Get Updates
Get notified of breaking news, exclusive insights, and must-see stories!

ಸದಾನಂದ ಗೌಡರ ಪುತ್ರ ಕಾರ್ತಿಕ್ ಕೈ ಕೊಟ್ಟ : ನಟಿ

ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಅವರ ಮದುವೆ ನಿಶ್ಚಿತಾರ್ಥ ಮಡಿಕೇರಿಯಲ್ಲಿ ಬುಧವಾರ ಸಾಂಗವಾಗಿ ನೆರವೇರಿದೆ. ಈ ನಡುವೆ ಕಾರ್ತಿಕ್ ಜೊತೆ ನನ್ನ ಮದುವೆಯಾಗಿತ್ತು. ಟಿವಿ ಮಾಧ್ಯಮಗಳಿಂದ ಸುದ್ದಿ ತಿಳಿದು ಶಾಕ್ ಆಗಿದೆ ಎಂದು ನಟಿ ಮೈತ್ರೀಯಾ ಗೌಡ ಆರೋಪಿಸಿದ್ದಾರೆ.ಆದರೆ, ರೈಲ್ವೆ ಸಚಿವ ಡಿ.ವಿ ಸದಾನಂದಗೌಡ ಅವರ ಕುಟುಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ

"ನನಗೆ ಈಗ ಅನ್ಯಾಯವಾಗಿದೆ. ನನಗೆ ಬೇರೆ ಯಾವ ಉದ್ದೇಶನೂ ಇಲ್ಲ. ನನ್ನನ್ನು ಸೊಸೆ ಎಂದು ಒಪ್ಪಿಕೊಳ್ಳಿ. ನನಗೆ ಮೋಸ ಮಾಡಬೇಡಿ, ನಾನು ಈಗಲೂ ಕಾರ್ತಿಕ್ ನನ್ನು ಪ್ರೀತಿಸುತ್ತೇನೆ. ಮನೆಯವರ ಒತ್ತಾಯಕ್ಕೆ ಈ ರೀತಿ ಮಾಡುತ್ತಿರಬಹುದು" ಎಂದು ರೂಪದರ್ಶಿ, ನಟಿ ಮೈತ್ರೀಯಾ ಗೋಳಾಡಿದ್ದಾರೆ.[ಡಿವಿಎಸ್ ಮಗನ ರೇಪ್ ಕೇಸ್, ಬಿಜೆಪಿ ಬಾಸ್ ಗರಂ]

ಆದರೆ, ಮೈತ್ರಿಯಾ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತೆ, ಇದೆಲ್ಲ ರಾಜಕೀಯ ಪಿತೂರಿ, ಮುಂದಿನ ಬಿಬಿಎಂಪಿ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಅಂಬರೀಷ್, ದಿನೇಶ್ ಗುಂಡೂರಾವ್ ಅವರ ಸಲಹೆ ಕೇಳಿದ್ದಳು ಎಂದು ಮೈತ್ರಿಯಾ ವಿರುದ್ಧ ಬಿಜೆಪಿ ಆರೋಪಿಸಿದೆ.

ಕಳೆದ ಮೇ ತಿಂಗಳಿನಲ್ಲಿ ಪರಿಚಯವಾಯ್ತು, ಜೂನ್ ತಿಂಗಳಿನಲ್ಲಿ ದೇವರ ಮುಂದೆ ಮದುವೆಯಾಗಿದ್ದೆವು. ಮಂಗಳೂರಿನ ಅವರ ಮನೆಯಲ್ಲಿ ದೇವರ ಮುಂದೆ ನನಗೆ ಹರಿಸಿನ ಕೊಂಬು ಕಟ್ಟಿ ಪತ್ನಿ ಎಂದು ಸ್ವೀಕರಿಸಿದ್ದ. ಆದರೆ, ಅವನ ತಾಯಿ ನನಗೆ ಬುದ್ಧಿವಾದ ಹೇಳಿದ್ದರು. ನೀವು ನೀವೇ ಮದ್ವೆಯಾದರೆ ಹೇಗೆ ? ನಾವು ಇದನ್ನು ಒಪ್ಪುವುದಿಲ್ಲ ಎಂದು ಗದರಿದ್ದರು. ನಾನು ಜೋರಾಗಿ ಅತ್ತುಬಿಟ್ಟೆ. ಕಡೆಗೆ ಸಮಾಧಾನ ಮಾಡಿ ಆಯ್ತು ನೋಡೋಣ ಎಂದು ಹೇಳಿ ಕಳಿಸಿದ್ದರು. ಆದರೆ...ಚಿತ್ರಕೃಪೆ: ಮೈತ್ರಿಯಾ ಅವರ ಫೇಸ್ ಬುಕ್ ಪುಟ

