ನಾಳೆ ಮುನಿರತ್ನ ನಾಮಪತ್ರ ಸಲ್ಲಿಕೆ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೈರು!

ಬೆಂಗಳೂರು, ಅ. 13: ಅಂತೂ ಇಂತೂ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿರುವ ಮಾಜಿ ಶಾಸಕ ಮುನಿರತ್ನ ಅವರು ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 10.30ಕ್ಕೆ ಆರ್‌ ಆರ್‌ ನಗರದ ಬಿಬಿಎಂಪಿ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರವ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಉಪಸ್ಥಿತಲಿರಲಿದ್ದಾರೆ.

ಮುನಿರತ್ನ ಅವರ ನಾಮಪತ್ರ ಸಲ್ಲಿಕೆಗೂ ಮೊದಲು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಬೆಂಗಳೂರು ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಮುನಿರತ್ನ ಅವರ ಗೆಲುವಿಗೆ ತಂತ್ರ ರೂಪಿಸುವುದು ಸೇರಿದಂತೆ, ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಆದರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗೈರುಹಾಜರಾಗಲಿದ್ದಾರೆ.

ಸಭೆಗೆ ಹಾಜರು, ನಾಮಪತ್ರ ಸಲ್ಲಿಕೆಗೆ ಗೈರು

ಸಭೆಗೆ ಹಾಜರು, ನಾಮಪತ್ರ ಸಲ್ಲಿಕೆಗೆ ಗೈರು

ಸಭೆಯ ಬಳಿಕ ನಡೆಯಲಿರುವ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಉಪಸ್ಥಿತರಿರುತ್ತಾರೆ. ನಳೀನ್ ಕುಮಾರ್ ಕಟೀಲ್ ಅವರು ಉಪಸ್ಥಿತಿ ಬಗ್ಗೆ ಬಿಜೆಪಿ ಮಾಧ್ಯಮ ಆಹ್ವಾನದಲ್ಲಿ ಇಲ್ಲ. ಹೀಗಾಗಿ ಅವರು ನಾಮಪತ್ರ ಸಲ್ಲಿಕೆ ಸಂದರ್ಭ ಬಿಬಿಎಂಪಿ ಕಚೇರಿಗೆ ಬರುವುದಿಲ್ಲ ಎನ್ನಲಾಗಿದೆ.

ಬಿ ಫಾರಂ ಪಡೆದುಕೊಂಡು ಮುನಿರತ್ನ

ಬಿ ಫಾರಂ ಪಡೆದುಕೊಂಡು ಮುನಿರತ್ನ

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಆರ್.ಆರ್. ನಗರ ಉಪ ಚುನಾವಣೆಗೆ ಮುನಿರತ್ನ ಅವರ ಹೆಸರನ್ನು ಪ್ರಕಟಿಸುತ್ತಿದ್ದಂತೆಯೆ ಬಿಜೆಪಿ ಕಚೇರಿಗೆ ಮುನಿರತ್ನ ಅವರು ಆಗಮಿಸಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಈಗಾಗಲೇ ಬಿ ಫಾರಂ ಅನ್ನು ಪಡೆದುಕೊಂಡಿದ್ದಾರೆ.

ತುಳಸಿ ಮುನಿರಾಜು ಮನವೊಲಿಕೆ

ತುಳಸಿ ಮುನಿರಾಜು ಮನವೊಲಿಕೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಅವರು ಈಗಾಗಲೇ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ತುಳಸಿ ಮುನಿರಾಜು ಅವರೇ ಮುನಿರತ್ನ ಅವರ ವಿರುದ್ಧ ಅಕ್ರಮ ಮತದಾನ ಕುರಿತು ಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿಯೆ ಉಪ ಚುನಾವಣೆ ನಡೆಯುವುದು ವಿಳಂಬವಾಗಿದೆ. ಇದೀಗ ತುಳಸಿ ಮುನಿರಾಜು ಅವರನ್ನೂ ಮನವೊಲಿಸುವ ಜವಾಬ್ದಾರಿ ಬಿಜೆಪಿ ನಾಯಕರ ಮೇಲಿದೆ.

ಕುಸುಮಾ ನಾಮಪತ್ರ ಸಲ್ಲಿಕೆ

ಕುಸುಮಾ ನಾಮಪತ್ರ ಸಲ್ಲಿಕೆ

ಮೊದಲೇ ನಿಗದಿಯಾದಂತೆ ನಾಳೆ ಅ. 14 ರಂದು ಬುಧವಾರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕುಸುಮಾ ಹನುಮಂತಪ್ಪ ಅವರು ನಾಮಪತ್ರ ಸಲ್ಲಿಬೇಕಾಗಿತ್ತು. ಆದರೆ ಜ್ಯೋತಿಷಿ ಸಲಹೆಯಂತೆ ಇಂದೇ ನಾಮಪತ್ರವನ್ನು ಕುಸುಮಾ ಅವರು ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ ಆರಾಧ್ಯ ಅವರ ಸಲಹೆಯಂತೆ ಇಂದೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Recommended Video

      ಆನೆಯ ಮೇಲೆ ಯೋಗಾಸನ ಮಾಡುವಾಗ ಉರುಳಿಬಿದ್ದ ರಾಮದೇವ್‌ ಬಾಬಾ! Oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+