ಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆ
ಬೆಂಗಳೂರು, ಸೆಪ್ಟೆಂಬರ್ 8: "ಮಂಗಳವಾರ ರಾತ್ರಿ ಎಂಟೂ ಮೂವತ್ತರ ಹೊತ್ತಿಗೆ ಸರ್, ಗೌರಿ ಲಂಕೇಶ್ ಅವರ ಶೂಟ್ ಔಟ್ ಆಗಿದೆ. ಯಾರೋ ಹತ್ಯೆ ಮಾಡಿದ್ದಾರೆ ಎಂದು ನನಗೆ ಟಿವಿ ಪತ್ರಕರ್ತರೊಬ್ಬರ ಮೆಸೇಜ್ ಬಂತು. ಬಿಡಿ, ಯಾರೋ ನಕ್ಸಲೈಟೇ ಮಾಡಿದ್ದಾರೆ ಅಂತ ನಾ ಹೇಳಿದೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದವರು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್.
ಈ ರೀತಿಯ ಕೊಲೆಗಳಲ್ಲಿ ಅಪರಾಧಿಗಳನ್ನು ಹಿಡಿಯುವ ವಿಚಾರ, ಯಾವ ಆಯಾಮದಲ್ಲಿ ತನಿಖೆ ಆಗಬೇಕು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಸಂಗ್ರಾಮ್ ಸಿಂಗ್ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ ಕೆಲವು ಸೂಕ್ಷ್ಮ ವಿಚಾರಗಳನ್ನು, ತನಿಖೆ ಸಾಗಬೇಕಾದ ಹಾದಿಯನ್ನು ತಮ್ಮ ಅನುಭವದ ಆಧಾರದಲ್ಲಿ ಹಂಚಿಕೊಂಡರು.
ತಮ್ಮ ಕಾಲೇಜು ದಿನಗಳಲ್ಲಿ ಇಂಗ್ಲಿಷ್ ಮೇಷ್ಟ್ರಾಗಿದ್ದ ಪಿ.ಲಂಕೇಶ್ ರ ಮಗಳ ಹತ್ಯೆ ಬಗ್ಗೆ ಸಿಂಗ್ ಅವರಿಗೆ ತೀರಾ ವಿಷಾದವಿದೆ. ಅಪರಾಧಿಗಳನ್ನು ಹಿಡಿಯಲು ಆರಂಭದಲ್ಲಿ ಆಗಿರುವ ಹಿನ್ನಡೆ ಹಾಗೂ ತನಿಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಾದರೆ ಆಗಬೇಕಾದ ಕೆಲಸ ಏನು ಎಂಬ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.
ಇಲ್ಲಿ ವ್ಯಕ್ತವಾಗಿರುವುದು ಸಂಗ್ರಾಮ್ ಸಿಂಗ್ ಅವರ ಅಭಿಪ್ರಾಯ. ಅಂತಿಮ ಷರಾ ಅಂತಲ್ಲ. ಅವರು ಏನು ಹೇಳಿದರು ಎಂದು ತಿಳಿಯಲು ಮುಂದೆ ಓದಿ.

ನಕ್ಸಲರೆಡೆಗೆ ಬೊಟ್ಟು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಯಿತು ಅಂದಾಕ್ಷಣ ಅದನ್ನು ನಕ್ಸಲರೇ ಮಾಡಿಸಿರಬೇಕು ಎಂಬುದು ತುಂಬ ಪ್ರಬಲವಾಗಿ ಅನ್ನಿಸಿತು. ಏಕೆಂದರೆ ಯಾವುದೇ ನಕ್ಸಲರು ತಮ್ಮ ಜತೆಗಾರರು, ಜತೆಗಾರ್ತಿಯರನ್ನು ಯಾವುದೇ ಸಂಸ್ಥೆಗೆ ಶರಣಾಗತಿ ಮಾಡಿಸುವುದು ಇಷ್ಟಪಡುವುದಿಲ್ಲ. ಇದರಿಂದ ಚಳವಳಿಯೇ ದುರ್ಬಲವಾಗುತ್ತದೆ. ಕೆಲ ಬಾರಿ ಉಳಿದವರ ಜೀವಕ್ಕೂ ಕುತ್ತಾಗುತ್ತದೆ.
ಆದ್ದರಿಂದ ನಕ್ಸಲರನ್ನು ಮುಖ್ಯ ವಾಹಿನಿಯೊಳಗೆ ಕರೆತರುವ ಪ್ರಯತ್ನವನ್ನು ಗೌರಿ ಮಾಡುತ್ತಿದ್ದರು. ಆ ಸಿಟ್ಟಿನಲ್ಲೇ ಕೊಂದಿರುವ ಸಾಧ್ಯತೆಗಳು ಹೆಚ್ಚಿವೆ.