ಕಾರ್ತಿಕ್ ಗೌಡ ತಲೆಕೆಡಿಸಿಬಿಟ್ಟಿದ್ದಾರೆ

ಕಾರ್ತಿಕ್ ಗೌಡ ತಲೆಕೆಡಿಸಿಬಿಟ್ಟಿದ್ದಾರೆ

ಕಾರ್ತಿಕ್ ನಿಶ್ಚಿತಾರ್ಥ ಬಗ್ಗೆ ಟಿವಿಯಿಂದ ತಿಳಿಯಿತು. ನಾನು ಯಾವುದೋ ಆಡ್ ಫಿಲಂ ಶೂಟ್ ನಲ್ಲಿದ್ದೆ. ಯಾರೋ ವಿಷಯ ತಿಳಿಸಿದರು. ನನಗೆ ತುಂಬಾ ಶಾಕ್ ಆಗಿದೆ. ನಿನ್ನೆ ಇನ್ನೂ ಅವರ ಜೊತೆ ಮಾತನಾಡಿದ್ದೆ. ಚೆನ್ನಾಗೇ ಮಾತನಾಡಿದ, ನಿಶ್ಚಿತಾರ್ಥ ಬಗ್ಗೆ ಏನೂ ಹೇಳಲಿಲ್ಲ. ಈಗ ಆ ಹುಡುಗಿ ಬಾಳು ಹಾಳಾಗುತ್ತದೆ. ನನ್ನ ತುಂಬಾ ಪ್ರೀತಿಸುತ್ತಿದ್ದ. ಅವರ ಅಮ್ಮನ ಮಾತು ಕೇಳಿ ಈ ರೀತಿ ಮಾಡುತ್ತಿದ್ದಾನೆ ಎಂದು ಮೈತ್ರಿಯಾ ಹೇಳಿದ್ದಾರೆ.

ಸದಾನಂದ ಗೌಡರ ಪ್ರತಿಕ್ರಿಯೆ

ಸದಾನಂದ ಗೌಡರ ಪ್ರತಿಕ್ರಿಯೆ

'ನನ್ನ ಮಗ ಅಂಥವನಲ್ಲ. ಎರಡು ತಿಂಗಳ ಹಿಂದೆ ಈ ಎಂಗೇಜ್ ಮೆಂಟ್ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬಂದಿವೆ. ನನ್ನ ಜೀವನ ತೆರೆದಿಟ್ಟ ಜೀವನ. ಮಂಗಳೂರಿನ ಮನೆಗೆ ಹೋಗಿ ಮದುವೆಯಾಗಿದ್ದು, ಎಂದಿದ್ದು ಆತಂಕಕಾರಿ, ಮದುವೆ ಬಗ್ಗೆ ಮುಂದುವರೆಯುವುದು ತಪ್ಪು' ಎಂದಿದ್ದಾರೆ.

ಅಪ್ಪನ ಮಾನ ಕಳೆಯುವಂಥ ಯಾವ ಕಾರ್ಯವನ್ನು ನಾನು ಮಾಡಿಲ್ಲ ಎಂದು ವರ ಕಾರ್ತಿಕ್ ಕೂಡಾ ದನಿಗೂಡಿಸಿದ್ದಾರೆ. ನನಗೆ ಮೈತ್ರಿಯಾ ಗೋತ್ತೇ ಇಲ್ಲ ಎಂದು ಕಾರ್ತಿಕ್ ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.
ಮಂಡ್ಯ ರೈತರ ಕುಟುಂಬದ ಕುಡಿ ಮೈತ್ರಿಯಾ

