ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking:ಬೆಂಗಳೂರಲ್ಲಿ ಬುಧವಾರ ಸಂಜೆ 25.5ಮಿ.ಮೀ.ಮಳೆ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಬುಧವಾರ ಸಹ ನಗರದ ಹಲವೆಡೆ ಜೋರು ಮಳೆ ದಾಖಲಾಗಿದೆ. ಈ ಪೈಕಿ ಕೋನೇನ ಅಗ್ರಹಾರದಲ್ಲಿ 25.5ಮಿ.ಮೀ. ಮಳೆ ದಾಖಲಾಗಿದೆ.

ನಗರದಲ್ಲಿ ಕಳೆದ ಶನಿವಾರದಿಂದ ವಾತಾವರಣದಲ್ಲಿ ತಾಪಮಾನ ಪ್ರಮಾಣ ಕಡಿಮೆಯಾಗಿದ್ದು, ಚಳಿ ಹಾಗೂ ಮೋಡ ಕವಿದ ವಾತಾವರಣವೇ ಕಂಡು ಬರುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಯ ಪರಿಣಾಮ ಮಂಗಳವಾರದಿಂದ ನಗರದಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ನಗರದಲ್ಲಿ ಅಲ್ಲಲ್ಲಿ ಜೋರು ಮಳೆ ಕಂಡು ಬಂದಿದೆ. ಕೆಲವು ಪ್ರದೇಶಗಳಲ್ಲಿ ತಡರಾತ್ರಿವರೆಗೆ ತುಂತುರು ಮಳೆ ಮುಂದುವರಿಯಿತು.

ಅಧಿಕ ಮಳೆ ಮಾಹಿತಿ ಹೀಗಿದೆ

ಬುಧವಾರ ಬೆಳಗ್ಗೆಯಿಂದಲೂ ತಂಪು ಗಾಳಿ ಬೀಸುವಿಕೆಯೆ ಹೆಚ್ಚಿತ್ತು. ಸಂಜೆ 6 ಗಂಟೆ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಆಗಾಗ ಜಿಟಿ ಜಿಟಿ ಮಳೆ ಆಯಿತು. ಈ ಪೈಕಿ ಕೋನೇನ ಅಗ್ರಹಾರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆ ದಾಖಲಾಯಿತು. ದೊಡ್ಡನೆಕ್ಕುಂದಿಯಲ್ಲಿ 20.5ಮಿ.ಮೀ., ಗರುಡಾಚಾರಪಾಳ್ಯ 18ಮಿ.ಮೀ, ವಿಜ್ಞಾನ ನಗರ 17ಮಿ.ಮೀ, ಎಚ್‌ಎಎಲ್‌ ವಿಮಾನ ನಿಲ್ದಾಣ 14 ಮಿ.ಮೀ, ಬೊಮ್ಮನಹಳ್ಳಿ 12ಮಿ.ಮೀ, ಬಿಳೇಕಳ್ಳಿ 10.5ಮಿ.ಮೀ, ದೊರೆಸಾನಿ ಪಾಳ್ಯ ಮತ್ತು ಕೋಣನಕುಂಟೆಯಲ್ಲಿ ತಲಾ 10ಮಿ.ಮೀ ಮಳೆ ದಾಖಲಾಗಿದೆ.

Bengaluru record more 25.5mm rain on Wednesday

ಅದೇ ರೀತಿ ನಗರದ ಜಯನಗರ, ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವರ್ತೂರು, ಹುಳಿಮಾವು, ಅಗ್ರಹಾರ ದಾಸರಹಳ್ಳಿ, ಯಶವಂತಪುರ, ರಾಜಾಜಿನಗರ, ವಿಜಯನಗರ, ಹಂಪಿನಗರ, ಚನ್ನಸಂದ್ರ, ಚಾಮರಾಜಪೇಟೆ, ನಾಯಂಡಹಳ್ಳಿ, ಆರ್‌ಆರ್‌ ನಗರ ಸೇರದಂತೆ ಅನೇಕ ಕಡೆಗಳಲ್ಲಿ ತುಂತುರು ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರದಿ ತಿಳಿಸಿದೆ.

Bengaluru record more 25.5mm rain on Wednesday

ಎರಡು ದಿನ ಮಳೆ ಮುಂದುವರಿಯಲಿದೆ

ಬೆಂಗಳೂರಿನಲ್ಲಿ ಮುಂದಿನ 48ಗಂಟೆ ಮಳೆ ಪ್ರಮಾಣ ಸೇರಿದಂತೆ ವಾತಾವರಣ ಹೀಗೆ ಮುಂದುವರಿಯಲಿದೆ. ಸೆ.16ರವರೆಗೆ ಹಗುರದಿಂದ ಸಾಧಾರಣ, ಕೆಲವೊಮ್ಮೆ ಇದಕ್ಕಿಂತ ಹೆಚ್ಚು ಮಳೆಯಾಗಬಹದು ಎಂದ ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದ ನಂತರ ಮಳೆ ಶುರುವಾಗಲಿದೆ. ಈ ವೇಳೆ ಗರಿಷ್ಠ ತಾಪಮಾನ 28 ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶುಕ್ರವಾರದ ನಂತರ ಮಳೆಯಲ್ಲಿ ಮತ್ತಷ್ಟು ಇಳಿಕೆ ಆಗುವ ಸಂಭವವಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

English summary
Bengaluru record more 25.5mm rain on Wednesday. Thunderstorm rain will continue to next two days in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X