RCB Parade in Bengaluru: ಫ್ಯಾನ್ಸ್‌ಗೆ ಸಿಹಿ ಸುದ್ದಿ, ಇಂದು ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಪಡೆಯಿಂದ 'ವಿಜಯಯಾತ್ರೆ'

ಬೆಂಗಳೂರು, ಜೂನ್ 04: ಹದಿನೆಂಟು ವರ್ಷಗಳ ನಿರಂತರ ಸುದೀರ್ಘ ಕನಸನ್ನು ಐಪಿಎಲ್ ಉತ್ತಮ ಬ್ಯಾಟರ್ ವಿರಾಟ್ ಕೊಹ್ಲಿ ಪಡೆ ನನಸು ಮಾಡಿದೆ. ಪಂಜಾಬ್ ಜೊತೆಗಿನ ಅಂತಿಮ ಐಪಿಎಲ್ ಪಂದ್ಯದಲ್ಲಿ ಗೆದ್ದು ಬೀಗಿದೆ. ಕರ್ನಾಟಕ, ಕನ್ನಡಿಗರು ಮಾತ್ರವಲ್ಲದೇ ದೇಶವ್ಯಾಪಿ ಸಂಭ್ರಮಾಚರಣೆ ನಡೆಯುತ್ತಿದೆ. ವಿರಾಟ್ ಕೊಹ್ಲಿ ಸೇರಿದಂತೆ RCB ತಂಡ ಗುಜರಾತ್‌ನಿಂದ ಕರ್ನಾ ಟಕ ರಾಜಧಾನಿ ಬೆಂಗಳೂರಿಗೆ ಇಂದೇ (ಜೂನ್ 04) ಬರಲಿದ್ದಾರೆ. ಕನ್ನಡಿಗರು ಜತೆ, ಲಕ್ಷಾಂತರ ಅಭಿಮಾನಿಗಳ ಜೊತೆ ಸೇರಲಿದ್ದಾರೆ. ಕಿಂಗ್ ಕೊಹ್ಲಿ ಬಾಯ್ಸ್ ನಗರಾದ್ಯಂತ 'ವಿಜಯಯಾತ್ರೆ' ಮಾಡಲಿದ್ದಾರೆ.

IPL 2025 Final Match ನಲ್ಲಿ 06 ರನ್‌ಗಳಲ್ಲಿ ಪಂಜಾಬ್ ಕಿಂಗ್ ವಿರುದ್ಧ ಅಹಮದಾಬಾದ್‌ನಲ್ಲಿ ಗೆದ್ದ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ತಂಡ ಇಂದು ಬೆಂಗಳೂರಿಗೆ ಬರಲಿದೆ. ಆರ್‌ಸಿಬಿ ಚೊಚ್ಚಲ ಕಪ್ ಅನ್ನು ಚಿನ್ನಸ್ವಾಮಿ ಸ್ಟೇಡಿಯಂಗೆ ತರಲಿದೆ. ಸ್ಟೇಡಿಯಂನಲ್ಲಿ ಭಾವುಕರಾಗಿದ್ದ ವಿರಾಟ್ ಕೊಹ್ಲಿ ಪಡೆ ಬೆಂಗಳೂರಲ್ಲಿ ವಿಜಯಯಾತ್ರೆ ನಡೆಸಲಿದೆ. ಇಕನ್ನಡಿಗರು ಆರ್‌ಸಿಬಿ ಬರುವಿಕೆಯನ್ನೇ ಕಾಯುತ್ತಿದೆ. ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸುತ್ತಮುತ್ತ ಜನಜಂಗುಳಿ ಕಂಡು ಬರಲಿದೆ. ಈ ಸಂಭ್ರಮಾಚರಣೆ ಕೆಲವೇ ಕ್ಷಣಗಳು ಬಾಕಿ ಇವೆ..

RCB Virat Kohli Team will Arrive To Bengaluru Chinnaswamy Stadium for Celebration IPL Victory

ವಿಧಾನಸೌಧದಿಂದ ಸ್ಟೇಡಿಯಂವರೆಗೆ ವಿಜಯಯಾತ್ರೆ, ಸಿಎಂ ಭೇಟಿ

ಇಂದು ಬೆಂಗಳೂರಿಗೆ ವಿರಾಟ್ ಕೊಹ್ಲಿ ಪಡೆಯು ಆಗಮಿಸಲಿದ್ದು, ಸಂಭ್ರಮಾಚರಣೆಗೆ ಭರ್ಜರಿ ವೇದಿಕೆ ಸಜ್ಜಾಗುತ್ತಿದೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ವಿಜಯಯಾತ್ರೆ ನಡೆಯಲಿದೆ. ತೆರೆದ ವಾಹನದಲ್ಲಿ ಕನ್ನಡಿಗರಿಗೆ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಆರ್‌ಸಿಬಿ ಟೀ ದರ್ಶನ ನೀಡಲಿದೆ. ಕನ್ನಡಿಗರೊಂದಿಗೆ ಸೇರಿ ಗೆಲುವನ್ನು ಸಂಭ್ರಮಿಸಲಿದೆ.

