ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

24*7 ಹೋಟೆಲ್ ಓಪನ್; ಬೆಂಗಳೂರು ಪೊಲೀಸರಿಗೆ ಮಾಲೀಕರ ಮನವಿ

|
Google Oneindia Kannada News

ಬೆಂಗಳೂರು ಜೂ. 24: ಕರ್ನಾಟಕ ಸರ್ಕಾರದ ಆದೇಶದನ್ವಯ ಬೆಂಗಳೂರಿನಲ್ಲಿ ಹೋಟೆಲ್‌, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲರ್ ಮತ್ತಿತರ ಅಂಗಡಿಗಳನ್ನು 24ಗಂಟೆಯೂ ತೆರೆದಿಡಲು ಅನುಮತಿ ನೀಡಿದೆ. ಆದರೆ ಈ ಪ್ರಸ್ತಾವನೆಗೆ ಇನ್ನೂ ಪೊಲೀಸರ ಒಪ್ಪಿಗೆ ಸಿಕ್ಕಿಲ್ಲ.

ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು ಗುರುವಾರ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣರೆಡ್ಡಿಗೆ ಈ ಕುರಿತು ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಪಿ. ಸಿ. ರಾವ್ ಮಾತನಾಡಿ, "ಕೊರೊನಾ ಸಂದರ್ಭದಲ್ಲಿ ಸಂಷಕ್ಟಕ್ಕೀಡಾದ ವ್ಯಾಪಾರಿಗಳು, ಹೋಟಲ್ ಮಾಲೀಕರಿಗೆ ಇನ್ನಿತರ ವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2021ರ ಜನವರಿಯಲ್ಲಿ ಆದೇಶ ಹೊರಡಿಸಿತ್ತು" ಎಂದರು.

"ಹತ್ತು ಮಂದಿಗಿಂತ ಅಧಿಕ ಸಿಬ್ಬಂದಿ ಹೊಂದಿದ ಬೇಕರಿ, ಹೋಟಲ್ ಸೇರಿದಂತೆ ಆಹಾರೋತ್ಪನ್ನ ಅಂಗಡಿ ಮುಂಗಟ್ಟುಗಳು ದಿನ 24 ಗಂಟೆ ತೆರೆದು ವ್ಯಾಪಾರ ಮಾಡಬಹುದು ಎಂದು ಸೂಚಿಸಿ ಆದೇಶಿಸಿತ್ತು" ಎಂದು ಹೇಳಿದರು.

ಆದರೆ ಪೊಲೀಸ್ ಇಲಾಖೆ ಈ ಆದೇಶ ಪಾಲಿಸಲು ಇನ್ನೂ ಅನುಮತಿ ನೀಡಲ್ಲ. ಈ ಕುರಿತು ಹೋಟಲ್ ಮಾಲೀಕರಿಗೆ ರಮಣರೆಡ್ಡಿ ಸಹಾಯ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿ

ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿ

ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದವರ ಪರ ಸರ್ಕಾರ ಅಗತ್ಯವಿರುವ ಕಡೆ ರಾತ್ರಿಪೂರ್ತಿ ಹೋಟಲ್ ತೆರೆದು ವ್ಯಾಪಾರ ಮಾಡಬಹುದು ಎಂದು ಹೇಳಿತ್ತು. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಈವರೆಗೂ ದೊರೆತಿಲ್ಲ. ಬದಲಾಗಿ ಭದ್ರತೆ ವಿಚಾರ, ಸಿಬ್ಬಂದಿ ಕೊರತೆ ಇನ್ನಿತರ ಕಾರಣಗಳಿಗೆ ಅನುಮತಿ ನೀಡಲ್ಲ ಎಂದು ತಿಳಿದು ಬಂದಿದೆ.

ಕೊರೋನಾ ಭೀತಿ ಕಡಿಮೆ ಆದ ನಂತರ ಸರ್ಕಾರ ವ್ಯಾಪಾರದ ಅವಧಿಯನ್ನು ರಾತ್ರಿ 10ರಿಂದ ತಡರಾತ್ರಿ 1ಗಂಟೆವರೆಗೆ ವಿಸ್ತರಿಸಿತು. ಇದಕ್ಕೂ ಅನುಮತಿ ನೀಡದ ಪೊಲೀಸರು ರಾತ್ರಿ 10 ಗಂಟೆಯಾಗುತ್ತಿದ್ದಂತೆ ಅಂಗಡಿ ಮುಂಗಟ್ಟು, ಹೋಟಲ್‌ಗಳ ಬಾಗಿಲು ಮುಚ್ಚಿಸುತ್ತಾರೆ. ಇದರಿಂದ ವ್ಯಾಪಾರಕ್ಕೆ ಅಡಚರಣೆ ಆಗುತ್ತಿದೆ ಎಂದು ರಾವ್ ವಿವರಿಸಿದರು.

