ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದನ್ ಯಶಸ್ಸಿನ ಹಿಂದೆ ಮಹಾದಾನಿ ರೋಹಿಣಿ ಎಂಬ ಶಕ್ತಿ

By Mahesh
|
Google Oneindia Kannada News

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಅವರ ಗಿವಿಂಗ್ ಪ್ಲೆಡ್ಜ್ ಅಭಿಯಾನದಡಿ ತಮ್ಮ ಆಸ್ತಿ ದಾನ ಮಾಡಲು ನಿಲೇಕಣಿ ದಂಪತಿಗಳು ನಿರ್ಧರಿಸಿರುವ ಸುದ್ದಿ ಓದಿರಬಹುದು. ನಂದನ್ ನಿಲೇಕಣಿ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿ, ಭಾರತದ ಮಹಾನ್ ದಾನಿಯಾಗಿ ರೋಹಿಣಿ ಸಕ್ರಿಯವಾಗಿದ್ದಾರೆ.

ನಂದನ್ ನಿಲೇಕಣಿ ವ್ಯಕ್ತಿಚಿತ್ರ

ವಿಪ್ರೋಂ ಅಧ್ಯಕ್ಷ ಅಜೀಂ ಪ್ರೇಮ್ ಜೀ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಶೋಭಾ ಲಿಮಿಟೆಡ್ ಅಧ್ಯಕ್ಷ ಪಿ.ಎನ್.ಸಿ ಮೆನನ್ ಇದೇ ರೀತಿ ತಮ್ಮ ಆಸ್ತಿಯ ಅರ್ಧ ಭಾಗವನ್ನು ಲೋಕೋಪಯೋಗಿ ಕಾರ್ಯಕ್ಕೆ ವಿನಿಯೋಗಿಸಲು ತೀರ್ಮಾನಿಸಿರುವುದು ಶುಭ ಸೂಚಕ.

ಅರ್ಧ ಆಸ್ತಿ ದಾನ ಮಾಡಲು ನಂದನ್ ನಿಲೇಕಣಿ ದಂಪತಿ ನಿರ್ಧಾರಅರ್ಧ ಆಸ್ತಿ ದಾನ ಮಾಡಲು ನಂದನ್ ನಿಲೇಕಣಿ ದಂಪತಿ ನಿರ್ಧಾರ

ನಂದನ್ ಯಶಸ್ಸಿನ ಹಿಂದಿನ ಶಕ್ತಿ ರೋಹಿಣಿ ನಂದನ್ ಯಶಸ್ಸಿನ ಹಿಂದಿನ ಶಕ್ತಿ ಪತ್ನಿ ರೋಹಿಣಿ. ಸುಮಾರು 7,700 ಕೋಟಿ ಘೋಷಿತಾ ಆಸ್ತಿ ಹೊಂದಿರುವ ದಂಪತಿ 1999ರಿಂದ ದಾನ ಧರ್ಮಗಳ ಮೂಲಕ ಮನೆ ಮಾತಾಗಿದ್ದಾರೆ.

ರೋಹಿಣಿ ಅವರು ಸಾಮಾಜಿಕ ಕಾರ್ಯಕರ್ತೆಯಾಗಿ ಜನಪ್ರಿಯತೆ ಹೊಂದಿದ್ದಾರೆ. ಪ್ರಥಮ್ ಬುಕ್ಸ್, ಆರ್ಘ್ಯಂ ಎಂಬ ಸಂಸ್ಥೆಗಳನ್ನು ರೋಹಿಣಿ ಹುಟ್ಟು ಹಾಕಿದ್ದಾರೆ. ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಂರಕ್ಷಣೆ, ಕಸ ನಿರ್ವಹಣೆ ಕ್ಷೇತ್ರ ರೋಹಿಣಿ ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಥಮ್ ಬುಕ್ಸ್ ಎಂಬ ಸರ್ಕಾರೇತರ ಸಂಸ್ಥೆ

ಪ್ರಥಮ್ ಬುಕ್ಸ್ ಎಂಬ ಸರ್ಕಾರೇತರ ಸಂಸ್ಥೆ

ತಾವೇ ಸ್ಥಾಪಿಸಿದ ಪ್ರಥಮ್ ಬುಕ್ಸ್ ಎಂಬ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ಇತ್ತೀಚೆಗೆ ಕೆಳಗಿಳಿದಿದ್ದಾರೆ. ಮಕ್ಕಳಿಗಾಗಿ ವಿವಿಧ ಭಾಷೆಗಳಲ್ಲಿ ವೈಜ್ಞಾನಿಕ ಹಾಗೂ ಜ್ಞಾನವೃದ್ಧಿ ಪುಸ್ತಕಗಳನ್ನು ಈ ಸಂಸ್ಥೆ ಹೊರತರುತ್ತಿದೆ. ಡಿಜಿಟಲ್ ಸಾಧ್ಯತೆಗಳನ್ನು ಈಗ ಅಳವಡಿಸಿಕೊಂಡಿದೆ. ಈ ಮೂಲಕ ಸಾಮಾಜಕ ಕಳಕಳಿ ತೋರುತ್ತಿದ್ದಾರೆ.