ವಿಜಯಯಾತ್ರೆ ಆರಂಭಕ್ಕೂ ಮೊದಲು ಸಂಜೆ 04 ಗಂಟೆಗೆ ವಿಧಾನಸೌಧದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಆರ್‌ಸಿಬಿ ತಂಡ ಭೇಟಿ ಮಾಡಲಿದ್ದಾರೆ. ಖುದ್ದು ಅಭಿನಂದಿಸಲಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಕೆಲವು ಹೊತ್ತು ಮಾತನಾಡಲಿದ್ದಾರೆ. ಅಲ್ಲಿಂದ ನೇರ ಸ್ಟೇಡಿಯಂದ ಹೊರಟು ಕ್ರೀಡಾಂಗಣದಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಮುಗಿಲು ಮುಟ್ಟುವಂತೆ ಕೋಟ್ಯಾಂತರ ರೂಪಾಯಿ ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ. ಈ ಸಂಬಂಧ ಕಬ್ಬನ್ ಉದ್ಯಾನ, ಲಾಲ್ ಬಾಗ್, ಅಂಬೇಡ್ಕರ್ ಬೀದಿ, ಎಂಜಿ ರಸ್ತೆ, ಬಿಬಿಎಂಪಿ ವೃತ್ತ ಸೇರಿದಂತೆ ಚಿನ್ನಸ್ವಾಮಿ ಸ್ಟೇಡಿಯಂದ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ.

ಆರ್‌ಸಿಬಿ ಅಭಿಮಾನಿಗಳು ವೇಳಾಪಟ್ಟಿ ಗಮನಿಸಿ

ಐಪಿಎಲ್ 2025 ರ ವಿಜೇತರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೆಂಗಳೂರಿಗೆ ಬರಲಿದ್ನದು, ಅವರಿಗಾಗಿ ಆಯೋಜಿಸಲಾದ ಹಲವಾರು ಸಂಭ್ರಮಾಚರಣೆಗಳಲ್ಲಿ ಭಾಗವಹಿಸಲಿದ್ದೆದಾರೆ. ಅವರ ಆಗಮನ, ಮಾರ್ಗ ಇಂದಿನ ವೇಳಾಪಟ್ಟಿ ವಿವರ ಇಲ್ಲಿದೆ.

* ಅಹಮದಾಬಾದ್ ವಿಮಾನ ನಿಲ್ದಾಣದಿಂದ ನಿರ್ಗಮನ: ಇಂದು ಬೆಳಗ್ಗೆ 10 ಗಂಟೆಗೆ

* ಬೆಂಗಳೂರಿನಲ್ಲಿ ಆಗಮನ: ಮಧ್ಯಾಹ್ನ 1:30

* ಸ್ಥಳ: ಎಚ್‌ಎಎಲ್ ವಿಮಾನ ನಿಲ್ದಾಣ, ಬೆಂಗಳೂರು

* ಕರ್ನಾಟಕದ ಮುಖ್ಯಮಂತ್ರಿಗಳ ಭೇಟಿ: ಇಂದು ಸಂಜೆ 4 ಸಂಜೆ 5 ಗಂಟೆಗೆ

* ಸ್ಥಳ: ವಿಧಾನಸೌಧ

* ವಿಜಯಯಾತ್ರೆ ಮೆರವಣಿಗೆ: ಸಂಜೆ ಸುಮಾರ 5 ಗಂಟೆಯಿಂದ (ಮುಖ್ಯಮಂತ್ರಿ ಭೇಟಿಯ ನಂತರ)

* ಮಾರ್ಗ: ವಿಧಾನಸೌಧದಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್ ಮೂಲಕ
ತಂಡವು ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ಸಾರ್ವಜನಿಕ ಮೆರವಣಿಗೆಯಲ್ಲಿ ಮುಂದುವರಿಯಲಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+