ಮನವಿಯಲ್ಲಿ ಏನಿದೆ?

ಮನವಿಯಲ್ಲಿ ಏನಿದೆ?

ನಗರದ ಹೋಟಲ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ತೆರೆದಿಡಲು ಅನುಮತಿ ನೀಡಿ ಹೊಸ ಅಧಿಸೂಚನೆ ಹೊರಡಿಸುವುಂತೆ ಪೊಲೀಸ್ ಇಲಾಖೆ ಸೂಚಿಸಬೇಕು. ಸರ್ಕಾರದ ಆದೇಶದಂತೆ ಆಹಾರೋತ್ಪನ್ನ ಮಳಿಗೆಗಳು 24x7 ತೆರೆದಿಡಲು ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಹೋಟಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವುದು ಹಾಗೂ ಶಾಶ್ವತ ಪರವಾನಿಗೆ ನೀಡಬೇಕೆಂದು ರಮಣರೆಡ್ಡಿ ಅವರಲ್ಲಿ ಕೋರಿದ್ದಾರೆ.

24x7ನಿಂದ ಯಾರಿಗಿದೆ ಲಾಭ?

24x7ನಿಂದ ಯಾರಿಗಿದೆ ಲಾಭ?

ಮಧ್ಯಾರಾತ್ರಿ 1 ಗಂಟೆವರೆಗೆ ಇಲ್ಲವೇ ಬೆಳಗ್ಗೆವರೆಗೆ ಹೋಟಲ್, ಬೇಕರಿ ಸೇರಿದಂತೆ ಆಹಾರೋತ್ಪನ್ನಗಳ ಮಳಿಗೆ ತೆರೆಯಲು ಅನುಮತಿ ನೀಡಿದರೆ ಕೋವಿಡ್‌ನಿಂದಾಗಿ ಆಥಿರ್ಕ ಸಂಕಷ್ಟಕ್ಕೆ ಈಡಾದ ವ್ಯಾಪಾರಿಗಳಿಗೆ ಸಹಾಯವಾಗುತ್ತದೆ. ಜತೆಗೆ ಇನ್ನಿತರ ವರ್ಗದ ಮಾರಾಟಗಾರರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು, ನೌಕರರು, ವಾಹನ ಚಾಲಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದನ್ನು ಮನಗಂಡು ಪೊಲೀಸ್ ಇಲಾಖೆಗೆ 24x7 ತೆರೆಯಲು ಅನುಮತಿ ನಿಡುವಂತೆ ಸೂಚಿಸಿ ನಮಗೆ ಸಹಕರಿಸಬೇಕು ಎಂದರು.

15ದಿನದ ನಂತರ ಸಿಎಂ ಭೇಟಿ

15ದಿನದ ನಂತರ ಸಿಎಂ ಭೇಟಿ

"ಈ ಹಿಂದೆ ಸಮಸ್ಯೆ ಪರಿಹರಿಸುವಂತೆ ಹೋಟೆಲ್ ಮಾಲೀಕರ ಸಂಘದ ನಿಯೋಗದಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಮುಂದಿನ 15 ದಿನದಲ್ಲಿ ಈಡೇರಿದದ್ದರೆ ಹೋಟಲ್ ಮಾಲೀಕರ ಸಭೆ ಸೇರುತ್ತೇವೆ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಪರಿಸ್ಥಿತಿ ಕುರಿತು ತಿಳಿಸುತ್ತೇವೆ" ಎಂದು ಪಿ. ಸಿ. ರಾವ್ ಹೇಳಿದ್ದಾರೆ.

English summary
Karnataka government allowed hotels to be open 24x7 hours in Bengaluru city. But city police yet to give green signal to hotel on the issue. Bruhat Bangalore Hotels Association request the police to take decision on this soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X