ಮೂರ್ನಾಲ್ಕು ಮಂದಿ, ತಿಂಗಳು ಕಾಲ ಯೋಜನೆ
ಇಂಥ ಕೊಲೆಗಳು ರಾತ್ರೋ ರಾತ್ರಿ ನಡೆಯುವುದಿಲ್ಲ. ಅವರು ಮೂರ್ನಾಲ್ಕು ಮಂದಿ ಇರಬೇಕು. ತಿಂಗಳ ಕಾಲ ಬೆಂಗಳೂರಿನಲ್ಲೇ ಉಳಿದು ಹತ್ಯೆಗೆ ಸಂಚು ರೂಪಿಸಿದ್ದಾರೆ. ಆ ನಂತರ ಒಂದು ದಿನ ನಿಗದಿ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ.

ಗುಪ್ತದಳ ವಿಭಾಗದ ವೈಫಲ್ಯ
ನಮ್ಮ ಇಂಟೆಲಿಜೆನ್ಸಿ ತಂಡ ಎಷ್ಟು ದುರ್ಬಲವಾಗಿದೆ ಅಂದರೆ, ಅನುಮಾನ ಇರುವ ವ್ಯಕ್ತಿಗಳ ಮೇಲೆ ಒಬ್ಬ ಕಾನ್ ಸ್ಟೇಬಲ್ ನ ಕಣ್ಣಿಡು ಅಂತ ಬಿಟ್ಟಿರುತ್ತಾರೆ. ಆತ ಏನು ಮಾಡ್ತಿದ್ದಾನೆ ಎಂದು ಕೇಳಿದರೆ, ಬೆಳಗ್ಗೆ ಎಂಟು-ಒಂಬತ್ತು-ಹತ್ತು ಗಂಟೆ ಯಾವಾಗಲಾದರೂ, ಪೇಪರ್ ಓದ್ತಿದ್ದಾನೆ ಎಂಬ ಉತ್ತರವೇ ಬರುತ್ತದೆ. ತಮ್ಮ ಕೆಲಸವನ್ನು ಇವರು ಗಂಭೀರವಾಗಿ ಮಾಡಿರಲ್ಲ.

ನಲವತ್ತೆಂಟು ಗಂಟೆಯಲ್ಲಿ ಸುಳಿವು ಸಿಗಬೇಕು
ಇನ್ನು ಯಾವುದೇ ಕೊಲೆಯಾಗಲಿ ನಲವತ್ತೆಂಟು ಗಂಟೆಗಳಲ್ಲಿ ಹತ್ಯೆ ಮಾಡಿದವರ ಸುಳಿವು ಸಿಕ್ಕಿದರೆ ನೀವು ಪ್ರಕರಣದಲ್ಲಿ ಯಶಸ್ಸು ಪಡೆದ ಹಾಗೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೊಲೆಗಾರ ಸಿಗುವುದು ಅನುಮಾನ ಅಂತ ನನಗೆ ಅನಿಸುತ್ತಿದೆ. ಏಕೆಂದರೆ ಕೊಲೆಯಾಗಿ ನಲವತ್ತೆಂಟು ಗಂಟೆ ಕಳೆದುಹೋಯಿತು. ಇನ್ನು ತುಂಬ ಕಷ್ಟ.

ಕುಟುಂಬದವರು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು
ಗೌರಿ ಲಂಕೇಶ್ ಕುಟುಂಬದವರು ತುಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೊದಲಿಗೆ ಅದು ನಿಲ್ಲಿಸಬೇಕು. ಹಾಗೆ ಮಾಡುವುದರಿಂದ ಈ ಕೊಲೆ ಮಾಡಿದ ವ್ಯಕ್ತಿ, ಅಂಥ ವ್ಯಕ್ತಿ ಹಿಂದೆ ಇದ್ದಿರಬಹುದಾದ ಸಂಘಟನೆಗೆ ಹೆಚ್ಚು ಅನುಕೂಲ ಆಗುವುದರಿಂದ ಹೇಳಿಕೆಗಳನ್ನು ನೀಡುವುದು ನಿಲ್ಲಿಸಬೇಕು.