ಮಂಡ್ಯ ರೈತರ ಕುಟುಂಬದ ಕುಡಿ ಮೈತ್ರಿಯಾ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಮೈತ್ರಿಯಾ ಅವರ ಊರು. ತಾಯಿ ಯು.ಡಿ ಇಂದಿರಾ ಶಾಲಾಅ ಶಿಕ್ಷಕಿ. ತಂದೆ ವೆಂಕಟೇಶ ಗೌಡ ಹಾಗೂ ಅಜ್ಜ ಎಲ್ಲರೂ ರೈತರಾಗಿದ್ದರು. 13 ವರ್ಷ ಆಯ್ತು ಇವರ ಕುಟುಂಬ ಬೆಂಗಳೂರಿಗೆ ಬಂದು, ಮೈತ್ರಿಯಾ ಬೆಂಗಳೂರಿನಲ್ಲಿ ಹೈಸ್ಕೂಲ್ ಓದಿದ್ದು, ಮಾಡೆಲಿಂಗ್ ಹಾಗೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಂಗಿ ಸುಪ್ರಿಯಾಗೂ ಮಾಡೆಲಿಂಗ್ ಮಾಡುವ ಆಸೆಯಿದೆ.

ಡಾಟಿ ತಮ್ಮ ವಿಶ್ವಕುಮಾರ್ ಪ್ರತಿಕ್ರಿಯೆ

ಡಾಟಿ ತಮ್ಮ ವಿಶ್ವಕುಮಾರ್ ಪ್ರತಿಕ್ರಿಯೆ

ಮೈತ್ರಿಯಾ ತೋರಿಸಿದ ಚಿತ್ರಗಳು ಮಾರ್ಫ್ ಮಾಡಿರಬಹುದು. ಇದರಲ್ಲಿ ಕಾರ್ತಿಕ್ ತಪ್ಪಿಲ್ಲ ಅವರ ಫ್ಯಾಮಿಲಿಗೆ ಕೆಟ್ಟ ಹೆಸರು ಬರಲು ಈ ರೀತಿ ಮಾಡಿದ್ದಾರೆ. ಅವರ ಹಿಂದೆ ಯಾರಿದ್ದಾರೆ ಎಂದು ತಿಳಿದಿಲ್ಲ. ಇದು ಬ್ಲಾಕ್ ಮೇಲ್ ಮಾಡುವ ತಂತ್ರ, ಪ್ರಚಾರ ಪಡೆಯಲು ಮಾಡಿರುವ ತಂತ್ರ
ಇಷ್ಟವಾದವರೆಲ್ಲರನ್ನು ಮದುವೆಯಾಗಲು ಸಾಧ್ಯವೇ? ಜೊತೆಗೆ ಕಾರ್ತಿಕ್ ಜೊತೆ ಅನೇಕ ಜನ ಫೋಟೊ ತೆಗೆಸಿಕೊಂಡಿರುತ್ತಾರೆ. ಮೈತ್ರಿಯಾ ಮಾತನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಮದುವೆ ಮಕ್ಕಳು ಮಾಡಿಕೊಳ್ಳೋಣ ಎಂದಿದ್ರು

ಮದುವೆ ಮಕ್ಕಳು ಮಾಡಿಕೊಳ್ಳೋಣ ಎಂದಿದ್ರು

ಪೋಷಕರಿಗೆ ಹೇಳಿ ಮದುವೆ ವಿಚಾರವನ್ನು ಒಪ್ಪಿಸುತ್ತೇನೆ ಎಂದು ನನಗೆ ಕಾರ್ತಿಕ್ ಭರವಸೆ ನೀಡಿದ್ದರು ಹೀಗಾಗಿ ನಾನು ಮದುವೆಯಾದೆ. ಅವರ ಮನೆಯಲ್ಲಿ ನಮ್ಮ ಮದುವೆಗೆ ಇಷ್ಟವಿರಲಿಲ್ಲ. ನನ್ನ ಮೇಲೆ ದೈಹಿಕವಾಗಿ ಕಾರ್ತಿಕ್ ಗೆ ಆಕರ್ಷಣೆ ಇತ್ತು ಆದ್ರೆ, ನಾನು ಮುಂದುವರೆಯಲು ಅವಕಾಶ ನೀಡಲಿಲ್ಲ.

ಇಂದು ನನಗೆ ಮೋಸ ಮಾಡಿ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದಾರೆ. ಈ ಕಾರಣಕ್ಕೆ ನಾನು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದೇನೆ ಎಂದು ಮೈತ್ರಿಯಾ ಹೇಳಿದ್ದಾರೆ.

