಯ್ಯಾಸ್ ಹರ್ಬಲ್ ಕಷಾಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಆಹಾರೋದ್ಯಮಿ ಕನ್ನಡಿಗ ಡಾ.ಪಿ ಸದಾನಂದ ಮಯ್ಯ

ಆಹಾರೋದ್ಯಮಿ ಕನ್ನಡಿಗ ಡಾ.ಪಿ ಸದಾನಂದ ಮಯ್ಯ

ಅಂತಾರಾಷ್ಟ್ರೀಯ ಖ್ಯಾತಿಯ ಆಹಾರೋದ್ಯಮಿ ಕನ್ನಡಿಗ ಡಾ.ಪಿ ಸದಾನಂದ ಮಯ್ಯ ಅವರ ಈ ಹೊಸ ರೆಸಿಪಿ ಪಾರಂಪರಿಕ ಪಾಕಶಾಸ್ತ್ರಗಳ ಮೂಲದ್ರವ್ಯಗಳ ಸಮ್ಮಿಶ್ರಣದಿಂದ ಕಷಾಯವಾಗಿ ರೂಪಾಂತರಗೊಂಡಿದ್ದು, ಮೂರೂ ಋತುಮಾನಗಳಿಗೆ ಅನುಕೂಲವಾಗುವಂತೆ ತಯಾರಿಸಿ ಬಿಡುಗಡೆಗೊಳಿಸಲಾಗಿದೆ. ನಮ್ಮ ಪ್ರಾಚೀನ ವೈದ್ಯಪಧ್ಧತಿ ಆಯುರ್ವೇದಶಾಸ್ರ್ರದ ಮೂಲ ದ್ರವ್ಯಗಳೂ ಆಗಿರುವ ಹಿಪ್ಪಲಿ, ಅಮೃತಬಳ್ಳಿ, ಕಾಳುಮೆಣಸು ತುಳಸಿ, ನೆಲ್ಲಿಕಾಯಿ, ಜೇಷ್ಠಮಧು ಅರಶಿನ ಬೆಲ್ಲ ಶುಂಠಿ, ಜೀರಿಗೆ ಹೀಗೆ ಹತ್ತಾರು ಆಯುರ್ವೇದ ಆಂಶಗಳಿಂದ ಈ ಕಷಾಯ ರೂಪುತಳೆದಿದೆ.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಮನೆಗಳಲ್ಲಿ ಕಷಾಯ ಸೇವಿಸುವ ಸಂಪ್ರದಾಯ

ಮನೆಗಳಲ್ಲಿ ಕಷಾಯ ಸೇವಿಸುವ ಸಂಪ್ರದಾಯ

ತಲೆತಲಾಂತರಗಳಿಂದ ಮಲೆನಾಡು, ಕರಾವಳಿ ಹಾಗೂ ಕೇರಳ ಭಾಗಗಳಲ್ಲಿ ಮನೆಮನೆಗಳಲ್ಲಿ ಕಷಾಯ ತಯಾರಿಸಿ, ಸೇವಿಸುವ ಸಂಪ್ರದಾಯವಿತ್ತು. ಕಾಲಕ್ರಮೇಣ ಅವು ಮರೆಯಾಯಿತು. ಈ ಕಾರಣಗಳಿಂದಲೇ ಆ ಕಾಲದವರ ಆರೋಗ್ಯ ಜೀವನದ ಗುಟ್ಟು ಕಷಾಯವೇ ಆಗಿತ್ತು. ಅಷ್ಟಕ್ಕೂ ಇದು ಔಷಧವಲ್ಲ, ಇದು ಜೀವನ ವಿಧಾನ. ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳುವ ಟಾನಿಕ್ ಆಗಿತ್ತು.

ಆಧುನಿಕ ಜೀವನದ ಜಂಜಾಟದಲ್ಲಿಕಷಾಯ ಮರೆ

ಆಧುನಿಕ ಜೀವನದ ಜಂಜಾಟದಲ್ಲಿಕಷಾಯ ಮರೆ

ಆದರೆ ಕಾಲ ಬದಲಾದಂತೆ ಆಧುನಿಕ ಜೀವನದ ಜಂಜಾಟದಲ್ಲಿ ಕಷಾಯ ಮರೆಯಾಯಿತು ಎನ್ನುತ್ತಾರೆ ಸದಾನಂದ ಮಯ್ಯ.

ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು?

ಬಿಡುಗಡೆ : ಬೆಂಗಳೂರಿನ ಜಯನಗರದ ಮಯ್ಯಾಸ್ ನಲ್ಲಿ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಕಷಾಯದ ಸ್ಯಾಚೆಟ್ ಬಿಡುಗಡೆಗೊಳಿಸಿದರು. ಖ್ಯಾತ ವೈದ್ಯರುಗಳಾದ ಡಾಮಹಾಬಲೇಶ್ವರ ಮಯ್ಯ, ಡಾ.ಶಿವಾನಂದ ಮಯ್ಯ ಡಾಪದ್ಮನಾಭ ಮಯ್ಯ ಉಪಸ್ಥಿತರಿದ್ದರು.

English summary
Sadananda Maiya of Maiyas Food company distributed Ready to Drink Kashaya a health drink to BBMP workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X