RR ನಗರ ಚುನಾವಣೆ ಮುಂದೂಡಿಕೆ, ಕಾಂಗ್ರೆಸ್‌ಗೆ ಕಪಾಳಮೋಕ್ಷ; ಸದಾನಂದಗೌಡ
ಬೆಂಗಳೂರು, ಮೇ 11: ರಾಜರಾಜೇಶ್ವರಿ ನಗರ ಚುನಾವಣೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸದಾನಂದಗೌಡ ಅವರು ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಕಪಾಳಮೋಕ್ಷ ಎಂದಿದ್ದಾರೆ.
ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡ ಅವರು, 'ಮತದಾರ ಗುರುತಿನ ಚೀಟಿಯ ಕಾರ್ಖಾನೆ ತೆರೆದಿದ್ದ ಗೂಂಡಾ ಶಾಸಕ ಮುನಿರತ್ನಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಕಪಾಳಮೋಕ್ಷ ಇದು' ಎಂದು ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Sri @RahulGandhi can u show that u are Imandar by disowning the Voter id factory owner Munirathna Naidu @INCIndia candidate From Rajarajeshwari Nagar candidate . @RahulGandhi if u disown him immediately we agree u have understood the value of Indian democracy
— Sadananda Gowda (@DVSBJP) May 11, 2018
ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಕಾರ್ಯ ಮಾಡಿದೆ ಈಗ ಇಂತಹಾ ಗೂಂಡಾ ಸಂಸ್ಕೃತಿಯ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ 9000ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ದೊರೆತಿದ್ದವು, ಇದರ ಸಂಬಂಧ ಮುನಿರತ್ನ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈಗ ಚುನಾವಣಾ ಆಯೋಗವು ರಾರಾನಗರ ಚುನಾವಣೆಯಲ್ಲಿ ಮೇ 28ಕ್ಕೆ ಮುಂದೂಡಿದೆ.
Democracy Slapped on the face of @INCIndia leaders who supported Rouge MLA @INCIndia Rajarajeshwari Nagara Candidate Munirathna Naidu Who was running Voter id factory @ceo_karnataka upheld Democracy value . Now it's time to disqualify his candidature for Expoliting poor voters
— Sadananda Gowda (@DVSBJP) May 11, 2018
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವೀಟ್ ಮಾಡಿರುವ ಸದಾನಂದಗೌಡ ಅವರು, 'ರಾಹುಲ್ ಗಾಂಧಿ ಅವರೇ ನೀವೀಗ ಮುನಿರತ್ನ ಅವರನ್ನು ಉಚ್ಛಾಟಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನೀವೀಗ ಮುನಿರತ್ನ ಅವರನ್ನು ಉಚ್ಛಾಟಿಸಿದರೆ ನಿಮಗೆ ನಿಜವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಗೌರವ ಇದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ' ಎಂದು ಸವಾಲು ಹಾಕಿದ್ದಾರೆ.












Click it and Unblock the Notifications