ಮದ್ವೆ ಮಕ್ಕಳು ಮಾಡಿಕೊಳ್ಳೋಣ ಎಂದಿದ್ದು ನಿಜ

ಮದ್ವೆ ಮಕ್ಕಳು ಮಾಡಿಕೊಳ್ಳೋಣ ಎಂದಿದ್ದು ನಿಜ

ಕಾಫಿ ಡೇಯಲ್ಲಿ ಸಾಕಷ್ಟು ಬಾರಿ ನಾನು ಕಾರ್ತಿಕ್ ಜೊತೆ ಓಡಾಡಿದ್ರು ಎಂದು ರೂಪಾ(ಮೈತ್ರಿಯಾ ಸೋದರ ಸಂಬಂಧಿ) ಹೇಳಿದ್ದಾಳೆ ಈ ವಿಚಾರ ನಮಗೆ ಗೊತ್ತಿತ್ತು. ಅವಳ ಎಲ್ಲಾ ಸ್ನೇಹಿತರಿಗೂ ತಿಳಿದಿದೆ. ಈಗ ನಮಗೆ ಮೋಸವಾಗಿದೆ. ಮೊದಲು ಮದುವೆ ಮಾಡಿಕೊಂಡು ಮಕ್ಕಳು ಮಾಡಿಕೊಳ್ಳೋಣ ಮುಂದೆ ಎಲ್ಲರೂ ಮದುವೆಗೆ ಒಪ್ಪಿಬಿಡುತ್ತಾರೆ ಎಂದು ಕಾರ್ತಿಕ್ ನಂಬಿಸಿ ನನ್ನ ಮಗಳ ಕೈ ಹಿಡಿದಿದ್ದ. ಆದರೆ, ಈಗ ಈ ಥರಾ ಮಾಡಿದ್ದಾನೆ ಎಂದು ಮೈತ್ರಿಯಾ ತಾಯಿ ಇಂದಿರಾ ಹೇಳಿದ್ದಾರೆ.

 ಇತ್ತೀಚೆಗೆ ಯುಬಿ ಸಿಟಿಯಲ್ಲಿ ಅಡ್ಡಾಡಿದ್ವಿ

ಇತ್ತೀಚೆಗೆ ಯುಬಿ ಸಿಟಿಯಲ್ಲಿ ಅಡ್ಡಾಡಿದ್ವಿ

ಇತ್ತೀಚೆಗೆ ಯುಬಿ ಸಿಟಿಯಲ್ಲಿ ಅಡ್ಡಾಡಿದ್ವಿ ಸ್ಕೈ ಬಾರ್ ನಲ್ಲಿ ಸುತ್ತಾಡಿದ್ವಿ.. ನನ್ನ ಸ್ನೇಹಿತರ ಜೊತೆ ಕಾರ್ತಿಕ್ ಕೂಡಾ ಸದಾ ಇರುತ್ತಿದ್ದ. ಜೂನ್ ಮೊದಲ ವಾರ ಮದುವೆ ಆದಮೇಲೆ ತನ್ನ ಮನೆಯಲ್ಲಿ ಮದುವೆ ಬಗ್ಗೆ ಹೇಳುತ್ತೇನೆ ಎಂದಿದ್ದ. ಅದರೆ, ಕಳೆದ ಒಂದು ತಿಂಗಳಿನಿಂದ ನನ್ನನ್ನು ಹೆಚ್ಚು ಮಾತನಾಡಿಸುತ್ತಿರಲಿಲ್ಲ. ನನ್ನ ಬಳಿ ಫೋಟೊಸ್ ಬಿಟ್ಟು ಬೇರೆ ಸಾಕ್ಷಿ ಇಲ್ಲ. ದೇವರೇ ನನಗೆ ನ್ಯಾಯ ಕೊಡಿಸಬೇಕು. ನಾನು ಸುಳ್ಳು ಹೇಳುತ್ತಿಲ್ಲ ಎಂದು ಮೈತ್ರಿಯಾ ಹೇಳಿದ್ದಾರೆ.

