• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಕಾರು ಸ್ಟಾರ್ಟ್ ಮಾಡಿದರೆ ಜೀವ ಹೋಗುತ್ತೆ; ಹುಷಾರ್

|

ಬೆಂಗಳೂರು, ಅ. 8: ಕಾರು ರಿವರ್ಸ್ ಗೇರ್‌ನಲ್ಲಿರೋದನ್ನು ಗಮನಿಸದೆ ಸ್ಟಾರ್ಟ್ ಮಾಡಿದ ಪರಿಣಾಮ ಮಹಿಳೆಯೊಬ್ಬರು ಮರ ಮತ್ತು ಕಾರ್ ಡೋರ್ ಮಧ್ಯೆ ಸಿಲುಕಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಬಿಇಎಲ್ ರಸ್ತೆಯ ಆರ್.ಕೆ.ಗಾರ್ಡನ್ ಸಮೀಪ ಈ ದಾರುಣ ಘಟನೆ ನಡೆದಿದೆ.

ಮೃತರನ್ನು 45 ವರ್ಷದ ನಂದಿನಿ ರಾವ್ ಎಂದು ಗುರುತಿಸಲಾಗಿದೆ. ಮರದ ಸಮೀಪದಲ್ಲಿ ತಮ್ಮ ಕಾರು ಪಾರ್ಕ್ ಮಾಡಿದ್ದ ನಂದಿನಿ ರಾವ್, ಕಾರಿನ ಡೋರ್‌ ತೆಗೆದು ಹೊರಗಡೆ ನಿಂತು ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕಾರು ದಿಢೀರ್ ಹಿಮ್ಮುಖವಾಗಿ (ರಿವರ್ಸ್ ಗೇರ್‌) ಚಲಿಸಿದೆ.

ಕಾರು ರಿವರ್ಸ್ ಗೇರ್‌ನಲ್ಲಿ ವೇಗವಾಗಿ ಹಿಂದಕ್ಕೆ ಹೋಗುತ್ತಿದ್ದಂತೆ, ಡೋರ್‌ನ ಪಕ್ಕದಲ್ಲೇ ನಿಂತಿದ್ದ ನಂದಿನಿ ರಾವ್ ಮರಕ್ಕೆ ಸಿಲುಕಿದ್ದಾರೆ. ಕಾರ್‌ ಡೋರ್ ಹಾಗೂ ಮರದ ನಡುವೆ ಸಿಲುಕಿದ್ದ ನಂದಿನಿ ರಾವ್ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ.

ಘಟನೆಯ ದೃಶ್ಯ ಸಮೀಪದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ಸದಾಶಿವನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಳಗೆ ಕೂತಿದ್ದರೂ ಜೀವ ಉಳಿಯುತ್ತಿತ್ತು

   Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

   ಸ್ಟಾರ್ಟ್ ಮಾಡುವಾಗ ಕಾರು ರಿವರ್ಸ್ ಗೇರ್‌ನಲ್ಲಿರುವುದು ಬಹುಶಃ ನಂದಿನಿ ರಾವ್‌ ಗಮನಕ್ಕೆ ಬಂದಿರಲಿಲ್ಲ ಅನ್ನಿಸುತ್ತೆ. ಕಾರ್‌ ಒಳಗೆ ಕೂತು ನಂದಿನಿ ರಾವ್ ಸ್ಟಾರ್ಟ್ ಮಾಡಿದ್ದರೂ ಅವರ ಜೀವ ಉಳಿಯುತ್ತಿತ್ತು. ಆದರೆ ಕಾರ್‌ ಹೊರಗೆ ಡೋರ್ ಪಕ್ಕದಲ್ಲಿಯೇ ನಿಂತು, ಕಾರು ಸ್ಟಾರ್ಟ್ ಮಾಡಿದ್ದೇ ಅವರ ಪ್ರಾಣಕ್ಕೆ ಎರವಾಯಿತು. ಮರ ಮತ್ತು ಕಾರ್ ಡೋರ್ ನಡುವೆ ಸಿಲುಕಿದ್ದ ನಂದಿನಿ ರಾವ್‌ರನ್ನ ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

   English summary
   Woman died in a car accident which after being struck by a tree and car door near RK Garden, Benagaluru. The horrible CCTV footage of incident goes viral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X