Get Updates
Get notified of breaking news, exclusive insights, and must-see stories!

Republic Day 2024: ಬೆಂಗಳೂರಲ್ಲಿ ಅತೀ ಎತ್ತರದ ಧ್ವಜಸ್ತಂಭ, ಎಲ್ಲಿ?, ಎಷ್ಟು ಅಡಿ, ಸ್ಟಾರ್ ಆಕರ್ಷಣೆ ಹೇಗೆ? ಮಾಹಿತಿ

ಬೆಂಗಳೂರು, ಜನವರಿ 16: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ಆರಂಭವಾಗಿದೆ. ಲಾಲ್‌ಬಾಗ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಇದೀಗ ವಿಜಯನಗರದಲ್ಲಿ ಅತೀ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿದೆ. ಇದು ಈ ಬಾರಿ ಸ್ಟಾರ್ ಆಕರ್ಷಣೆಯಾಗಲಿದೆ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಅತೀ ಎತ್ತಿರದ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ವಿಜಯನಗರದಲ್ಲಿ 215 ಅಡಿ ಎತ್ತರದ ಧ್ವಜಸ್ತಂಭ ತಲೆ ಎತ್ತಲಿದೆ. ಇದು ಸ್ಟಾರ್‌ ಆಕರ್ಷಣೆ ಆಗುವ ಸಾಧ್ಯತೆ ಇದೆ ಎಂದು TNIE ವರದಿ ಮಾಡಿದೆ.

 Republic Day 2024: Where is 215 Feet Tallest Flagpole in Bengaluru, Check Place, Height details

ಧ್ವಜಸ್ತಂಭದ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಹೇಮಂತ್ ಎಚ್.ಜಿ ಮಾತನಾಡಿ, ಮಾಜಿ ಸಚಿವ ಹಾಗೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಶಾಸಕರ ಅನುದಾನದಲ್ಲಿ ಯೋಜನೆಗೆ ಹಣ ಬಿಡುಗಡೆ ಆಗಿದೆ. ಚಂದ್ರಾ ಲೇಔಟ್‌ನಲ್ಲಿ ಸ್ಥಾಪಿಸಲಾಗಿರುವ ಧ್ವಜ ಸ್ತಂಭವು 210 ಅಡಿ ಎತ್ತರ ಇದೆ. ಮೇಲ್ಭಾಗದಲ್ಲಿ 5 ಅಡಿ ಅಶೋಕ ಲಾಂಛನ ಇದೆ ಎಂದು ತಿಳಿಸಿದರು.

2 ತಿಂಗಳಿಗೊಮ್ಮೆ ಧ್ವಜ ಬದಲಾವಣೆ

ರಾಷ್ಟ್ರೀಯ ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜವನ್ನು ಹಾರಿಸುವುದು ಜೊತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಧ್ವಜವನ್ನು ಬದಲಾಯಿಸಲಾಗುತ್ತದೆ. ನಿರಂತರ ಗಾಳಿ ಬೀಸುವ ಹಿನ್ನೆಲೆಯಲ್ಲಿ ಇಷ್ಟು ಎತ್ತರದಲ್ಲಿರುವ ಧ್ವಜಕ್ಕೆ ಗಾಳಿಯಿಂದ ಹಾನಿಯಾಗಬಹದು. ಹೀಗಾಗದಂತೆ ನೋಡಿಕೊಳ್ಳಲು ಕಾಲಕಾಲಕ್ಕೆ ಬದಲಾಯಿಸಲಾಗುವುದು.

ಧ್ವಜಸ್ತಂಭದಲ್ಲಿ ಧ್ವಜ ಏರಿಸಲು ಮತ್ತು ಇಳಿಸಲು, ಕೈಪಿಡಿ ಮತ್ತು ಮೋಟಾರು ಕಾರ್ಯಾಚರಣೆಗೆ ಅವಕಾಶ ಇದೆ. ಸುಗಮ ಕಾರ್ಯಾಚರಣೆಗಾಗಿ 8-ಎಂಎಂ ಸ್ಟೀಲ್ ತಂತಿ 3ಎಚ್‌ಪಿ ಮೋಟಾರ್‌ಗೆ ಸಂಪರ್ಕಿಸಲಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ವಾರ್ಷಿಕ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು ಎಂದು ಗುತ್ತಿಗೆದಾರರು ಮಾಹಿತಿ ನೀಡಿದರು.

ಧ್ವಜಸ್ತಂಭ ತೂಕ, ಕಾಮಗಾರಿ ಮಾಹಿತಿ

ಧ್ವಜಸ್ತಂಭವು ಒಟ್ಟು 19 ಟನ್ ತೂಕ ಇದೆ. ಡಿಸೆಂಬರ್‌ನಲ್ಲಿ ಪೈಲ್ ಫೌಂಡೇಶನ್ ಮಾಡಲಾಗಿದ್ದು, ಕ್ರೇನ್ ಬಳಸಿ ಬೃಹತ್ ಕಂಬವನ್ನು ನಿರ್ಮಿಸಲಾಗಿದೆ. ಧ್ವಜಸ್ತಂಭದ ಸುತ್ತ ಮತ್ತು ಕಾಂಕ್ರೀಟ್ ಮೆಟ್ಟಿಲುಗಳನ್ನು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಗಣರಾಜ್ಯೋತ್ಸವ ಮುನ್ನಾದಿನ ದಿನ ಇದನ್ನ ಪೂರ್ಣಗೊಳಿಸಲಾಗುವುದು.

ವಿಜಯನಗರ ವ್ಯಾಪ್ತಿಯಲ್ಲಿ ಈಧ್ವಜಸ್ತಂಭಕ್ಕೂ ಮೊದಲು ರಾಜಭವನದ ಬಳಿಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯದಲ್ಲಿ 213 ಅಡಿ ಎತ್ತರದ ಧ್ವಜಸ್ತಂಭ ಸ್ಥಾಪಿಸಲಾಗಿತ್ತು. ಅದಲ್ಲದೇ ಧ್ವಜದ ನಿರ್ವಹಣೆ ಮತ್ತು ಹೈಡ್ರಾಲಿಕ್ ಯಂತ್ರವನ್ನು ನಿರ್ವಹಿಸುವ ತಂಡದ ಕೊರತೆಯ ಸಂಬಂಧ ರಾಜ್ಯ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು.

ಶಾಸಕ ಕೃಷ್ಣಪ್ಪ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೃಷ್ಣಪ್ಪ ಅವರು, ಒಟ್ಟು 1 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಧ್ವಜಸ್ತಂಭದ ಮೇಲಿರುವ ನಾಲ್ಕು ತಲೆಯ ಸಿಂಹವು ವಿಜಯನಗರದ ನಿವಾಸಿಗಳಿಗೆ ಮಾತ್ರವಲ್ಲದೇ, ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣಸಿಕೊಳ್ಳುತ್ತದೆ. ನವೆಂಬರ್ ಅಂತ್ಯದಲ್ಲಿ ಈ ಕಾಮಗಾರಿ ಆರಂಭವಾಗಿತ್ತು ಎಂದು ಅವರು ಮಾಹಿತಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+