ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಟರಾಯನಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಸದಾನಂದ ಗೌಡ

|
Google Oneindia Kannada News

Recommended Video

Lok Sabha Elections 2019 : ಬ್ಯಾಟರಾಯನಪುರದಲ್ಲಿ ಸದಾನಂದ ಗೌಡರ ಅಬ್ಬರದ ಪ್ರಚಾರ

ಬೆಂಗಳೂರು, ಏಪ್ರಿಲ್ 03 : 'ನಾವು ಮಾಡುವ ಅಭಿವೃದ್ಧಿ ಕಾರ್ಯಗಳು ಮಾತನಾಡಬೇಕು. ಮಾತನಾಡುವುದೇ ಕೆಲಸವಾಗಬಾರದು. ಕಳೆದ 25 ವರ್ಷದ ರಾಜಕಾರಣದಲ್ಲಿ ತಾವೆಂದೂ ಚೀಪ್ ಪಾಲಿಟಿಕ್ಸ್ ಮಾಡಿಲ್ಲ' ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಬುಧವಾರವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಹಕಾರ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡಿದರು.

ಕಾಂಗ್ರೆಸ್‌ನವರೇ ಆರೋಗ್ಯವಂತ ವ್ಯಕ್ತಿಗಳನ್ನು ನಾಟಕಕ್ಕೆ ಬಳಸಿ: ಡಿವಿಎಸ್ ವ್ಯಂಗ್ಯಕಾಂಗ್ರೆಸ್‌ನವರೇ ಆರೋಗ್ಯವಂತ ವ್ಯಕ್ತಿಗಳನ್ನು ನಾಟಕಕ್ಕೆ ಬಳಸಿ: ಡಿವಿಎಸ್ ವ್ಯಂಗ್ಯ

'ಕೆಲವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರೂ ಫೋಟೋ ತೆಗೆಸಿಕೊಂಡು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ರಾಜ್ಯ, ದೇಶದ ಕೆಲಸಗಳನ್ನೂ ಮಾಡಿದ್ದೇನೆ. ಆದರೆ ಪ್ರಚಾರಕ್ಕೆ ಹಪಹಪಿಸಲಿಲ್ಲ' ಎಂದರು.

ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ : ಸದಾನಂದ ಗೌಡ

Sadananda Gowda

3 ಲಕ್ಷಕ್ಕೂ ಅಧಿಕ ಲೀಡ್ : 'ಕಳೆದ ಚುನಾವಣೆಯಲ್ಲಿ 2.30 ಲಕ್ಷ ಲೀಡ್ ಪಡೆದು ಜಯಗಳಿಸಿದ್ದೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳ ಲೀಡ್ ಪಡೆದು ಜಯಗಳಿಸಲಿದ್ದೇನೆ' ಎಂದು ಸದಾನಂದ ಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ಚುನಾವಣಾ ಪುಟ

'ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಎಂಬೆಸಿ, ಐಟಿಸಿ ಸೇರಿದಂತೆ ಹಲವು ಉದ್ದಿಮೆಗಳಿಂದ ಸಿಎಸ್‍ಆರ್ ನಿಧಿಯನ್ನು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಲಾಗಿದೆ. ರಕ್ಷಣಾ ಇಲಾಖೆಗೆ ಸೇರಿದ ಭೂವಿವಾದದ 28 ಪ್ರಕರಣಗಳಲ್ಲಿ 20 ಪ್ರಕರಣಗಳನ್ನು ಪರಿಹರಿಸಲಾಗಿದೆ' ಎಂದು ವಿವರಣೆ ನೀಡಿದರು.

'ಬ್ಯಾಟರಾಯನಪುರ, ಯಶವಂತಪುರ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡು ಮಾದರಿ ಗ್ರಾಮಗಳನ್ನಾಗಿ ಮಾಡಿದ್ದೇನೆ. ಸಬರ್ಬನ್ ರೈಲು, ಮೆಟ್ರೋ ಎರಡನೇ ಹಂತಕ್ಕಾಗಿ ಶ್ರಮಿಸಿದ್ದೇನೆ' ಎಂದು ವಿವರಿಸಿದರು.

ಸಸಿ ನೀಡಿ ಆಶೀರ್ವಾದ : ಡಿ.ವಿ.ಸದಾನಂದಗೌಡ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಹಲವು ಪಾರ್ಕ್‍ಗಳಲ್ಲಿ ಬುಧವಾರ ಬೆಳಗ್ಗೆ ಚುನಾವಣಾ ಪ್ರಚಾರ ನಡೆಸಿ ಮತ ಯಾಚಿಸಿದರು. ಜಿಕೆವಿಕೆಗೆ ತೆರಳಿದ ಅವರು ವಾಯು ವಿಹಾರಕ್ಕೆ ಆಗಮಿಸಿದವರ ಬಳಿ ಮತ ಯಾಚಿಸಿದರು.

D.V.Sadananda Gowda

ಸಹಕಾರ ನಗರದ ಪಾರ್ಕ್‍ನಲ್ಲಿ ವಾಯು ವಿಹಾರಿಗಳ ಬಳಿ ಮತ ಯಾಚಿಸಿದ ಸದಾನಂದಗೌಡರು, ಅಲ್ಲೇ ಯೋಗ ಮಾಡುತ್ತಿದ್ದವರ ಬಳಿ ತೆರಳಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಆಗ ಮಹಿಳೆಯೊಬ್ಬರು ಸಸಿಯೊಂದನ್ನು ನೀಡಿ ಶುಭವಾಗಲಿ ಎಂದು ಆಶೀರ್ವದಿಸಿದರು. ನಂತರ ಪ್ರೊ.ಸತೀಶ್ ಧವನ್ ಪಾರ್ಕ್‍ಗೆ ತೆರಳಿ ವಾಯುವಿಹಾರಕ್ಕೆ ಆಗಮಿಸಿದವರ ಬಳಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರವುಳ್ಳ ಕರಪತ್ರ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

English summary
Bangalore North Lok sabha seat BJP candidate D.V.Sadananda Gowda election campaign in Byatarayanapura. Election will be held on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X