Get Updates
Get notified of breaking news, exclusive insights, and must-see stories!

ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ಜನಾರ್ದನ ರೆಡ್ಡಿ

ಬೆಂಗಳೂರು, ನವೆಂಬರ್ 7: ಈಗಾಗಲೇ ಬ್ಯಾಂಕ್ ಗಿಂತಲೂ ಹೆಚ್ಚು ಬಡ್ಡಿಯನ್ನು ನೀಡುವುದಾಗಿ ಹೇಳಿ ನೂರಾರು ಮಂದಿಯನ್ನು ವಂಚಿಸಿ ಜೈಲು ಪಾಲಾಗಿರುವ ಎಂಇಪಿ ಮುಖ್ಯಸ್ಥೆ ನೌಹೀರಾ ಶೇಖ್ ಅವರನ್ನು ಪಾರು ಮಾಡಲು ಜನಾರ್ದನ ರೆಡ್ಡಿ ಪ್ರಯತ್ನಿಸಿದ್ದರು ಎನ್ನುವ ಮತ್ತೊಂದು ಆರೋಪ ಕೇಳಿಬಂದಿದೆ.

ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಹೆಸರಿನಲ್ಲಿ ಗುರುತಿಸಿಕೊಂಡ ನೌಹೀರಾ ಶೇಖ್ ಸಾವಿರಾರು ಜನರಿಗೆ ಬೇರೆ ಬೇರೆ ಚಿಟ್ ಫಂಡ್ ಗಳ ಹೆಸರಿನಲ್ಲಿ ಮೋಸ ಮಾಡಿದ್ದು ಬಯಲಾಗಿ ಅವರನ್ನು ಬಂಧಿಸಲಾಗಿತ್ತು ಆದರೆ ಜೈಲಿನಲ್ಲಿದ್ದುಕೊಂಡೇ ಆಕೆಯನ್ನು ಬಿಡಿಸಲು ರೆಡ್ಡಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ನೌಹೀರಾ ಶೇಖ್ ದೇಶದ ಪ್ರಮುಖ ನಗರಗಳಲ್ಲಿ ಬಂಡಾವಾಳ ಹೂಡಿಕೆ ಮಾಡುವ ಹೆಸರಿನಲ್ಲಿ ಜನರಿಂದ ಕೋಟಿ ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಾರೆ. ಈಗಾಗಲೇ ಮುಂಬೈ ಪೊಲೀಸರು ವಾರೆಂಟ್ ಪಡೆದು ನೌಹಿರಾ ಶೇಖ್ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನನ್ನು ಪಾರು ಮಾಡುವಂತೆ ನೌಹಿರಾ ಶೇಖ್ ಗಾಲಿ ಜನಾರ್ದನ ರೆಡ್ಡಿ ಅವರ ಸಹಾಯವನ್ನು ಅಪೇಕ್ಷಿಸಿದ್ದರು.. ನೌಹೀರಾ ಶೇಖ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದ ರೆಡ್ಡಿ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ.

ದೀಪಾವಳಿ ವಿಶೇಷ ಪುರವಣಿ

ರೆಡ್ಡಿ ಅವರ ಆಪ್ತರ ಬ್ಯಾಂಕ್ ಖಾತೆಗೆ ಈ ಹಣ ಸಂದಾಯವಾಗಿದೆ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಸದ್ಯ ರೆಡ್ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮೂಲಕ ಸಹಾಯ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು ಎನ್ನುವ ಮಹಿತಿ ಇದೀಗ ಲಭ್ಯವಾಗಿದೆ.

ನೌಹಿರಾ ಶೇಖ್ ಬೆಂಗಳೂರು, ಹೈದ್ರಾಬಾದ್, ಮುಂಬೈ, ಪುಣೆ, ದೆಹಲಿಯಲ್ಲಿ ಬಂಡವಾಳ ಹೂಡಿಕೆ ಮಾಡುವ ಹೆಸರಿನಲ್ಲಿ ಹಲವರಿಂದ ಹಣ ಪಡೆದು ಸಾವಿರ ಕೋಟಿಗೂ ಹೆಚ್ಚು ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಎಂಪವರ್ ಮೆಂಟ್ ಮಹಿಳಾ ಪರ್ಟಿ ಸಂಸ್ಥಾಪಕಿಯಾಗಿರುವ ನೌಹೀರಾ ವಿರುದ್ಧ 2018 ಮೇ ತಿಂಗಳ ಬಳಿಕ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಆಗಸ್ಟ್ 25ರಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು.