ರಾಜ್ಯ ಸರಕಾರದ ಸರಿಯಾದ ನಡೆ
ರಾಜ್ಯ ಸರಕಾರ ಉನ್ನತ ಅಧಿಕಾರಿಗಳನ್ನು ಒಳಗೊಂಡ ಅತ್ಯುತ್ತಮ ತಂಡವನ್ನೇ ರಚಿಸಿದೆ. ಇದನ್ನು ಮೆಚ್ಚಲೇಬೇಕು. ಆದರೆ, ಸರಗಳ್ಳರನ್ನು ಹಿಡಿದ, ಕೊಲೆಗಾರರನ್ನು ಜೈಲಿಗೆ ಕಳುಹಿಸಿದ ಅಧಿಕಾರಿಗಳ ಜತೆಗೆ ನಕ್ಸಲ್ ಹೋರಾಟದ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳೂ ಇರಬೇಕು. ಈ ತಂಡದಲ್ಲಿ ಅಂಥ ಎಷ್ಟು ಮಂದಿ ಇದ್ದಾರೆ?

ಸಿಸಿಟಿವಿ ಫೂಟೇಜು ವಿದೇಶಕ್ಕೆ ಕಳಿಸಿ
ಸಿಸಿಟಿವಿ ಫೂಟೇಜು ಇಟ್ಟುಕೊಂಡು ಯಾರೋ ಚಿತ್ರಕಾರರನ್ನು ಕರೆಸಿದೆ. ಶಂಕಿತ ಕೊಲೆಗಾರನ ಚಿತ್ರ ಬರೆಸಿದೆ ಎಂಬುದೆಲ್ಲ ಈ ಪ್ರಕರಣದಲ್ಲಿ ಕೆಲಸಕ್ಕೆ ಬರಲ್ಲ. ಅದರ ಬದಲು ಈ ಫೂಟೇಜುಗಳನ್ನು ವಿದೇಶಕ್ಕೆ ಕಳಿಸಿ, ಅಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯ ಪಡೆಯಬೇಕು.

ನಕ್ಸಲರ ಮಾಹಿತಿಗಳು ಹೊರಬರಲಾರಂಭಿಸಿದ್ದವು
ಗೌರಿ ಲಂಕೇಶ್ ಅವರು ಕೆಲವು ನಕ್ಸಲರನ್ನು ಅಲ್ಲಿಂದ ಹೊರಬರುವಂತೆ ಮಾಡಿದ್ದರು. ದಕ್ಷಿಣ ಕನ್ನಡ ಕಾಡುಗಳಲ್ಲಿ ಅಡಗಿಕೊಂಡಿರುವ ನಕ್ಸಲರ ಮಾಹಿತಿಗಳು ಹೊರಬರಲಾರಂಭಿಸಿದ್ದವು. ನೆಲ್ಯಾಡಿ ಅಲ್ಲಿ ಇಲ್ಲಿ ಇರೋದೆಲ್ಲ ಗೊತ್ತಾಗಿದೆ. ಮಾಹಿತಿ ಬಯಲಾಗುತ್ತಲ್ಲಾ ಎಂಬ ಭಯ ಇರುತ್ತದೆ. ಅಲ್ಲಿ ಎರಡು ಗುಂಪುಗಳಿವೆ, ನಕ್ಸಲರು ಹಾಗೂ ಮಾವೋವಾದಿಗಳು. ನಿಮಗೆ ಗೊತ್ತಿರಲಿ, ನಕ್ಸಲರಿಗಿಂತ ಮಾವೋವಾದಿಗಳು ಅಪಾಯಕಾರಿ.

ಶಾರ್ಪ್ ಶೂಟರ್ ಕೃತ್ಯ, ಅನುಭವಸ್ಥ ಇದ್ದಂತಿಲ್ಲ
ಗೌರಿ ಲಂಕೇಶ್ ರ ಹತ್ಯೆ ರೀತಿಯನ್ನು ಗಮನಿಸಿದರೆ ಇದು ಶಾರ್ಪ್ ಶೂಟರ್ ನ ಕೃತ್ಯ ಇದ್ದ ಹಾಗಿದೆ. ಆದರೆ ಆತ ಅನುಭವಸ್ಥ ಇದ್ದಂತಿಲ್ಲ. ನನ್ನ ಅನುಭವದಿಂದ ಹೇಳಬೇಕು ಅಂದರೆ ಕೊಲೆಗಾರರನ್ನು ಹಿಡಿಯುವುದು ಸುಲಭವಿಲ್ಲ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ












Click it and Unblock the Notifications