• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಟ್ರೋಕ್ಕೆ ಶಂಕರಣ್ಣ ಹೆಸರು: ಇದು ಓದುಗರ ತೀರ್ಮಾನ

|

ಬೆಂಗಳೂರು, ನವೆಂಬರ್. 23: 'ಬೆಂಗಳೂರು ಮೆಟ್ರೋ ಇನ್ನು ಮುಂದೆ ಕರಾಟೆ ಕಿಂಗ್ ಶಂಕರ್ ನಾಗ್ ಮೆಟ್ರೊ',ಹೌದು ಇದು ಒನ್ಇಂಡಿಯಾ ಓದುಗರ ತೀರ್ಮಾನ. ನಮ್ಮ ಮೆಟ್ರೋ ಹೆಸರು ಬದಲಾವಣೆ ವಿಷಯ ಪ್ರಸ್ತಾಪವಾದ ನಂತರ ಒನ್ಇಂಡಿಯಾ ಜನರ ಮುಂದೆ ಆಯ್ಕೆಗಳನ್ನು ಇಟ್ಟಿತ್ತು. ಅದರಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರೇ ಅತಿ ಹೆಚ್ಚು ಮತ ಪಡೆದುಕೊಂಡಿದ್ದಾರೆ.

ಹೆಸರಿಡುವ ಬಗ್ಗೆ ಒಂದೇ ಸಾಲಿನ ಉತ್ತರ ತಿಳಿಸಿದವರು ಬಹಳ ಮಂದಿ. ಅದರ ಜತೆಗೆ ಡಾ. ರಾಜ್ ಕುಮಾರ್ ಹೆಸರು ಇಡಿ ಎಂದು ಸಲಹೆ ನೀಡಿದವರು ಇದ್ದಾರೆ. ಟಿಪ್ಪು ಹೆಸರು ಮಾತ್ರ ಬೇಡವೇ ಬೇಡ ಎಂದವರು ಇದ್ದಾರೆ.[ಮಾಗಡಿ ರಸ್ತೆ-ಮೈಸೂರು ರಸ್ತೆ ನಮ್ಮ ಮೆಟ್ರೋ ದರ ಪಟ್ಟಿ]

ಸಾಮಾಜಿಕ ತಾಣ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕವೂ ಜನ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಒಡೆಯರ್, ವಿಷ್ಣುವರ್ಧನ್ ಹೆಸರನ್ನು ಸಹ ಅಭಿಮಾನಿಗಳು ಸೂಚನೆ ಮಾಡಿದ್ದಾರೆ. ಒನ್ ಇಂಡಿಯಾ ಪೋಲ್ ಗೆ ಸ್ಪಂದಿಸಿರುವ ನಾಗರಿಕರು ಶಂಕರ್ ನಾಗ್ ಅವರಿಗೆ ಶೇ. 37 ಮತಗಳನ್ನು ನೀಡಿದ್ದಾರೆ. ನಮ್ಮ ಮೆಟ್ರೋನೆ ಇರಲಿ ಎಂದು ಶೇ.31 ಜನ ಅಭಿಪ್ರಾಯ ಪಟ್ಟಿದ್ದಾರೆ.

ನೀವು ಸಹ ಓಟ್ ಮಾಡಬಹುದು

ಒನ್ ಇಂಡಿಯಾ ಪೋಲ್ ಫಲಿತಾಂಶ

ಒನ್ ಇಂಡಿಯಾ ಪೋಲ್ ಫಲಿತಾಂಶ

ನಮ್ಮ ಮೆಟ್ರೋನೇ ಇರಲಿ, ಶೇ. 31

ನಾಡಪ್ರಭು ಕೆಂಪೇಗೌಡ ಶೇ. 11

ಸರ್ ಎಂ ವಿಶ್ವೇಶ್ವರಯ್ಯಶೇ. 21

ಶಂಕರ್ ನಾಗ್ ಶೇ. 37

ವ್ಯಕ್ತಿಗಳ ಹೆಸರು ಯಾಕೆ ಬೇಕು ಹೇಳಿ?

ವ್ಯಕ್ತಿಗಳ ಹೆಸರು ಯಾಕೆ ಬೇಕು ಹೇಳಿ?

ವ್ಯಕ್ತಿಗಳ ಹೆಸರು ಯಾಕೆ ಬೇಕು ಹೇಳಿ? ಒಂದು ವಿಶ್ವವಿದ್ಯಾಲಯಕ್ಕೆ ಹೆಸರಿಡಬೇಕೆಂದು ದಶಕಗಳ ಕಾಲ ಹೋರಾಟ ನಡೆಯಿತು.. ಜಾತಿ ಪ್ರಾತಿನಿಧ್ಯವಾಗಿ.. ಅಲ್ಪಸಂಖ್ಯಾತ .. ಹಿಂದುಳಿದ... ಬಹು ಸಂಖ್ಯಾತ ಹೀಗೆ ತಲೆ ಒಂದರಂತೆ ಹೆಸರು ಇಡಲು ಹೋರಾಟ... ಗಲಭೆ.. ಸಮಾಜದ ಶಾಂತಿ ಕದಡಿ ಹೋಗಿಬಿಡುತ್ತದೆ... ಹೆಸರು ಯಾವುದದರೇನು? ಸೇವೆ ಮುಖ್ಯ..-Artist Mahendra

ಗೊಂದಲಕ್ಕೆ ಅವಕಾಶ ಇಲ್ಲದಂತೆ ಆಗಲಿ

ಗೊಂದಲಕ್ಕೆ ಅವಕಾಶ ಇಲ್ಲದಂತೆ ಆಗಲಿ

ಭವಿಷ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಇರಲು, ಗಿರೀಶ್ ಕಾರ್ನಾಡ್ ರಂಥವರ ಬಾಯಿಗೆ ಬೀಳದಿರಲು ನಮ್ಮ ಮೆಟ್ರೋ ಹೆಸರೇ ಉತ್ತಮ. ಯಾವುದಾದದರೂ ಒಂದು ಪ್ರಮುಖ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಟ್ಟು ಗೌರವ ಸೂಚನೆ ಮಾಡಬಹುದು.-Sangamesh Sangu

ಕನ್ನಡಸ ಸಂಸ್ಕೃತಿ ಕಾಪಾಡಲಿ

ಕನ್ನಡಸ ಸಂಸ್ಕೃತಿ ಕಾಪಾಡಲಿ

ಮೂರು ಮಾರ್ಗಗಳಿಗೆ 3 ಹೆಸರಿರಬೇಕು. ಎಲ್ಲ ನಿಲ್ದಾಣಗಳಿಗೆ ಜ್ಞಾನಪೀಠ ಪುರಸ್ಕೃತರ ಹೆಸರಿಡಬೇಕು. ಉಳಿದವಕ್ಕೆ ಕನ್ನಡದ ರಾಜಜರ ಹೆಸರಿರಬೇಕು. ಇದು ಕನ್ನಡದ ಸಂಸ್ಕೃತಿ ಮತ್ತು ಸಂಪ್ರದಾಯ ಕಾಪಾಡಲು ನೆರವಾಗುತ್ತದೆ.-Lakki Lakshman

English summary
The State Government is open about the name change of "Namma Metro" to " Kempegowda Metro" CM Siddaramaiah said on November 16. After the Statement of CM Siddaramaiah Oneindia Kannada conducted a poll survey on this debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X