ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 22ರ ವರೆಗೆ ಬಾಂಬ್ ನಾಗ ಮತ್ತು ಮಕ್ಕಳು ಪೊಲೀಸ್ ಕಸ್ಟಡಿಗೆ

|
Google Oneindia Kannada News

ಬೆಂಗಳೂರು, ಮೇ 12 : ರೌಡಿ ಶೀಟರ್ ವಿ.ನಾಗರಾಜ್‌ ಅಲಿಯಾಸ್ ಬಾಂಬ್ ನಾಗ ಮತ್ತು ಈತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ಮೇ 22ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ತನ್ನ ಮನೆ ಮೇಲೆ ದಾಳಿ ನಡೆದ ಬಳಿಕ ಭೂಗತನಾಗಿ ಪೊಲೀಸರ ವಿರುದ್ಧ ಆರೋಪಗನ್ನು ಮಾಡುತ್ತಿದ್ದ ರೌಡಿ ಶೀಟರ್ ವಿ.ನಾಗರಾಜ್, ತನ್ನ ಇಬ್ಬರು ಮಕ್ಕಳನ್ನು ತಮಿಳುನಾಡಿನಲ್ಲಿ ಆರ್ಕಾಟ್ ನಲ್ಲಿ ಬೆಂಗಳೂರು ಪೊಲೀಸರು ಗುರುವಾರ ಬಂಧಿಸಿ ಇಂದು ಮೇ 12ರಂದು ಬಾಂಬ್ ನಾಗ, ಆತನ ಮಕ್ಕಳು ಹಾಗೂ 11 ಮಂದಿ ಸಹಚರರನ್ನು ಶುಕ್ರವಾರ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.[ರೌಡಿ ಶೀಟರ್ ನಾಗನ ಪತ್ತೆಯ ಹಿಂದಿನ ರೋಚಕ ಕಹಾನಿ]

Rowdy sheeter Naga and Sons sent to 10 days police custody for further inquiry

ನಾಗರಾಜ್‌ ಹಾಗೂ ಆತನ ಮಕ್ಕಳನ್ನು 15 ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶ ಕೆ.ಎಸ್‌.ಜ್ಯೋತಿಶ್ರೀ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ಎತ್ತಿದ ನಾಗರಾಜ್‌ ಪರ ವಕೀಲ ನರೇಶ್, 5 ದಿನಗಳಷ್ಟೇ ನೀಡುವಂತೆ ಮನವಿ ಮಾಡಿದರು. ಕೊನೆಗೆ ನ್ಯಾಯಾಧೀಶರು 10 ದಿನಗಳು ಅಂದರೆ ಮೇ 22ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.[ಬೆಂಗಳೂರು ಪೊಲೀಸರ ಬಲೆಗೆ ನಾಗ, ಗಾಂಧಿ ಮತ್ತು ಶಾಸ್ತ್ರಿ]

ನಾಗರಾಜ್‌ನ 11 ಮಂದಿ ಸಹಚರರ ಪೈಕಿ ಶರವಣ, ಜಯಕೃಷ್ಣನನ್ನು ಮೇ 17ರವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿದರು. ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ಮುಂದಿನ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದರು.

English summary
Bengaluru 11th ACMM court sends rowdy sheeter V. Nagaraj aliyas Bomb Naga to 10 days police custody for further investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X