ಸಾವಿರಾರು ಕೋಟಿ ರು.ಗೂ ಅಧಿಕ ದಾನ

ಸಾವಿರಾರು ಕೋಟಿ ರು.ಗೂ ಅಧಿಕ ದಾನ

ಇದುವರೆವಿಗೂ ಸುಮಾರು ಸಾವಿರಾರು ಕೋಟಿ ರು.ಗೂ ಅಧಿಕ ಮೊತ್ತವನ್ನು ದಾನವಾಗಿ ನೀಡಿದ್ದಾರೆ. ರೋಹಿಣಿ ಅವರು ಇತ್ತೀಚೆಗೆ ತಮ್ಮ ಬಳಿ ಇದ್ದ 5.77 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು. ಅದರಿಂದ ಸಂಗ್ರಹಗೊಂಡ 163.58 ಕೋಟಿ ರುಗಳನ್ನು ಸಮಾಜಸೇವೆಗಾಗಿ ವಿನಿಯೋಗಿಸಿದ್ದಾರೆ.

ದಾನದಲ್ಲಿ ಎತ್ತಿದ ಕೈ ಈ ಕುಟುಂಬ

ದಾನದಲ್ಲಿ ಎತ್ತಿದ ಕೈ ಈ ಕುಟುಂಬ

ಐಐಟಿ ಕ್ವಿಜ್ ಕಾರ್ಯಕ್ರಮವೊಂದರಲ್ಲಿ ರೋಹಿಣಿ ಅವರನ್ನು ಕಂಡು ಮೆಚ್ಚಿ ನಂದನ್ ನಿಲೇಕಣಿ ಮದುವೆಯಾಗಿದ್ದರು. ದಂಪತಿಗೆ ನಿಹಾರ್ ಹಾಗೂ ಜಾಹ್ನವಿ ಎಂಬ ಮಕ್ಕಳಿದ್ದಾರೆ. ರೋಹಿಣಿ ಅವರು 'ಆರ್ಘ್ಯಂ' ಎಂಬ ಸಾರ್ವಜನಿಕ ದತ್ತಿ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಜಲ ನಿರ್ವಹಣೆ ಹಾಗೂ ಬಡ ಶೋಷಿತ ವರ್ಗಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯ ನಿರ್ವಹಿಸುತ್ತಿದೆ.

ಅತಿ ಹೆಚ್ಚು ಷೇರು ಪಾಲು ಹೊಂದಿರುವವರು ಇದೇ ಜಾಹ್ನವಿ ನಿಲೇಕಣಿ. ಅವರ ಪಾಲು ಕೇವಲ ಶೇ. 0.29ರಷ್ಟು. ಆದರೆ ಅದರ ಮೌಲ್ಯ ಪ್ರಸಕ್ತ ಮಾರುಕಟ್ಟೆಯಲ್ಲಿ ಬರೋಬ್ಬರಿ 400 ಕೋಟಿ ರುಪಾಯಿಗೂ ಅಧಿಕ.
ಎಕ್ ಸ್ಟೆಪ್ ಸಂಸ್ಥೆಯ ಸಹ ಸ್ಥಾಪಕಿ

ಎಕ್ ಸ್ಟೆಪ್ ಸಂಸ್ಥೆಯ ಸಹ ಸ್ಥಾಪಕಿ

ರೋಹಿಣಿ ಅವರು ಪ್ರಥಮ್ ಬುಕ್ಸ್, ಅರ್ಘ್ಯಂ ಅಲ್ಲದೆ ಎಕ್ ಸ್ಟೆಪ್ ಸಂಸ್ಥೆಯ ಸಹ ಸ್ಥಾಪಕಿ, ಸುಮಾರು 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ದಾನ ಮಾಡುತ್ತಾ ಬಂದಿರುವ ರೋಹಿಣಿ ಅವರು ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ(ATREE) ಮೂಲಕ ಪರಿಸರ ಕಾಳಜಿ ಕೂಡಾ ಮೆರೆದಿದ್ದಾರೆ.

English summary
Infosys co-founder Nandan Nilekani and wife Rohini will donate half of their wealth under Giving Pledge movement. Rohini is Founder-Chairperson, Arghyam, founded Pratham books, Co-founder and Director of EkStep Foundation, she is on is on the Board of ATREE, she also worked as Journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X