ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಕೆರೆಯಲ್ಲಿ ತ್ಯಾಜ್ಯ ಸುರಿದ ಬಿಬಿಎಂಪಿ: ಸ್ಥಳೀಯರ ಆಕ್ರೋಶ

|
Google Oneindia Kannada News

ಬೆಂಗಳೂರು, ಫೆಬ್ರವರಿ23: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ವರ್ತೂರು ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಬಿಎಂಪಿಯೇ ತ್ಯಾಜ್ಯವನ್ನು ತಂದು ಸುರಿಯುತ್ತಿದೆ.

ಅಲ್ಲಿನ ಸ್ಥಳೀಯರು ಅಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವ ಕುರಿತು ಹಲವು ಬಾರಿ ಬಿಬಿಎಂಪಿಗೆ ದೂರು ನೀಡದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸ್ವಲ್ಪ ದಿನಗಳ ನಂತರ ಅಲ್ಲಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಬಿಬಿಎಂಪಿ ಪೌರಕಾರ್ಮಿಕರು ಎಂದು ತಿಳಿದು ಬಂದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ವಾಯು ಮಾಲಿನ್ಯ ಏರು ಮುಖ: ವರದಿ ಎಚ್ಚರಿಕೆಬೆಂಗಳೂರು ವಾಯು ಮಾಲಿನ್ಯ ಏರು ಮುಖ: ವರದಿ ಎಚ್ಚರಿಕೆ

ಸಣ್ಣ ಟಿಪ್ಪರ್ ಗಳು, ಬಿಬಿಎಂಪಿ ಚಿಹ್ನೆ ಅಳವಡಿಸಿರುವ ವಾಹನಗಳಲ್ಲಿಯೇ ಬಂದು ಕಸವನ್ನು ಸುರಿಯಲಾಗುತ್ತಿದೆ. ವರ್ತೂರಿನಲ್ಲಿ ಎರಡು ಪ್ರದೇಶಗಳಿವೆ ಒಂದು ವರ್ತೂರು ಕೋಡಿ ಮತ್ತೊಂದು ವರ್ತೂರು ಹಳ್ಳಿ ಪ್ರದೇಶ ಇವೆರಡೂ ಜಾಗವೂ ಪ್ಲಾಸ್ಟಿಕ್ ವಸ್ತುಗಳು ಹಾಗೂ ತ್ಯಾಜ್ಯದಿಂದ ತುಂಬಿಕೊಂಡಿದೆ. ಕರಗದ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

Residents claims threat to city lakes by civic contractors

ಬೆಳ್ಳಂದೂರು: ಬೆಂಕಿಯ ಸಮಸ್ಯೆಯಾಯ್ತು ಇದೀಗ ತ್ಯಾಜ್ಯದ ಸರದಿಬೆಳ್ಳಂದೂರು: ಬೆಂಕಿಯ ಸಮಸ್ಯೆಯಾಯ್ತು ಇದೀಗ ತ್ಯಾಜ್ಯದ ಸರದಿ

ಈಗಾಗಲೇ ಬೆಳ್ಳಂದೂರು ಕೆರೆಯನ್ನು ಅತ್ಯಂತ ಮಲಿನವಾದ ಕೆರೆ ಎಂದು ಘೋಷಿಸಲಾಗಿದೆ. ಇದೇ ಮೊದಲ ಬಾರಿಯಲ್ಲಿ ಸಾಕಷ್ಟು ಬಾರಿ ಕೆರೆ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ಹಾಕಲಾಗುತ್ತಿದೆ. ಆದರೆ ಆಶ್ಚರ್ಯವೆಂದರೆ ತ್ಯಾಜ್ಯವನ್ನು ಇಂತಹ ಪ್ರದೇಶಗಳಿಂದ ಸಾಗಿಸುವ ಹೊಣೆ ಹೊತ್ತಿರುವ ಬಿಬಿಎಂಪಿಯೇ ತ್ಯಾಜ್ಯವನ್ನು ಸುರಿದಾಗ ಯಾರ ಬಳಿ ದೂರು ನೀಡಬೇಕು ಎನ್ನುವುದು ಪ್ರಸ್ನೆಯಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

English summary
Residents around Varthur lake who have been fighting the rampant dumping of garbage claim that the most recent offender is none other than the BBMP itself. Earlier this week, several people noticed garbage trucks dumping mixed waste near a weir of the lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X