ಸದಾನಂದ ಗೌಡರ ಕುಟುಂಬ ಆಕ್ರೋಶ

ಸದಾನಂದ ಗೌಡರ ಕುಟುಂಬ ಆಕ್ರೋಶ

ರೈಲ್ವೆ ಸಚಿವ ಸದಾನಂದ ಗೌಡ ಅವರ ಕುಟುಂಬಕ್ಕೆ ಅವಮಾನ ಮಾಡಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಮೈತ್ರಿಯಾ ಜೊತೆ ಕಾರ್ತಿಕ್ ಸ್ನೇಹ ಇದ್ದಿರಬಹುದು. ಅದರೆ, ಮನೆಯಲ್ಲಿ ತಿಳಿಯದಂತೆ ಇಬ್ಬರು ಮದುವೆಯಾಗಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಸದಾನಂದ ಗೌಡರ ಆಪ್ತರು ಹೇಳಿದ್ದಾರೆ. ಸದಾನಂದ ಗೌಡ ಅವರು ಆರೋಪಗಳೆಲ್ಲವೂ ಸುಳ್ಳು ಎಂದಷ್ಟೆ ಪ್ರತಿಕ್ರಿಯಿಸಿದ್ದಾರೆ.

ಅಂಬರೀಷ್ ಮನೆ ಅಂಗಳಕ್ಕೆ ಸಮಸ್ಯೆ ಶಿಫ್ಟ್?

ಅಂಬರೀಷ್ ಮನೆ ಅಂಗಳಕ್ಕೆ ಸಮಸ್ಯೆ ಶಿಫ್ಟ್?

2004ರಲ್ಲೇ ಚಿತ್ರರಂಗಕ್ಕೆ ಬಂದಿರುವ ಮೈತ್ರಿಯಾ ಇಂದಿಗೂ ಮಾಡೆಲಿಂಗ್ ನಲ್ಲಿ ಚಾಲ್ತಿಯಲ್ಲಿದ್ದಾರೆ. ಉಪೇಂದ್ರ ಜೊತೆ ಮೈತ್ರಿಯಾ ಗೌಡ ಅವರು ಟೋಪಿವಾಲ ಚಿತ್ರದಲ್ಲಿ ನಟಿಸಿದ್ದರು. ಮಂಡ್ಯದ ಹುಡುಗಿ ಮೈತ್ರಿಯಾ ಅವರನ್ನು ಅಂಬರೀಷ್ ಕೂಡಾ ಪ್ರೋತ್ಸಾಹಿಸಿದ್ದರು.

ಈಗ ಸಮಸ್ಯೆಯನ್ನು ಬಗೆಹರಿಸಲು ಅಂಬರೀಷ್ ಅವರ ಸಹಾಯ ಕೇಳುವ ಸಾಧ್ಯತೆ ಇದೆ. ಆದರೆ, ಅವರಿಗೆ ಸಾಕಷ್ಟು ಸಮಸ್ಯೆಇದೆ ನಮ್ಮ ಪರ್ಸನಲ್ ಪ್ರಾಬ್ಲಂ ತೆಗೆದುಕೊಂಡು ಅವರ ಬಳಿ ಹೇಗೆ ಹೋಗಲಿ ಎಂದು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಮೈತ್ರಿಯಾ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನ ಸೆಕ್ಸ್ ಸ್ಕ್ಯಾಂಡಲ್, ಮೈತ್ರಿಯಾ ಪರಿಣಯ, ಎಸ್ ನಾರಾಯಣ್ ಕಂಪನಿ ಕೇಸ್, ವಿತಕರರ ಸಮಸ್ಯೆ ಹೀಗೆ ಅಂಬಿ ಮನೆಗೆ ಅನೇಕ ಸಮಸ್ಯೆಗಳು ದಾಳಿ ಇಡಲು ಸಜ್ಜಾಗಿವೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಂಧನ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬಂಧನ

ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಷ್ಟೇ ಅಲ್ಲದೆ ಪೊಲೀಸರ ಮೇಲೆ ಕೈಮಾಡಿದ ಸಂಬಂಧ ನಟಿ ಮೈತ್ರಿಯಾ ಸೇರಿ ನಾಲ್ವರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಮೈತ್ರಿಯಾ ಹಾಗೂ ಆಕೆಯ ಸಹೋದರಿಯರಾದ ಸುಪ್ರಿಯಾ, ರೇಖಾ ಹಾಗೂ ರೂಪಾ ಅವರು ಬಂಧಿತರಾಗಿದ್ದರು. [ಹೆಚ್ಚಿನ ವಿವರ ಇಲ್ಲಿದೆ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+