Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಶೆಡ್ ನಾಶ: ನೂರಾರು ಕುಟುಂಬ ಬೀದಿ ಪಾಲು

ಬೆಂಗಳೂರು, ಫೆಬ್ರವರಿ 14: ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಶೆಡ್‌ಗಳನ್ನು ರೌಡಿಗಳು ನಾಶಪಡಿಸಿದ್ದಾರೆ.

ಭೂ ವಿವಾದ ಹಿನ್ನೆಲೆ ಕಿಡಿಗೇಡಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಶೆಡ್‌ಗಳಲ್ಲಿ ವಾಸಿಸುತ್ತಿರುವವರ ಮೇಲೆ ಹಲ್ಲೆ ಮಾಡಿ ಶೆಡ್‌ಗಳನ್ನು ನೆಲಸಮ ಮಾಡಿದ್ದಾರೆ. ಈ ಘಟನೆ ಮಾರತ್ತಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಕೊಳ್ಳಲ ಗ್ರಾಮ ಸಮೀಪ ನಡೆದಿದೆ.

ಮುನೇಕೊಳ್ಳಲ ಗ್ರಾಮದ ಹೊರಭಾಗದಲ್ಲಿ ಜಯಮ್ಮ ಎಂಬುವವರ ಪುತ್ರ ನವೀನ್ ರೆಡ್ಡಿ ಅವರಿಗೆ ಪಿತ್ರಾರ್ಜಿತ ಜಮೀನಿದೆ. ಇಲ್ಲಿ ಶೆಡ್‌ಗಳನ್ನು ನಿರ್ಮಿಸಿ ಪಶ್ಚಿಮ ಬಂಗಾಳದ ಜನರಿಗೆ 13 ವರ್ಷಗಳಿಂದ ಬಾಡಿಗೆ ನೀಡಿದ್ದರು. ಆ ಸ್ಥಳದಲ್ಲಿ 20ಕ್ಕೂ ಹೆಚ್ಚು ಶೆಡ್ ಗಳಲ್ಲಿ ನೂರಾರು ಚಿಂದಿ ಆಯುವ ಕೆಲಸ ಮಾಡುವವರು ವಾಸವಿದ್ದರು.

Rowdies Have Destroyed More Than 20 Sheds In Bengaluru

ನಾರಾಯಣರೆಡ್ಡಿ ಹೆಸರಿನಲ್ಲಿ 50ಕ್ಕೂ ಹೆಚ್ಚು ರೌಡಿಗಳ ತಂಡ ಏಕಾಏಕಿ ಆಗಮಿಸಿ ಶೆಡ್‌ಗಳನ್ನು ನಾಶಪಡಿಸಿದ್ದಾರೆ. ಇದರಿಂದ 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಗುರುವಾರ ಬೆಳಗ್ಗೆ 50ಕ್ಕೂ ಹೆಚ್ಚು ಗೂಂಡಾಗಳು ಮೂರು ಜೆಸಿಬಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದು ಶೆಡ್‌ಗಳನ್ನು ಜಮೀನು ಮಾಲಿಕರು ಹಾಗೂ ಸ್ಥಳೀಯ ಪೊಲೀಸರಿಗೆ ತಿಳಿಸದೆ ತೆರವುಗೊಳಿಸಿದ್ದಾರೆ.

ಅಲ್ಲದೆ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಮಹಿಳೆಯರು ಹಾಗೂ ಪುಟ್ಟ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೌಡಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+