• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರ; ವೃಷಭಾವತಿಯಲ್ಲಿ ಕೊಚ್ಚಿ ಹೋದ ರಸ್ತೆ, ಮೇಯರ್ ಭೇಟಿ

|

ಬೆಂಗಳೂರು, ಜೂನ್ 26 : ಬೆಂಗಳೂರು ನಗರದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ವೃಷಭಾವತಿ ತುಂಬಿ ಹರಿದಿತ್ತು. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ತಡೆಗೋಡೆ ಕುಸಿದು ಮೈಸೂರು ರಸ್ತೆ ಕೊಚ್ಚಿಕೊಂಡು ಹೋಗಿತ್ತು.

   Railway service to be cancelled till August 12th | Oneindia Kannada

   ಗುರುವಾರ ಕಾಲುವೆಯಲ್ಲಿ ನೀರಿನ ಹರಿವು ಸಹ ಸ್ಥಿತಿಗೆ ಬಂದಿದೆ. ಮಳೆ ಮಾಡಿರುವ ಅವಾಂತರ ಸುಲಭವಾಗಿ ಜನರ, ಬಿಬಿಎಂಪಿಯ ಕಣ್ಣಿಗೆ ಕಾಣುತ್ತಿದೆ. ಬಿಬಿಎಂಪಿ ಕಾಲುವೆಯಲ್ಲಿನ ನೀರಿನ ಹರಿವಿನ ಮಾರ್ಗ ಬದಲಾಯಿಸಿ ರಸ್ತೆ ದುರಸ್ತಿ ಕೈಗೊಳ್ಳಲಿದೆ.

   ವೈರಲ್ ವಿಡಿಯೋ; ಬೆಂಗಳೂರಲ್ಲಿ ಮಳೆ, ಕೊಚ್ಚಿ ಹೋದ ರಸ್ತೆ

   ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಆಯುಕ್ತ ಬಿ. ಎಚ್. ಅನಿಲ್ ಕುಮಾರ್, ಅಧಿಕಾರಿಗಳ ತಂಡ ಇಂದು ತಡೆಗೋಡೆ ಕುಸಿದು ಹೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈಗಾಗಲೇ ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

   ಮಳೆ ಅವಾಂತರ: ನಿದ್ದೆಯಲ್ಲಿರುವ ಬಿಬಿಎಂಪಿಗೆ ಎಚ್ಚರಿಕೆ

   ತಡೆಗೋಡೆಯನ್ನು ಪುನಃ ನಿರ್ಮಾಣ ಮಾಡಿ, ಕೊಚ್ಚಿ ಹೋಗಿರುವ ರಸ್ತೆಯನ್ನು ಬಿಬಿಎಂಪಿ ದುರಸ್ತಿ ಮಾಡಲಿದೆ. ಮತ್ತೆ ಮಳೆಯಾದರೆ ರಸ್ತೆ ಕೊರೆಯದಂತೆ ಮುಂಜಾಗ್ರತೆ ವಹಿಸಲು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

   ಬೆಂಗಳೂರಲ್ಲಿ ಭಾರಿ ಗಾಳಿ, ಮಳೆ; ಮರಗಳು ಧರೆಗೆ

   ತಡೆಗೋಡೆ ಕುಸಿತ

   ತಡೆಗೋಡೆ ಕುಸಿತ

   ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕೆಂಗೇರಿ ಬಳಿಯ ವೃಷಭಾವತಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಡೆಗೋಡೆ ಕುಸಿದಿದ್ದು, ಮೈಸೂರು ರಸ್ತೆ ಕುಸಿದು ಹೋಗಿದೆ.

   ಮೇಯರ್, ಆಯುಕ್ತರು ಭೇಟಿ

   ಮೇಯರ್, ಆಯುಕ್ತರು ಭೇಟಿ

   ಶುಕ್ರವಾರ ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು.

   ವಾಹನ ಸಂಚಾರ ನಿರ್ಬಂಧ

   ವಾಹನ ಸಂಚಾರ ನಿರ್ಬಂಧ

   ತಡೆಗೋಡೆ ಕುಸಿದಿರುವ ಪರಿಣಾಮ ಮೈಸೂರು ರಸ್ತೆ ಸ್ವಲ್ಪ ಭಾಗ ಹಾಳಾಗಿದೆ. ವಾಹನಗಳ ಓಡಾಟವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೆ ಮಳೆಯಾದರೆ ರಸ್ತೆ ಕೊರೆಯದಂತೆ ಮುಂಜಾಗ್ರತೆ ವಹಿಸಲು ಕೂಡಲೇ ಕಾಮಗರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

   ನೀರಿನ ಮಾರ್ಗ ಬದಲು

   ನೀರಿನ ಮಾರ್ಗ ಬದಲು

   ವೃಷಭಾವತಿ ಕಾಲುವೆಯ ನೀರಿನ ಹರಿವನ್ನು ಪರಿವರ್ತನೆ ಮಾಡಿ, ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಸ್ಥಳೀಯ ಪಾಲಿಕೆ ಸದಸ್ಯರಾದ ವಿ‌.ವಿ.ಸತ್ಯನಾರಾಯಣ, ಬೃಹತ್ ನೀರುಕಾಲುವೆ ಗಾಲುವೆ ವಿಭಾಗದ ಮುಖ್ಯ ಅಭಿಯಂತರರು ಬಸವರಾಜ್ ಕಬಾಡೆ ಮುಂತಾದವರು ಸ್ಥಳ ವೀಕ್ಷಣೆ ಮಾಡಿದ್ದಾರೆ.

   English summary
   A stretch of Mysuru road washed away in Bengaluru after water level of Vrishabawathi river continues to rise. BBMP mayor visited the spot.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X