ಎಂಇಪಿ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲದೆ ಸೋಲು ಅನುಭವಿಸಿತ್ತು

ಎಂಇಪಿ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲದೆ ಸೋಲು ಅನುಭವಿಸಿತ್ತು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಗಳನ್ನು ನಿಲ್ಲಿಸಿದ್ದ ಎಂಇಪಿ ಮುಖ್ಯಸ್ಥೆ ನೌಹೀರಾ ಶೇಖ್ ಹರಸಾಹಸ ಪಟ್ಟರೂ ಒಂದೂ ಸೀಟನ್ನು ಗಳಿಸಲು ಸಾಧ್ಯವಾಗಿರಲಿಲ್ಲ.

ಹಲವು ಕಡೆ ವಂಚನೆ ಆರೋಪ ಎದುರಿಸುತ್ತಿರವ ನೌಹೀರಾ

ಹಲವು ಕಡೆ ವಂಚನೆ ಆರೋಪ ಎದುರಿಸುತ್ತಿರವ ನೌಹೀರಾ

ನೌಹಿರಾ ಶೇಖ್ ಬೆಂಗಳೂರು, ಹೈದ್ರಾಬಾದ್, ಮುಂಬೈ, ಪುಣೆ, ದೆಹಲಿಯಲ್ಲಿ ಬಂಡವಾಳ ಹೂಡಿಕೆ ಮಾಡುವ ಹೆಸರಿನಲ್ಲಿ ಹಲವರಿಂದ ಹಣ ಪಡೆದು ಸಾವಿರ ಕೋಟಿಗೂ ಹೆಚ್ಚು ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದಿದ್ದರು

ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದಿದ್ದರು

ಮಹಿಳಾ ಎಂಪವರ್‌ಮೆಂಟ್‌ ಪಕ್ಷದ ಅಧ್ಯಕ್ಷೆ ನೌಹೀರಾ ಶೇಖ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಪಕ್ಷದ ಅಭ್ಯರ್ಥಿಗಳಿಂದಲೇ ಹಣ ಪಡೆದಿದ್ದಲ್ಲದೆ, ಪಾರ್ಟಿ ಫಂಡ್ ನೆಪದಲ್ಲಿ ಅಭ್ಯರ್ಥಿಗಳಿಂದ ಖಾಲಿ ಚೆಕ್ ಪಡೆದು ವಂಚಿಸಿರುವ ಆರೋಪದ ಮೇಲೆ ಜೀವನ್‌ಭೀಮಾ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.ಸಾಗರ ಕ್ಷೇತ್ರದ ಅಭ್ಯರ್ಥಿ ಕಲಾವತಿ ಅವರು ನೌಹೀರಾ ಶೇಖ್‌ ಅವರು ಚುನಾವಣಾ ಖರ್ಚನ್ನು ಪಕ್ಷದಿಂದಲೇ ನಿರ್ವಹಿಸುವುದಾಗಿ ನನ್ನಿಂದ 5 ಲಕ್ಷ ಪಡೆದಿದ್ದರು. ಚುನಾವಣೆಯಲ್ಲಿ ನಾನು 23 ಲಕ್ಷ ಸಾಲ ಮಾಡಿಕೊಂಡು ಪ್ರಚಾರ ನಡೆಸಿದ್ದೇನೆ ಎಂದು ದೂರಿದ್ದರು.

ನೌಹೀರಾ ಶೇಖ್ ಬಂಧನ

ನೌಹೀರಾ ಶೇಖ್ ಬಂಧನ

ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎಂಇಪಿ ಪಕ್ಷದ ನೌಹೀರಾ ಶೇಖರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.ಹೂಡಿಕೆದಾರರಿಗೆ 300 ಕೋಟಿ ರೂ ವಂಚನೆ ಎಸಗಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ, ಹೀರಾ ಗ್ರೂಪ್ ನ ಕಂಪನಿಗಳು ನಾನಾ ಹೂಡಿಕೆ ಯೋಜನೆಗಳನ್ನು ಹೊಂದಿದ್ವು. ಹಣಕಾಸು ವ್ಯವಹಾರದಲ್ಲಿ ಇಸ್ಲಾಮಿಕ್ ತತ್ವಗಳನ್ನು ಅನುಸರಿಸುವುದಾಗಿ ಕಂಪನಿ ಹೇಳಿಕೊಂಡಿತ್ತು. ಅನೇಕ ಹೂಡಿಕೆದಾರರು ದೂರುಗಳನ್ನು ನೀಡಿದ ಬಳಿಕ ಮೊದಲ ಸಲ ಶೇಖ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+