ಹೊಸ ವಾಹನ ನೋಂದಣಿ: ಡಿಸಿಎಂ-ಸಾರಿಗೆ ಸಚಿವರ ವಿಭಿನ್ನ ಹೇಳಿಕೆ

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ವಾಹನ ದಟ್ಟಣೆ, ಪರಿಸರ ಮಾಲಿನ್ಯವೂ ಕೂಡ ಅಧಿಕವಾಗುತ್ತಿದೆ. ಹಾಗಾಗಿ ಹೊಸ ವಾಹನ ನೋಂದಣಿಗೆ ತಾತ್ಕಾಲಿಕ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಉಪಮುಖ್ಯಮಂತ್ರಿ ಡಾ. ಜಿ ಪರಮಶ್ವರ್ ಮಾಹಿತಿ ನೀಡಿದ್ದು, ದ್ವಿಚಕ್ರ, ಕಾರು ನೋಂದಣಿಗೆ ತಾತ್ಕಾಲಿಕ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ, ಈ ಕುರಿತು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Rift between DCM and transport minister over regulating new vehicle registration in Bengaluru

ಆದರೆ ಅಚ್ಚರಿಯ ಸಂಗತಿ ಏನೆಂದರೆ ಈ ವಿಷಯ ಕುರಿತು ಖುದ್ದಾಗಿ ಸಾರಿಗೆ ಸಚಿವರಿಗೆ ತಿಳಿದಿಲ್ಲ, ಸುದ್ದಿಗಾರರ ಪ್ರಶ್ನೆಗೆ ನಿಬ್ಬೆರೆಗಾದ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಈ ವಿಷಯದ ಬಗ್ಗೆ ನನಗೆ ಮಾಹಿತಿಯೇ ಇಲ್ಲ, ಈ ಕುರಿತು ಪರಮೇಶ್ವರ ಅವರ ಬಳಿ ಚರ್ಚಿಸಿ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

Rift between DCM and transport minister over regulating new vehicle registration in Bengaluru

ಒಟ್ಟಿನಲ್ಲಿ ಈ ಇಬ್ಬರ ಹೇಳಿಕೆಯಿಂದ ಜನರ ಮನಸ್ಸಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ಬಾರಿ ಸ್ವಂತ ವಾಹನಗಳ ಖರೀದಿಗೆ ನಿಷೇಧ ಹೇರುವ ಚಿಂತನೆ ಇರುವುದು ಮಾತ್ರ ಇದರಿಂದ ಸ್ಪಷ್ಟವಾಗುತ್ತದೆ. ಬೆಂಗಳೂರಲ್ಲಿ ಈಗಾಗಲೇ ವಾಹನಗಳ ಸಂಖ್ಯೆ 75 ಲಕ್ಷ ದಾಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+