ಬೆಂಗಳೂರಿನ ಈ ಬೂತ್‌ನಲ್ಲಿ ಯಾವ ಬಟನ್ ಒತ್ತಿದರೂ ಮತ ಬಿಜೆಪಿಗೆ!

ಬೆಂಗಳೂರು, ಮೇ 12: ನಗರದ ಆರ್‌ಎಂವಿ 2ನೇ ಹಂತದ 2ನೇ ಬೂತ್‌ನಲ್ಲಿ ಇವಿಎಂ ಯಂತ್ರದ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಹೋಗಿದೆ. ಆದರೆ ನಂತರ ದೋಷವನ್ನು ಸರಿಪಡಿಸಲಾಗಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ಬ್ರಿಜೇಶ್ ಕಾಳಪ್ಪ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, 'ಆರ್‌ಎಂವಿ 2ನೇ ಹಂತದ 2ನೇ ಬೂತ್‌ನಲ್ಲಿ ಇವಿಎಂ ಸಮಸ್ಯೆ ಇದ್ದು ಯಾವ ಬಟನ್‌ಗೆ ಮತ ಹಾಕಿದರೂ ಬಿಜೆಪಿಗೆ ಮತ ಹೋಗಿದೆಯೆಂದು ವಿವಿಪ್ಯಾಟ್‌ನಲ್ಲಿ ತೋರಿಸುತ್ತಿದೆ ಎಂದಿದ್ದಾರೆ. ಈ ಟ್ವೀಟ್‌ ಅನ್ನು ಅವರು ಇಂದು 8 ಗಂಟೆ ಸುಮಾರಿಗೆ ಮಾಡಿದ್ದಾರೆ.

9 ಗಂಟೆ ಸುಮಾರಿಗೆ ಮತ್ತೆ ಟ್ವೀಟ್ ಮಾಡಿರುವ ಬ್ರಿಜೇಶ್ ಕಾಳಪ್ಪ ಅವರು, ಇನ್ನೂ ಸಮಸ್ಯೆ ಸರಿಹೋಗಿಲ್ಲ, ಮತದಾರರೆಲ್ಲರೂ ಕೋಪಗೊಂಡು ವಪಾಸ್ಸಾಗುತ್ತಿದ್ದಾರೆ. ನನ್ನ ಮತ ಸಹ ಇದೇ ಬೂತ್‌ನಲ್ಲಿ ಚಲಾಯಿಸಬೇಕಿದೆ' ಎಂದು ಟ್ವೀಟ್‌ ಮಾಡಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

RMV 2nd stage booth EVM not working properly

ಮತ್ತೆ ಸಮಸ್ಯೆ ಸರಿಪಡಿಸಿ ಸಾಮಾನ್ಯ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ಬ್ರಿಜೇಶ್ ಕಾಳಪ್ಪ ಅವರು 12 ಗಂಟೆ ಸುಮಾರಿಗೆ ಟ್ವೀಟ್ ಮಾಡಿದ್ದಾರೆ. ಅಂದರೆ ಸುಮಾರು 5 ಗಂಟೆಗಳ ಕಾಲ ಇವಿಎಂ ಸರಿ ಇರಲಿಲ್ಲ. ಮತದಾನದ ಅವಧಿ ಸಹ ಅಷ್ಟು ಸಮಯ ವ್ಯರ್ಥವಾಗಿದೆ.

ರಾಮನಗರ, ಚಾಮರಾಜಪೇಟೆ ಮತ್ತು ಹೆಬ್ಬಾಳದಲ್ಲಿಯೂ ಇದೇ ರೀತಿಯಲ್ಲಿ ಸಮಸ್ಯೆ ಕಂಡು ಬಂದಿರುವುದಾಗಿ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+